ಸ್ಮಾರ್ಟ್ ಸಿಟಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ:ಬಡಾವಣೆ ನಾಗರೀಕರ ಆಕ್ರೋಶ

ಶಿವಮೊಗ್ಗ:ಸ್ಮಾರ್ಟ್ ಸಿಟಿ 
ಶಿವಮೊಗ್ಗ ನಗರದ ward No 24, ಗೋಪಾಳ 2 ನೇ ಹಂತ, ಸೂಡಾ ಲೇಔಟ್ 2ನೇ ಹಂತ, ಅಲ್ ಹರಿಂ ಲೇಔಟ್ ಮತ್ತು ಗೋಪಾಲ  ಹೌಸಿಂಗ್ ಬೋರ್ಡ್ ಕಾಲೋನಿ. ಇಲ್ಲಿನ ನಾಗರೀಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸರಿಯಾಗಿ ಜಲ ಮಂಡಳಿ ಯವರು ನೀರು ಸರಬರಾಜು ಮಾಡುತ್ತಿಲ್ಲ ಎಂದು ಸ್ಥಳೀಯ ಬಡಾವಣೆಯ ನಾಗರೀಕರು ಸಣ್ಣ ನೀರಾವರಿ ಜಲನಿಗಮದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಮಾರ್ಟ್ ಸಿಟಿ ಆದ ನಂತರ 24 X 7 ನೀರು ಸರಬರಾಜು ಅಂತಾ ಮಾಡಿ ಸರಿಯಾಗಿ 1 ಗಂಟೆ ನೀರು ಸಹ ಬರುತ್ತಿಲ್ಲ. 10 ನಿಮಿಷ ನೀರು ಬಿಡುತ್ತಾರೆ. ಕುಡಿಯುವ ನೀರು ಬಿಡಲು ಸರಿಯಾದ ಸಮಯ ಇಲ್ಲ.( ರಾತ್ರಿ 12 ಗಂಟೆಗೆ, 1 ಗಂಟೆಗೆ, 2 ಗಂಟೆಗೆ, ಬೆಳಿಗ್ಗೆ 6 ಗಂಟೆಗೆ, 7 ಗಂಟೆಗೆ ) ನೀರು ಬಿಡುವವರಿಗೆ ಹೇಳುವವರು...ಕೇಳುವವರು ಇಲ್ಲದಂತಾಗಿದೆ. ಸಣ್ಣ ನೀರಾವರಿ ನಿಗಮಕ್ಕೆ ಸಂಬಂದಿಸಿದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.

 ಈ ಮುಂಚಿನ  ಶಿವಮೊಗ್ಗ ಮಹಾನಗರ ಪಾಲಿಕೆ ಹಳೆಯ ಲೈನ್ ಗಳೆ ಚೆನ್ನಾಗಿದ್ದವು ಮತ್ತು ನೀರು ಪೂರೈಕೆ ಚೆನ್ನಾಗಿತ್ತು ಎಂದು ಸ್ಥಳೀಯ ಬಡಾವಣೆಯ ನಾಗರೀಕರಾದ ಬಾಲಕೃಷ್ಣ ನಾಯಕ್ ಪತ್ರಿಕೆಗೆ ತಿಳಿಸಿದ್ದಾರೆ.

ಇದೀಗ ಇತ್ತೀಚೆಗೆ 24 X 7 ನೀರು ಸರಬರಾಜು ಬಂದ ಮೇಲೆ ನೀರು ಸರಿಯಾಗಿ ಬರುತ್ತಿಲ್ಲ. 2 ವರ್ಷಗಳಿಂದ ಇದೆ ರೀತಿ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿಯ ನಿವಾಸಿಗಳು ತುಂಬಾ ಸಲ ಮೇಲಿನ ಅಧಿಕಾರಿಗಳಿಗೆ  ಮತ್ತು ಇಲ್ಲಿಯ ಕಾರ್ಪೊರೇಟರಗೂ ತಿಳಿಸಿದರೂ ಯಾರು ಇದರ ಬಗ್ಗೆ ಗಮನಹರಿಸಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

 ನೀರಿನ ಕಂದಾಯ ಮಾತ್ರ ಜಲಮಂಡಳಿಯವರು ಸರಿಯಾದ ಸಮಯಕ್ಕೆ ಪಾವತಿಸಿಕೊಳ್ಳುತ್ತಾರೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಈ ರೀತಿಯಾದರೆ ಮುಂದೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರು ಬರುವದು ತುಂಬಾ ಕಷ್ಟ ಅಂತಾ ಈ ಬಾಗದ ಜನರು ಮಾತನಾಡಿ ಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಗಮನಹರಿಸಿ ಸಂಬದ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹ ವಾಗಿದೆ.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಬಡಾವಣೆಯ ಸ್ಥಳೀಯ ನಿವಾಸಿಗಳೆಲ್ಲಾರೂ ಸೇರಿ ಜಲಮಂಡಳಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.