ಶಿವಮೊಗ್ಗ ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆ ಏರಿಯಾದಲ್ಲಿ RML ನಗರದ OC-ಮಟ್ಕಾ ಬಿಡ್ಡರ್ ಹವಾ!!

 ಶಿವಮೊಗ್ಗದಲ್ಲಿ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ತುಂಗಾನಗರ ಪೊಲೀಸ್ ಠಾಣೆಯ ಏರಿಯಾದಲ್ಲಿ ಎಲ್ಲೆಂದರಲ್ಲಿ ಒಸಿ ಮಟ್ಕಾ ಜೂಜಾಟ ರಾಜರೋಷವಾಗಿ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಶಿವಮೊಗ್ಗ ಜಿಲ್ಲೆಯ ಎಸ್ಪಿ ಮಿಥುನ್ ಕುಮಾರ್ ರವರು ಪ್ರಾಮಾಣಿಕ, ದಕ್ಷ  ಅಧಿಕಾರಿಯಾಗಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲದೇ ಗಮನಕ್ಕೆ ಬಾರದೇ ಎರಡು ಠಾಣೆಯ ಏರಿಯಾದಲ್ಲಿ ಒಸಿ ಮಟ್ಕಾ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಮಟ್ಕಾ ಒಸಿ ಚೀಟಿಯ ಸಾಂದರ್ಭಿಕ ಚಿತ್ರವಿದು...
  ಶಿವಮೊಗ್ಗ ನಗರದಲ್ಲಿನ RML ನಗರ ಬಡಾವಣೆಯ OC ಬಿಡ್ಡರ್ ಒಬ್ಬ ಮ.......ರ.......ಕ್ ಯಾನೆ ಶ......  ಈತನು ಬಲು ಜೋರಾಗಿ ಓಸಿ ಬರೆಯುವವರನ್ನ ಎರಡು ಠಾಣೆಯ ಹಲವು ಕಡೆ ಬಿಟ್ಟಿದ್ದು ಈತನ ಹವಾ ಎರಡು ಠಾಣೆಯ ಸರಹದ್ದಿನಲ್ಲಿ ಇದೆ ಎನ್ನುವ ಆರೋಪ  ಕೇಳಿ ಬರುತ್ತಿದೆ.

  ಈ ಹಿಂದಿನ ಹಳೇಯ ಮಟ್ಕಾ ಒಸಿ ಬಿಡ್ಡರ್ ಗಳ ಹವಾ ಶಿವಮೊಗ್ಗದಲ್ಲಿ ಇದೀಗ ಕಡಿಮೆಯಾಗಿದ್ದು ಊರು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ದೊಡ್ಡಪೇಟೆ ಠಾಣೆ ಮತ್ತು ತುಂಗಾನಗರ ಠಾಣೆಯ
ಠಾಣಾಧಿಕಾರಿಗಳು ಮತ್ತು ಪೊಲೀಸರು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

  RML ಬಿಡ್ಡರ್ ಹವಾದಿಂದ ತುಂಗಾನಗರ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆಯ  ಕೆಲವು ಅಧಿಕಾರಿಗಳು ಮತ್ತು ಪೊಲೀಸರ ಜೇಬು ಭರ್ತಿಯಾಗ ತೊಡಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

 ರಾಜಾರೋಷವಾಗಿ ಎಲ್ಲೆಂದರಲ್ಲಿ ಒಸಿ ಮಟ್ಕಾ ಜೂಜಾಟ ನಡೆಯುತ್ತಿದೆ.ಚೀಟಿ ಬರೆಯುವ ಒಬ್ಬೊಬ್ಬ ವ್ಯಕ್ತಿಯಿಂದ ಸಾವಿರಾರು ರೂಪಾಯಿ ಹಣ ಸಂಗ್ರಹಿಸುತ್ತಾನೆ ಎರಡು ಠಾಣೆಯ ಏರಿಯಾದಲ್ಲಿ ಲಕ್ಷಗಟ್ಟಲೆ ಹಣ ಕೈ ಸೇರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲಿಗೆ ಎರಡು ಠಾಣೆಯ ಏರಿಯಾ ದಲ್ಲಿ ಎಷ್ಟು ಹಣ ಸಂಗ್ರಹ ಆಗಬಹುದು ಎಂಬುದನ್ನು ನಿವೇ ಊಹಿಸಿ.

  ಆದರೆ  ಪೊಲೀಸ್ ಠಾಣೆಯ ಮತ್ತು ಜಿಲ್ಲಾ  ಗುಪ್ತದಳದ ಸಿಬ್ಬಂಧಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲವೇ.ಇದು ಗುಪ್ತದಳದ ಸಿಬ್ಬಂಧಿಗಳ ವೈಫಲ್ಯ ಸಹ ಕಂಡುಬರುತ್ತಿದೆ.
ನಮ್ಮ ಪತ್ರಿಕೆಗೆ ಈ ಬಗ್ಗೆ ಅನೇಕ ದೂರುಗಳು ಬಂದಿವೆ. 
ಅತಿ ಹೆಚ್ಚು ಕೂಲಿಕಾರ್ಮಿಕರು, ಆಟೋಡ್ರೈವರ್,ಬಸ್ ಡ್ರೈವರ್, ಕಂಡಕ್ಟರ್ ಗಳು ದಿನ ನಿತ್ಯವೂ ಒಸಿ ಚೀಟಿ ಬರೆಸಿ ಹಣಕೊಟ್ಟು ಬರಿಗೈಯಲ್ಲಿ ಮನೆಗೆ ವಾಪಸ್ಸು ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.ಮಹಿಳೆಯರು ಹಿಡಿ ಶಾಪ ಹಾಕುತ್ತಿದ್ದಾರೆ.

ಈ ಬಗ್ಗೆ ದಕ್ಷ ಪ್ರಾಮಾಣಿಕರೆಂದು ಖ್ಯಾತಿ ಗಳಿಸಿರುವ ಎಸ್ಪಿ ಮಿಥುನ್ ಕುಮಾರ್ ರವರು ಗಮನ ಹರಿಸಿ ಪರಿಶೀಲನೆ ಮಾಡಿ ಸೂಕ್ತವಾದ ಕ್ರಮ ಕೈಗೋಳ್ಳಲಿ ಎಂಬುದು ನಮ್ಮ ಪತ್ರಿಕೆಯ ಆಶಯ ವಾಗಿದೆ.

ಈ ಬಗ್ಗೆ ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ  ತುಂಗಾನಗರ ಮತ್ತು ದೊಡ್ಡಪೇಟೆ ಠಾಣೆಯ ಏರಿಯಾದಲ್ಲಿ ಒಸಿ ಜೂಜಾಟ ಎಲ್ಲೆಲ್ಲಿ ನಡೆಯುತ್ತಿದೆ... ಯಾರು ನಡೆಸುತ್ತಿದ್ದಾರೆ.... ಯಾರ್ಯಾರು ಎಲ್ಲೆಲ್ಲಿ ಒಸಿ ಬರೆಯುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.