ಶಿವಮೊಗ್ಗ ಸಂಸದರು ಡಬಲ್ ಸ್ಟ್ಯಾಂಡರ್ಡ್:ಸಚಿವ ಮಧುಬಂಗಾರಪ್ಪ ಅಟ್ಯಾಕ್....

ಶಿವಮೊಗ್ಗ:  ಶಿವಮೊಗ್ಗ ಸಂಸದರು ಡಬಲ್ ಸ್ಟ್ಯಾಂಡರ್ಡ್... ಇವರು ಮೊನ್ನೆ  ಭಾಗವಹಿಸಿದ ಯುವನಿಧಿ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯಕ್ರಮ ಎಂದು ಸಿ.ಎಂ. ಸಿದ್ದರಾಮಯ್ಯರವರನ್ನ  ಹೊಗಳಿದ್ದಾರೆ.ಅಭಿನಂದನೆ ಸಲ್ಲಿಸಿದ್ದಾರೆ. ಜನಸ್ಥೋಮಕ್ಕೆ ಹೆದರಿ ಅಲ್ಲಿ ಏನು ಹೇಳದೇ ಇದೀಗ ಮಾರನೇ ದಿವಸ ತೆಗಳುತ್ತಿರುವುದು ಎಷ್ಟುಸರಿ... ಇವರದು ಏನಿದ್ದರೂ ಧರ್ಮ ಆಧರಿತ ಕಾರ್ಯಕ್ರಮ.ಸಂಸದ ರಾಘವೇಂದ್ರರವರೇ ನಿಮ್ಮ‌ಅವಧಿಯಲ್ಲಿ ಈ ತರಹದ ಒಂದು ಕಾರ್ಯಕ್ರಮ ಮಾಡಿರುವುದನ್ನ ತಿಳಿಸಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.ಈ ಬಗ್ಗೆ  ನಾನು ಚರ್ಚೆಗೆ ಸಿದ್ದ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.

ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಇಂದು ಬೆಳಿಗ್ಗೆ ಶಿವಮೊಗ್ಗದಲ್ಲಿ ವಿನೋಬನಗರ ಮನೆಯ ಹತ್ತಿರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ರವರು ಶಿವಮೊಗ್ಗದಲ್ಲಿ
ಮೊನ್ನೆ ಐತಿಹಾಸಿಕ ಯುವನಿಧಿ ಕಾರ್ಯಕ್ರಮ ಯಶಸ್ವಿಯಾಗಿ ಶಿವಮೊಗ್ಗದಲ್ಲಿ ನಡೆದಿದೆ. 5 ಗ್ಯಾರಂಟಿ  ಯೋಜನೆ ಗಳು ಸಹ ಕಾರ್ಯರೂಪಕ್ಕೆ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. 

ಶಿವಮೊಗ್ಗದಲ್ಲಿ ಇತ್ತೀಚೆಗೆ  ಕೆಂಪು ಶಾಲು ಹಾಕಿಕೊಂಡು ಸಂಸದರು ಸೇತುವೆ ಉದ್ಗಾಟನೆ ಮಾಡಿದ್ದಾರೆ. ಇದೀಗ ಸರ್ಕಾರ ಬದಲಾವಣೆಯಾಗಿದೆ. ಇದೀಗ ಬಂಗಾರಪ್ಪ ಮಗ ಮಧುಬಂಗಾರಪ್ಪ ಉಸ್ತುವಾರಿ ಸಚಿವರಾಗಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಇದೆ ಎಂದರು‌.ಸರ್ಕಾರ ಬದಲಾಗಿದೆ ರಾಘವೇಂದ್ರರವರೆ. ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಮತ್ತು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯಾಗಿ ನಾನಿದ್ದೇನೆ ಅವರಿಗೆ ಮನವಿ ಮಾಡೊಲ್ಲ. ನೀವು ಯಾವುದೇ ಉದ್ಘಾಟನೆಗೆ ನಮ್ಮ ಅನುಮತಿ ಇಲ್ಲದೆ ಮಾಡಿದ್ದು ಹೇಗೆ ಎಂದು ಗುಡುಗಿದರು....
 
ಭಾರತ್ ಜೂಡೋ ನ್ಯಾಯ್ ಯಾತ್ರೆಯನ್ನ ರಾಹುಲ್ 
 ಮಣಿಪುರದಿಂದ ನಿನ್ನೆ  ಆರಂಭಿಸಿದ್ದಾರೆ. ಶುಭಕೋರುವೆ.‌ ಒಂದೊಂದು ಹೆಜ್ಜೆಯೂ ಒಳ್ಳೆಯ ವಿಚಾರಕ್ಕೆ ಕರೆದೊಯ್ಯಲಿ, ನಾನು ಸಹ ಐತಿಹಾಸಿಕ ನ್ಯಾಯದ ಪರ ಹೆಜ್ಜೆ ಹಾಕಲಿದ್ದೇನೆ ಎಂದ ಅವರು ನಾನು ಕೂಡ ಅದರಲ್ಲಿ ಭಾಗವಹಿಸುತ್ತೆನೆ ಎಂದರು.

 ಕಾಂಗ್ರೆಸ್ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಜನರನ್ನ ತಲುಪಿದೆಯೇ  ಎಂಬ ಬಗ್ಗೆ ತಾಲ್ಲೂಕು ಮಟ್ಟದಲ್ಲಿ ನೂಡಲ್ ಆಫೀಸರ್ ನೇಮಕ ಮಾಡಲಾಗುವುದು.
ಗ್ಯಾರೆಂಟಿ ಯೋಜನೆಯಲ್ಲಿ ತಲಾ ಒಂದು ಮನೆಗೆ  ಅವರೇಜ್ 5000 ರೂ ಸಿಕ್ಕಿದೆ.1700 ಮನೆ ಇದ್ದರೆ ಗ್ರಾಮ ಪಂಚಾಯತಿ ಮಟ್ಟದಲ್ಲಿ 1500 ಜನರಿಗೆ ಸಿಕ್ಕಿದೆ.ಒಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯೋಜನೆಗಳಿಂದ 8 ಕೋಟಿ ನೆರವು ಸಿಕ್ಕಿದೆ.
ಈ ವರ್ಷ 5 ಲಕ್ಷ ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿದ್ದಾರೆ. ಮುಂದಿನ ವರ್ಷ 10 ಯುವಕರು ನೋಂದಣಿಯಾಗಲಿದ್ದಾರೆ. ನೋಡಲ್ ಅಧಿಕಾರಿ ಯುವನಿಧಿ ಯೋಜನೆಗೂ ಅನ್ವಯವಾಗಲಿದೆ ಎಂದರು.
ಶಿವಮೊಗ್ಗದಲ್ಲಿ ಹುಟ್ಟಿ ನನಗೆ ಸಂತೋಷವಾಗಿದೆ. ಶಿಕಾರಿಪುರದಲ್ಲಿ ಯಾಕೆ ಅಲ್ಲಮನ ಮಠ ಅಭಿವೃದ್ಧಿ ಆಗಿಲ್ಲ.. ಜನ್ಮಸ್ಥಳವನ್ನ ಅಭಿವೃದ್ಧಿ ಮಾಡಬೇಕಿದೆ.   ಪುರಾತತ್ವ ಇಲಾಖೆ ಅಭಿವೃದ್ಧಿಗೆ ಬಿಡ್ತಾ ಇಲ್ಲವೆಂಬ ಕೂಗಿದೆ. ಆದರೆ ಅಭಿವೃದ್ಧಿಗೆ ಅವಕಾಶವಿದೆ. ಅಭಿವೃದ್ಧಿ ಮಾಡಲು ಮಠದ ಕೆಲವರು ಓಡಾಡುತ್ತಿದ್ದಾರೆ. ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ. ಸಾಧಕರಿಗೆ ಗೌರವ ಕೊಡುವುದು ನಮ್ಮ ಧರ್ಮ. ಬಹಳ ಅದ್ಭುತವಾಗಿ ಶಿವಮೊಗ್ಗ ಫ್ರೀಡಮ್‌ ಪಾರ್ಕಿಗೆ ಅಲ್ಲಮಪ್ರಭು ಹೆಸರಿಡಲು ಮುಖ್ಯಮಂತ್ರಿ ಗಳು ತಕ್ಷಣ ತೀರ್ಮಾನ ತೆಗೆದು ಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು ಮತ್ತು ಅಭಿನಂದನೆ ತಿಳಿಸಿದರು.ಸದ್ಯದಲ್ಲಿಯೇ ಸರ್ಕಾರದ ಆದೇಶ ಹೊರಬಿಳಲಿದೆ ಎಂದರು. ನಂತರ ಕೆಲವೊಂದು ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ ಎಂದರು.

ಶಿಕಾರಿಪುರದಲ್ಲಿ ಯಾಕೇ ಅಭಿವೃದ್ಧಿ ಆಗಿಲ್ಲ ಎಂಬುದನ್ನ ಅಧಿಕಾರಸ್ಥರು ಹೇಳಬೇಕು. ಅಲ್ಲಿಯ ಮಠ ಅಭಿವೃದ್ದಿ ಆಗಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಆಗಿದೆ ಎಂದರು.

ಅನಂತಕುಮಾರ್ ಹೆಗಡೆಯವರು ವೈಯಕ್ತಿಕ ಅಟ್ಯಾಕ್ ಮಾಡಬಾರದು. ಮೋದಿಗೂ ನಾವು ಮಾಡುತ್ತೇವೆ. ಮುಖ್ಯಮಂತ್ರಿ ಗಳಿಗೆ ಈ ರೀತಿಯ ಭಾಷೆ ಬಳಸಿರುವುದು ಅನಂತ್ ಕುಮಾರ್ ಹೆಗ್ಗಡೆ.. ಒಬ್ಬ ಹುಚ್ಚ....ಅನಿಸುತ್ತದೆ. ಹುಚ್ಚರ ಸಂತೆ ಬಿಜೆಪಿಯಲ್ಲಿ ಇದೆ. ಚುನಾವಣಾ ಸಂದರ್ಭದಲ್ಲಿ ಹುಚ್ಚರು ಜಾಸ್ತಿಯಾಗುತ್ತಾರೆ.ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡುತ್ತೆನೆ ಎಂದರು.ಹುಚ್ಚುತನದ ಹೇಳಿಕೆಗಳು ಹೊರಬರುತ್ತಿರುವುದು ಚುನಾವಣೆಗಾಗಿ ನಡೆಯುತ್ತಿದೆ. ಸಂಸದರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದರು.  ಕರಾವಳಿ ಭಾಗದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಚುನಾವಣೆ ಎದುರಿಸುತ್ತೇವೆ. ಕೇವಲ ರಾಮ‌ನ ಹೆಸರು ಹೇಳಲ್ಲ ಎಲ್ಲಾ ಧರ್ಮದ ದೇವರ ಹೆಸರಿನಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.

ಕಲ್ಬುರ್ಗಿ ಗುಲ್ಬರ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗೆ 250 ಕೋಟಿಯಾಗಿದೆ. ಶಿವಮೊಗ್ಗದಲ್ಲಿ  ಪ್ರಾರಂಭದಲ್ಲಿ180 ಕೋಟಿ ಇದ್ದದ್ದು, ನಂತರ  480 ಕೋಟಿ ಅಭಿವೃದ್ಧಿಗೆ ಖರ್ಚಾಗಿದೆ.ಇದು ತನಿಖೆಯಾಗಬೇಕು ಎಂದರು.

ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ವೇದಿಕೆ ಸಿದ್ದಮಾಡಿಕೊಂಡಿದೆ. ಬರುವ ಲೋಕಸಭಾ  ಚುನಾವಣೆಯಲ್ಲಿ ನಾವು ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಜನರ ಮುಂದೆ ಮತಯಾಚನೆ ಮಾಡಿ ಗೆಲುವು ಸಾಧಿಸಲಿದ್ದೆವೆ. ಸ್ತ್ರೀ ಶಕ್ತಿ ಸಂಘದವರು ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ಎಂದರು.
ಕೈಗಾರಿಕೋದ್ಯಮದವರ ಸಾಲ ಮನ್ನ ಮಾಡುವ ಬಿಜೆಪಿಯವರು ಒಮ್ಮೆಯಾದರೂ ಬಡವರ ಬಗ್ಗೆ ಯೋಚಿಸಬೇಕಿದೆ ಎಂದರು.

ಪತ್ರಿಕಾಗೋಷ್ಠಿ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಕಲ್ಗೋಡು ರತ್ನಾಕರ,ಎಮ್. ಶ್ರೀಕಾಂತ್, ಎನ್. ರಮೇಶ್, ಇಕ್ಕೇರಿ ರಮೇಶ್, ವೈ.ಹೆಚ್ ನಾಗರಾಜ್, ಜಿ.ಡಿ. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.