ಫೆ.10 ರಂದು ನೂತನ ಶಿವಮೊಗ್ಗ ಬಂಟರ ಭವನ" ಕಟ್ಟಡದ ಉದ್ಘಾಟನಾ ಸಮಾರಂಭ: ಸಂಘದ ಅಧ್ಯಕ್ಷರಾದ ಡಾ.ಎ. ಸತೀಶ್ ಕುಮಾರ್ ಶೆಟ್ಟಿ ಮಾಹಿತಿ

ಶಿವಮೊಗ್ಗದಲ್ಲಿ ಗೋಪಾಲಗೌಡ ಬಡಾವಣೆಯಲ್ಲಿ ಬಿ ಬ್ಲಾಕ್ 100 ಅಡಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ "ಶಿವಮೊಗ್ಗ ಬಂಟರ ಭವನ" ಕಟ್ಟಡದ ಉದ್ಘಾಟನಾ ಸಮಾರಂಭವು ಫೆಬ್ರವರಿ 10, ಶನಿವಾರ ಸಂಜೆ 4 ಗಂಟೆಗೆ ರಂದು ಜರುಗಲಿದೆ ಎಂದು ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘ ಅಧ್ಯಕ್ಷರಾದ ಡಾ.ಎ. ಸತೀಶ್ ಕುಮಾರ್ ಶೆಟ್ಟಿ ಹೇಳಿದರು.
ಇಂದು ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ "ಶಿವಮೊಗ್ಗ ಬಂಟರ ಭವನ" ಕಟ್ಟಡದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಶಿವಮೊಗ್ಗ ಬಂಟ ಸಮಾಜದ ಬಹು ವರ್ಷಗಳ ಕನಸು ಪೂರ್ಣವಾಗಿ ನನಸಾಗುವ ಕಾಲ ಇದೀಗ ಕೂಡಿಬಂದಿದೆ* ಭಗವಂತನ ಅನುಗ್ರಹ, ದಾನಿಗಳ ಅಭೂತಪೂರ್ವ ಸಹಕಾರ ಮತ್ತು ಹಿರಿಯರ ಆಶೀರ್ವಾದದಿಂದ ಅತ್ಯಂತ ಪರಿಶ್ರಮದಿಂದ ರೂಪುಗೊಂಡ ಕಟ್ಟಡ ವಾಗಿದೆ ಎಂದರು.

ಸುಮಾರು 25 ಸಾವಿರದ 100 ಚದರ ಅಡಿ ಜಾಗದಲ್ಲಿ ಸಿಎ ಸೈಟ್ ನಿವೇಶನದಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ  ಶಿವಮೊಗ್ಗ ಬಂಟರ ಭವನ ನಿರ್ಮಾಣಗೊಂಡಿದೆ.ಹಾಲ್‌ನಲ್ಲಿ 800 ಅಸನದ ವ್ಯವಸ್ಥೆ ಇದೆ.12 ರೂಂ ಇದೆ.ಎಸಿ ಸೆಂಟ್ರಲ್ ಹಾಲ್ ಆಗಿದೆ. 600 ಜನರು ಭೋಜನ ಹಾಲ್ ನಲ್ಲಿ ಕೂತು ಊಟ ಮಾಡಬಹುದು.ವಾಹನದ ಪಾರ್ಕಿಂಗ್ ವ್ಯವಸ್ಥೆ ಇದೆ.ಭವನದ ಬಾಡಿಗೆ ರೂ 1,90,000/- ಎಲೆಕ್ಟ್ರಿಕ್ ಚಾರ್ಜ್ ಮತ್ತು ಇತರೇ ಕ್ಲೀನಿಂಗ್ ಎಲ್ಲಾ ಸೇರಿ ಸುಮಾರು ರೂ.2,20,000 ಖರ್ಚು ವೆಚ್ಚ ಆಗಲಿದೆ ಎಂದರು.

ಸರ್ಕಾರದಿಂದ 4 ವರೆ ಕೋಟಿ ಅನುದಾನ ಸಿಕ್ಕಿದೆ. ಬಂಟರ ಸಮಾಜದ ಪ್ಪ್ರರಮುಖರಾದ ಪ್ತಕಾಶ್ ಶೆಟ್ಟಿ MRG Group ಬೆಂಗಳೂರು ಇವರು 50 ಲಕ್ಷ ಮತ್ತು ಶಿವಮೊಗ್ಗದ ಮಂಜುನಾಥ ಬಂಡಾರಿ ಇವರು 50 ಲಕ್ಷ ಹಣ ಭವನದ ನಿರ್ಮಾಣಕ್ಕೆ ಕೊಟ್ಟಿರುತ್ತಾರೆ ಎಂದರು.

ರಾಜಕೀಯ ಪ್ರಮುಖರು, ಬಂಟ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಸಮಾಜದ ಇತರೆ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.

*ಈ ಸಮಾರಂಭವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಿಕೊಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಆಗಾಗಿ ಕಾರ್ಯಕ್ರಮದ ಯಶಸ್ಸಿಗೆ ಸಿದ್ದತೆಗಳು ಈಗಾಗಲೇ ಪ್ರಾರಂಭಗೊಂಡಿವೆ ಎಂದರು.

ಸಮಾಜದ ಎಲ್ಲಾ ಸದಸ್ಯರಿಗೆ ಆಹ್ವಾನ ಪತ್ರಿಕೆಯನ್ನು ತಲುಪಿಸುವ ಪ್ರಯತ್ನ ಮಾಡಲಾಗಿದೆ. ಆಹ್ವಾನ ಪತ್ರಿಕೆ ತಲುಪದೇ ಇರುವವರು ಫೆಬ್ರವರಿ 10 ನೇ ತಾರೀಖು ಉದ್ಘಾಟನೆ ಕಾರ್ಯಕ್ರಮಕ್ಕೆ ಸಕುಟುಂಬ ಸಮೇತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕೆಂದು ಕೋರಿದರು.

"ಎಲ್ಲರಿಗಾಗಿ ತಾನು ತನಗಾಗಿ ಎಲ್ಲರೂ' ಎಂಬ ಮಾತಿಗೆ ತಕ್ಕಂತೆ, ಕರ್ನಾಟಕದ ಕರಾವಳಿ ತೀರದಿಂದ ವ್ಯವಹಾರ, ಉದ್ಯೋಗಗಳ ನಿಮಿತ್ತ ಮಲೆನಾಡಿನ ತವರೂರಾದ ಶಿವಮೊಗ್ಗದಲ್ಲಿ ನೆಲೆಸಿ, ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಹೊಂದಿರುವ ಬಂಟ ಸಮುದಾಯವು ಗೌರವಯುತ ಜೀವನವನ್ನು ನಡೆಸಿಕೊಂಡು ಬರುತ್ತಿದೆ. ಬಂಟರು ತಾವು ನೆಲೆಸಿರುವ ಯಾವುದೇ ಪ್ರದೇಶದಲ್ಲಿ ತಮ್ಮ ತೆರೆದ ಮನಸ್ಸಿನಿಂದ ಸುತ್ತಲಿನ ಸಮಾಜದೊಂದಿಗೆ ಬೆರೆತು ಬಾಳುವ ಹೃದಯವಂತಿಕೆ ಉಳ್ಳವರು, ಧೈರ್ಯ, ಸಾಹಸ, ಉದ್ಯಮಶೀಲತೆ, ನಾಯಕತ್ವದ ಗುಣ, ಸಂಸ್ಕೃತಿ, ಪರಂಪರೆಗಳ ಪಾಲನೆ, ಸೇವೆ, ಸತ್ಕಾರ ಔದಾರ್ಯತೆ, ಒಗ್ಗಟ್ಟು, ಸ್ವಾಭಿಮಾನದ ಗುರುತಿನೊಂದಿಗೆ ಬಂಟ ಸಮುದಾಯವು ಸ್ಥಳೀಯ ಮಟ್ಟದಿಂದ ವಿಶ್ವ ಮಟ್ಟದವರೆಗೆ ತನ್ನ ವಿಶಿಷ್ಟ ಛಾಪನ್ನು ಮೂಡಿಸಿದೆ ಎಂದರು.
1983ರಲ್ಲಿ ಜನ್ಮ ತಾಳಿದ ಶಿವಮೊಗ್ಗ ಬಂಟರ ಸಂಘವು ಸಮುದಾಯದ ಸದಸ್ಯರ ಕ್ಷೇಮಾಭಿವೃದ್ಧಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ನೀಡಲಾಗುತ್ತದೆ. ಬಂಟರ ಭವನದಿಂದ ಬಂದ ಆದಾಯದಲ್ಲಿ ಶೇ 10% ಹಣವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ ಶಿಬಿರಗಳಿಗೆ ಮೀಸಲಿಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗದ ಎಲ್ಲಾ ಪಧಾದಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.