ಶಿವಮೊಗ್ಗ ನಿವೃತ್ತ ASI ಶ್ರೀ ಮಾಧವ ಫೈ ನಿಧನ ; ಸಂತಾಪ

ಶಿವಮೊಗ್ಗ:ನಿವೃತ್ತ ASI ಶ್ರೀ ಮಾಧವ ಫೈ ರವರು ಇಂದು ಮದ್ಯಾಹ್ನ ಹೃದಯಾಘಾತದಿಂದ ನಿಧನವಾಗಿದ್ದಾರೆ.
 1986 ರಲ್ಲಿ ಪೊಲೀಸ್ ಇಲಾಖೆ ಸೇರಿ, ಅಗಸ್ಟ್ 2017
ನಿವ್ರತ್ತಿ ಹೊಂದಿದ್ದರು. ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯತ್ವ ಪಡೆದಿದ್ದರು. ಇವರು ಶಿವಮೊಗ್ಗ ಹೊರವಲಯದ ಪುರಲೆಯಲ್ಲಿ ಕುಟುಂಬದ ಜೊತೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಮೃತದೇಹವನ್ನು ಪುರಲೆಯಲ್ಲಿ ಅವರ ಮನೆಯಲ್ಲಿ ದರ್ಶನಕ್ಕೆ ಇಡಲಾಗಿದೆ. ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ನಡೆಯಲಿದೆ ಎಂದು ತಿಳಿದುಬಂದಿದೆ.
 ಮೃತರ ಸುದ್ದಿ ತಿಳಿದ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಪಧಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮೃತರ ಮನೆಗೆ ಬೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಸಲುವಾಗಿ ಪೊಲೀಸ್ ಇಲಾಖೆ ಯಿಂದ ಒದಗಬಹುದಾದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಕೊಡಿಸಿಕೊಡುವುದಾಗಿ ತಿಳಿಸಿದ್ದಾರೆ.

ಮೃತರು ಶಿವಮೊಗ್ಗ ಜಿಲ್ಲೆಯ ಹಲವು ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ಕೋಟೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆಫೀಸ್ ನಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದರು.ನಾನು ಕರ್ತವ್ಯ ನರ್ವಹಿಸುವ ಸಂದರ್ಭದಲ್ಲಿ ಮೃತರು ನನ್ನ ಆತ್ಮೀಯ ಸ್ನೇಹಿತರು ಕೂಡ ಆಗಿದ್ದರು.ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದರು.

ಮೃತರು ನಿನ್ನೆಯ ದಿವಸ ಸಂಘದ ಕಚೇರಿಗೆ ಆಗಮಿಸಿ ರೂ.5000/- ನಿವೇಶನದ ಸಲುವಾಗಿ ಸಹಾಯಧನ ನೀಡಿ ಹೋಗಿದ್ದಾರೆ. ಎಂತಾ ವಿಪರ್ಯಾಸವೆಂದರೆ ಊಹಿಸಲು ಸಾದ್ಯವಾಗದು.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವ...

ಮ್ರತರು ಪತ್ನಿ ಮಾಲಾ ಪ್ಯೆ,ಪುತ್ರರಾದ ಮನೋಜ್,ಮಧು,ಸೊಸೆಯಂ
ದಿರಾದ ಕ್ರತಿಕಾ ಮತ್ತು ಶ್ರುತಿರವ
ರನ್ನು ಬಿಟ್ಟು ಅಗಲಿದ್ದಾರೆ..

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.