ಶ್ರೀರಾಮ ಮಂದಿರದ ಲೋಕಾರ್ಪಣೆ: ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಲ್ಲಿ ಧ್ಯಾನ ಸತ್ಸಂಗ

ಶಿವಮೊಗ್ಗ: -ಬ್ರಹ್ಮಾಕುಮಾರೀಸ್
*ಸದ್ಭಾವನಾ ಸಂಕಲ್ಪ*
ದಿವ್ಯ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ದೇವಭೂಮಿ ಭಾರತದ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರದ ಲೋಕಾರ್ಪಣೆಯ ಸುಸಂದರ್ಭದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ಸಂಸ್ಥೆಯಲ್ಲಿ ಧ್ಯಾನ ಸತ್ಸಂಗ ನಡೆಯಿತು.
ಸನಾತನ  ಧರ್ಮದ 33 ಕೋಟಿ ದೇವತೆಗಳು ನಮ್ಮ ಪೂಜ್ಯರು-ಪೂರ್ವಜರು .
ಇಂದು ಪೂಜ್ಯ ಶ್ರೀರಾಮನ ಅಲೆಯು ಐಕ್ಯತಾ ಭಾವ ಮೂಡಿಸಿದೆ. “ವಸುದೈವ ಕುಟುಂಬಕಂ” ಎಂಬ ಭ್ರಾತೃಭಾವದ ಔದಾರ್ಯ ಕಾಣುತ್ತಿದೆ , ನಾವೆಲ್ಲರೂ ಮರ್ಯಾದಾ ಪುರಷೋತ್ತಮನ ಆದರ್ಶಗಳನ್ನು ಅನುಸರಿಸೋಣ ಎಂದು ಶ್ರೀರಾಮಜೋತಿ ಬೆಳಗಿಸಿದ ಸಂಸ್ಥೆಯ ಮುಖ್ಯಸ್ಥರಾದ ರಾಜಯೋಗಿನಿ ಅನಸೂಯಕ್ಕ ನುಡಿದರು.

ಇದೇ ಸಂದರ್ಭದಲ್ಲಿ ಸದ್ಭಾವನೆ, ಸೋದರತ್ವದ ಆತ್ಮಜಾಗೃತಿಯೊಂದಿಗೆ ರಾಮರಾಜ್ಯದ ಸಂಕಲ್ಪವನ್ನು ಎಲ್ಲರೂ ಸಾಮೂಹಿಕವಾಗಿ ಕೈಗೊಂಡರು.ನಂತರ
ಪ್ರಸಾದ ವಿತರಿಸಲಾಯಿತು.

ಸಂಸ್ಥೆಯ ಅನ್ನಪೂರ್ಣಕ್ಕ, ಮಂಜಪ್ಪ , ಚೆನ್ನಮ್ಮ, ವಿಜಯಕುಮಾರ, ಪ್ರಭಾವತಿ ಇನ್ನಿತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.