ಕರಕುಶಲ ಸಂಸ್ಕ್ರತಿಗೆ ಕಿಶನ್ ಹ್ಯಾಂಡಿಕ್ರಾಫ್ಟ್ಸ್ ಕೊಡುಗೆ ಅಪಾರ: ಸಂಸದ ಬಿ.ವೈ. ರಾಘವೇಂದ್ರ

 ಶಿವಮೊಗ್ಗ:ಶಿವಮೊಗ್ಗದಲ್ಲಿ ನೆಹರೂ ರಸ್ತೆಯಲ್ಲಿ ಪ್ರಾರಂಭಗೊಂಡ  ಕಿಶನ್ ಸಮೂಹ ಸಂಸ್ಥೆಗಳ ನೂತನ ಉದ್ಯಮ “ಕಿಶನ್ ವರ್ಲ್ಡ್ ಆಫ್ ಹ್ಯಾಂಡಿಕ್ರಾಫ್ಟ್ಸ್” ಉದ್ಘಾಟಿಸಿ ಮಾತನಾಡಿದ ಸಂಸದರು ಕಿಶನ್ ಹ್ಯಾಂಡಿಕ್ರಾಫ್ಟ್ಸ್ ಸಂಸ್ಥೆ ತನ್ನ ವಿನೂತನ ಮತ್ತು ವಿಶಿಷ್ಟ ಕರಕುಶಲ ಕಲಾಕೃತಿಗಳಿಗೆ ದೇಶ-ವಿದೇಶದಾದ್ಯಂತ ಖ್ಯಾತಿ ಗಳಿಸಿದೆ. ಈ ಸಂಸ್ಥೆಯ ಕಾರ್ಯವೈಖರಿ ಕಳೆದ 40 ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂಸ್ಥೆ ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು. 

ದಿವ್ಯಸಾನಿಧ್ಯ ವಹಿಸಿದ್ದ ಡಾ॥ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರು ಮಾತನಾಡಿ ಕಲಾವಿದನ ತಾಳ್ಮೆ ಅಗಾಧವಾದದ್ದು. ಅತ್ಯಂತ ಪರಿಶ್ರಮದಿಂದ ತಯಾರಾಗುವ ಕಲಾಕೃತಿಗಳು ಕಲಾಭಿಮಾನಿ ಗ್ರಾಹಕರುಗಳಿಗೆ ಸೂಕ್ತ ಬೆಲೆಯೊಂದಿಗೆ ತಲುಪಿದಾಗ ಮಾತ್ರ ಕಲಾವಿದನ ಪರಿಶ್ರಮಕ್ಕೆ ಬೆಲೆ ಸಿಕ್ಕಂತೆ. ಅಂತಹ ಅಪರೂಪದ ಕಾರ್ಯವನ್ನು ಕಿಶನ್ ಹ್ಯಾಂಡಿಕ್ರಾಫ್ಟ್ಸ್ ಪಾಲಿಸಿಕೊಂಡು ಬಂದಿದೆ ಎಂದು ಆಶೀರ್ವಚನ ನೀಡಿದರು. 

ಶಿವಮೊಗ್ಗ ನಗರ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ, ಮೇಲ್ಮನೆ ಶಾಸಕರಾದ ಶ್ರೀ ಡಿ. ಎಸ್. ಅರುಣ್, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಶ್ರೀ ಎನ್. ಗೋಪಿನಾಥ್, ನೆಹರೂ ರಸ್ತೆ ವರ್ತಕರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಎ.ರಂಗನಾಥ್ ಮತ್ತು ಕಿಶನ್ ಸಮೂಹ ಸಂಸ್ಥೆಗಳ ಪಾಲುದಾರರಾದ ಶ್ರೀ ರವಿಕಿಶನ್, ಶ್ರೀ ಬಿ. ಆರ್. ಸುಭಾಷ್, ಶ್ರೀ ಬಿ. ಆರ್ ಸಂತೋಷ್ ಮತ್ತು ಕಿಶನ್ ಕುಟುಂಬವರ್ಗದವರು ಮತ್ತು ಕಿಶನ್ ಸಮೂಹದ ಸಿಬ್ಬಂದಿವರ್ಗ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.