ಬರಗಾಲದ ಹಿನ್ನೆಲೆ-ಸುಸ್ಥಿದಾರರಿಗೆ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕೃಷಿ -ಸಂಬಂಧಿತ ಸಾಲಗಳ ಬಡ್ಡಿ ಮನ್ನಾ; ಡಿಸಿಸಿ ಬ್ಯಾಂಕ್ ಅಧ್ಯಕ್ಷ RMM
ಶಿವಮೊಗ್ಗ: ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಹಿನ್ನಲೆಯಲ್ಲಿ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕೃಷಿ ಸಾಲ ಪಡೆದು ಸಾಲ ಮರುಪಾವತಿಸಲು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವುದರಿಂದ
ರೈತರು ಬ್ಯಾಂಕಿನಿಂದ ಹಾಗೂ ಪ್ಯಾಕ್ಸ್‌ಗಳ ಮುಖಾಂತರ ಮಧ್ಯಮಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳನ್ನು ಪಡೆದು ದಿನಾಂಕ.31-12-2023 ಕ್ಕೆ ಸುಸ್ತಿಯಾಗಿರುವ ಕಂತುಗಳ ಅಸಲನ್ನು ದಿ.29-02-2024 ರೊಳಗೆ ಸಂಬಂಧಪಟ್ಟ ಬ್ಯಾಂಕ್/ಪ್ಯಾಕ್ಸ್‌ಗಳಗೆ ಮರುಪಾವತಿಸಿದಲ್ಲಿ ಬಾಕಿ ಇರುವ ಬಡ್ಡಿ ಮನ್ನಾ ಯೋಜನೆಯನ್ನು ಸುಸ್ತಿದಾರರಾದ ರೈತರನ್ನು ಋಣಮುಕ್ತರನ್ನಾಗಿ ಮಾಡುವ ಸಲುವಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿದೆ ಎಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಶಿವಮೊಗ್ಗ ಬ್ಯಾಂಕಿನ ಅಧ್ಯಕ್ಷರಾದ ಡಾ|| ಆರ್. ಎಂ. ಮಂಜುನಾಥ ಗೌಡರ ಹೇಳಿದರು.
ಇಂದು ಬೆಳಿಗ್ಗೆ ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ನಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.
1. ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಬಡ್ಡಿ ಮನ್ನಾ:
ಈ ಬಗ್ಗೆ ಸುಸ್ತಿದಾರರಿಗೆ ಬ್ಯಾಂಕ್/ಪ್ಯಾಕ್ಸ್‌ಗಳಿಂದ ತಿಳುವಳಿಕೆ ಪತ್ರವನ್ನು ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಅಸಲನ್ನು ಮರುಪಾವತಿಸುವ ಮೂಲಕ ಸದರಿ ಯೋಜನೆಯ ಸದುಪಯೋಗ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
2. ರಾಜಿ ಸಂಧಾನ ಇತ್ಯರ್ಥ:-
ಬ್ಯಾಂಕಿನ ಎಲ್ಲಾ ಕ್ರಮಗಳ ಹೊರತಾಗಿಯೂ ವಸೂಲಾಗದಿರುವ ಅನುತ್ಪಾದಕ ಸಾಲಗಳನ್ನು (ಎನ್.ಪಿ.ಎ) ರಾಜಿ ಸಂಧಾನ ಇತ್ಯರ್ಥದ ಮೂಲಕ ವಸೂಲಾತಿ ಮಾಡಿ ಬ್ಯಾಂಕಿನ ಆರ್ಥಿಕ ಸದೃಡತೆ ಹೆಚ್ಚಿಸುವ ಉದ್ದೇಶದಿಂದ ಈ ಕೆಳಕಂಡ ಷರತ್ತುಗಳೊಂದಿಗೆ ಜಾರಿಗೊಳಿಸಲಾಗಿದೆ.
> ಮಾರ್ಚ್-2023 ಅಂತ್ಯಕ್ಕೆ ವರ್ಷಗಳಾಗಿರಬೇಕು).
ಸಾಲವು ಎನ್.ಪಿ.ಎ ಆಗಿರಬೇಕು (ಸಾಲ ಸುಸ್ತಿಯಾಗಿ ಕನಿ ಕನಿಷ್ಟ 3
ಈ ಯೋಜನೆಯು ಪಡಿವ್ಯಕ್ತಿಗಳು, ಸಹಕಾರ ಸಂಘಗಳು, ಸ್ವ-ಸಹಾಯ ಗುಂಪುಗಳು ಇತರೆ ಸಂಸ್ಥೆಗಳು ಪಡೆದಿರುವ ಎಲ್ಲಾ ರೀತಿಯ ಕೃಷಿ ಮತ್ತು ಕೃಷಿಯೇತರ ಸಾಲಗಳಗೆ ಷರತ್ತಿಗೊಳಪಟ್ಟು ಅನ್ವಯವಾಗುತ್ತದೆ. > ಸುಸ್ತಿ ಸಾಲದ ಪ್ರಕರಣವು ನ್ಯಾಯಾಲಯದ ಮುಂದಿದ್ದು, ಇತ್ಯರ್ಥವಾಗದೆ ಮುಂದುವರೆದಿದ್ದಲ್ಲ, ಸದರಿ ನ್ಯಾಯಾಲಯದ ಒಪ್ಪಿಗೆ ತೀರ್ಪು (Consent Decree) ಪಡೆಯಬೇಕು.
> ರಾಜಿ ಸಂಧಾನ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸುವವರು ಸಾಲ ಬಾಕಿಯ (ಡಿಮ್ಯಾಂಡ್‌ನಲ್ಲಿರುವ ಬಡ್ಡಿ ಹೊರತುಪಡಿಸಿ) ಕನಿಷ್ಟ ಶೇ.50% ರಷ್ಟನ್ನು ಶಾಖೆಯ ಅಮಾನತ್ ಖಾತೆಗೆ ಜಮಾ ಮಾಡಬೇಕು ಎಂದರು.
3. ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ:-
> 2023-24 ನೇ ಸಾಲಿನ ನೋಂದಣಿ ದಿನಾಂಕ.01.12.2023 ರಿಂದ ಪ್ರಾರಂಭವಾಗಿದ್ದು,
ದಿನಾಂಕ.31.01.2024 ರವರೆಗೆ ಮುಂದುವರೆಯಲಿದೆ.
ಕಳೆದ ಸಾಅನಂತೆ ಗ್ರಾಮೀಣ/ನಗರ ಸಹಕಾರ ಸಂಘಗಳ ಸದಸ್ಯರಿಗೆ ಗರಿಷ್ಟ 4 ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.500/- ಮತ್ತು ರೂ.1000/- ಅನುಕ್ರಮವಾಗಿ ವಂತಿಕೆಯನ್ನು ನಿಗದಿಪಡಿಸಲಾಗಿದೆ. > ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಸದಸ್ಯರ ಸದಸ್ಯತ್ವದ ವಂತಿಕೆಯನ್ನು ಸರ್ಕಾರವೇ ಭರಿಸುತ್ತದೆ. 2023-24 ನೇ ಸಾಲಿನ ಚಿಕಿತ್ಸಾ ಅವಧಿಯನ್ನು ಎಪ್ರಿಲ್-24 ರಿಂದ ಮಾರ್ಚ್-2025 ರವರೆಗೆ
ನಿಗದಿಪಡಿಸಲಾಗಿದೆ ಎಂದರು.
2022-23 ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು ರೂ.47.00 ಲಕ್ಷ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ರೂ.2.33 ಲಕ್ಷ ಸದಸ್ಯರನ್ನು ನೊಂದಾಯಿಸಲಾಗಿದೆ. ಈ ಪೈಕಿ ಸುಮಾರು 36500 ರೋಗಿಗಳು ರೂ.61 ಕೋಟಿ ಮೊತ್ತದ ಚಿಕಿತ್ಸೆಯನ್ನು ಪಡೆದಿರುತ್ತಾರೆ ಎಂದರು.
ನಿಗಮಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ನಾನು ಅಕಾಂಕ್ಷಿ ಅಲ್ಲ:RMM
ನಿಗಮಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ನಾನು ಅಕಾಂಕ್ಷಿ ಅಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ನಿಗಮ ಮಂಡಳಿ ಕೊಡುವುದಾಗಿ ಸಿಎಂ ಮತ್ತು ಡಿಸಿಎಂ ಭರವಸೆ ನೀಡಿದ್ದರು. ಪಕ್ಷ ಗುರುತಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೂ ಸಂತೋಷ ನೀಡದಿದ್ದರೂ ಸಂತೋಷ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನನಿರ್ದೇಶಕರಾದ ಯೋಗೀಶ್, ದುಗ್ಗಪ್ಪ ಗೌಡ, ಬ್ಯಾಂಕ್ ಮ್ಯಾನೇಜರ್ ವಾಸುದೇವ್ ಮೊದಲಾದವರು ಉಪಸ್ಥಿತರಿದ್ದರು.
Leave a Comment