ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !


ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ
ಈ ಸಂಧರ್ಭದಲ್ಲಿ ಶಿವಮೊಗ್ಗದಲ್ಲಿ - ಅಂಬಾಭವಾನಿ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷರಾದ ಶ್ರೀ. ರಮೇಶ್ ಚೌಹಾಣ್, ಈಶ್ವರ ದೇವಸ್ಥಾನ ಕಾರ್ಯದರ್ಶಿ ಪರಿಸರ ರಮೇಶ್, ಶ್ರೀ ಮಂಜಯ್ಯ ನಂಜುಂಡೇಶ್ವರ ದೇವಸ್ಥಾನದ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್‌ನ ಶ್ರೀ ಜಗದೀಶ್, ಶಿವಮೊಗ್ಗದ ಹಿಂದೂಜನಜಾಗೃತಿ ಮುಕುಂದ್ ಹಾಜರಿದ್ದರು.
  
ಶಿವಮೊಗ್ಗ : 2023 ಇಸವಿ 29 ಡಿಸೆಂಬರ್ ದಂದು ಮಾರ್ಗಶಿರ ಹುಣ್ಣಿಮೆಯಂದು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ ಅಂಧಕಾಸುರನ ಸಂಹಾರ ಧಾರ್ಮಿಕ ಕಾರ್ಯಕ್ರಮವನ್ನು ನೆರೆವೇರಿಸುವ ಸಂದರ್ಭದಲ್ಲಿ ಕೆಲವು ಮುಷ್ಕರ್ಮಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ 2 ಜನವರಿ 2024 ರ ಮಂಗಳವಾರದಂದು ಕರ್ನಾಟಕ ದೇವಸ್ಥಾನ - ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಡಾ|| ಸೆಲ್ವಮಣಿ ಆರ್. ಮತ್ತು ಶಿಕಾರಿಪುರ, ಸಾಗರ, ತೀರ್ಥಹಳ್ಳಿಯ ತಹಶಿಲ್ದಾರರ ಮೂಲಕ ಹಾಗೂ ದಾವಣಗೆರೆ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿಕಾರಿಪುರದಲ್ಲಿ - ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರಾದ  ವಿ. ರಾಮಣ್ಣ, ವಿ. ರಘು, ವೀರಶೈವ ಪುರೋಹಿತ ಅರ್ಚಕರ ಸಂಘದ ಅಧ್ಯಕ್ಷರಾದ ಶ್ರೀ. ಪ್ರಭುಸ್ವಾಮಿ ಆರಾಧ್ಯಮಠ, ಸವಿತ ಯುವಕ ಸಂಘದ ಅಧ್ಯಕ್ಷರಾದ ಎಸ್. ಮಧುಕುಮಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಜುನಾಥ್, ಬಿ. ವಿ. ಮಹಾಂತಯ್ಯ, ಶಿವಯ್ಯ ಎನ್ ಶಾಸ್ತ್ರೀ, ಹಾಜರಿದ್ದರು.

  ಈ ಘಟನೆಯ ನಂತರ ಅನೇಕ ಹಿಂದೂ ವಿರೋಧಿಗಳು ಶ್ರೀ ಶ್ರೀಕಂಠೇಶ್ವರ ದೇವರ ಬಗ್ಗೆ ಅತ್ಯಂತ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹಾಕಿ ಅಪಮಾನ ಮಾಡಿದ್ದಾರೆ. ನಾಗೇಶ್ ಬಿಎಮ್ ಎನ್ನುವವರು ತಮ್ಮ ಪೇಸ್ ಬುಕ್ ಖಾತೆಯಲ್ಲಿ “ಕಬಿನಿ ನದಿಯಲ್ಲಿ ಜಳಕವಾಡುವ ೯೦% ಅಧಿಕ ಹೆಚ್ಚು ಜನ ಉಚ್ಚೆ ಉಯ್ಯುತ್ತಾರೆ. ನದಿಯುದ್ದಕ್ಕೂ ವಾಸವಿರುವ ಜನ ತಿಕ ತೊಯ್ಯುತ್ತಾರೆ ಧನ ಮತ್ತು ಬಟ್ಟೆ ತೊಳೆಯುತ್ತಾರೆ, ಅದೇ ನೀರನ್ನು ದಿನನಿತ್ಯ ಅರ್ಚಕರು ತಂದು ನಂಜುಂಡನಿಗೆ ಅಭಿಷೇಕ ಮಾಡುತ್ತಾರೆ. ನೀರನ್ನು ಎರಚಿದರು ಸಹ ನಂಜುಂಡನಿಗೇಕೆ ಮೈಲಿಗೆಯಾಗುತ್ತದೆ?” ಎಂದು ಕೆಟ್ಟದಾಗಿ ಭಕ್ತರ ಭಾವನೆಗೆ ಘಾಸಿಯಾಗುವ ರೀತಿಯಲ್ಲಿ, ಶ್ರೀ ನಂಜುಂಡೇಶ್ವರ ದೇವರಿಗೆ ಅಪಮಾನವಾಗುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. 
ತೀರ್ಥಹಳ್ಳಿಯಲ್ಲಿ - ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರಾದ ಕೆರೋಡಿ ಮೋಹನ್, ರಾಮೇಶ್ವರ ನಿತ್ಯ ಅನ್ನಸಂತರ್ಪಣೆ ಸಮಿತಿ ಅಧ್ಯಕ್ಷರಾದ ಜೀವಂದರ್ ಜೈನ್, ಶ್ರೀ ಮಹಿಷಮರ್ದಿನಿ ದುರ್ಗಾ ಪರಮೇಶ್ವರಿ ದೇವಸ್ಥಾನ ಕೌದಳ್ಳಿ ಅಧ್ಯಕ್ಷ ರಾದ ಮೂರ್ತಿ. ಕೆ,ಹಾಜರಿದ್ದರು.
ಇವರ ಮೇಲೂ ಸಹ ಕಾನೂನು ಕ್ರಮ ಜರುಗಿಸಬೇಕು, ರಾಜ್ಯ ಸರಕಾರ ಕೂಡಲೇ ಎಚ್ಚೆತ್ತು ಈ ರೀತಿ ಉತ್ಸವಕ್ಕೆ ಅಡ್ಡಿಪಡಿಸಿದ ಅಪರಾಧಿಗಳನ್ನು ಕೂಡಲೇ ಬಂಧನ ಮಾಡಿ ಅವರಿಗೆ ತಕ್ಕ ಶಾಸ್ತಿಯನ್ನು ನೀಡಬೇಕು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಜರುಗಿಸಬೇಕು‘ ಎಂದು ಮನವಿಯ ಮೂಲಕ ಆಗ್ರಹಿಸಲಾಗಿದೆ.ಸಾಗರದ ವಕೀಲರಾದ ಶ್ರೀ. ಸುದರ್ಶನ್, ಶ್ರೀ ಪ್ರವೀಣ್, ರವೀಶ್, ರಾಘವೇಂದ್ರ ಮಠದ ಶ್ರೀ. ಗಣಪತಿ ಭಟ್,
ಶಾರದಾಂಬಾ ದೇವಸ್ತಾನದ ಶ್ರೀ ಕೃಷ್ಣಮೂರ್ತಿ ವಾಮನಾಚಾರ್,ಹಾಜರಿದ್ದರು.
ದಾವಣಗೆರೆಯಲ್ಲಿ - ಹಿಂದೂ ರಾಷ್ಟ್ರಸೇನೆಯ ರಾಜ್ಯ ಪ್ರವಕ್ತರಾದ ಶ್ರೀ. ಸಂದೀಪ್ ಜಿ, ಹರಿಹರ ಅರ್ಚಕ ಸಂಘದ ಅಧ್ಯಕ್ಷರಾದ ವೆಂಕಟಚಾರ್, ಶ್ರೀ ದತ್ತಾತ್ರೇಯ ಸ್ವಾಮಿ ಸೇವೆ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ. ರಾಘವೇಂದ್ರ ಎಸ್ ಅಂಗಡಿ ಭಜರಂಗದಳದ ಶ್ರೀ. ಮಲ್ಲೇಶ್ ಮತ್ತು ಹಿಂದೂ ರಾಷ್ಟ್ರ ಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.




ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.