ಶಿವಮೊಗ್ಗದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 'ವೈಕುಂಠ ಏಕಾದಶಿ' ಸಂಭ್ರಮ

ಶಿವಮೊಗ್ಗ: ಶಿವಮೊಗ್ಗ ನಗರದ ಜಿ.ಎಸ್.ಕೆ.ಎಂ. ರಸ್ತೆಯ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ 'ವೈಕುಂಠ ಏಕಾದಶಿ' ಅಂಗವಾಗಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.
ಭಕ್ತರಿಂದ ವಿವಿಧ ರೀತಿಯಲ್ಲಿ ಪೂಜೆ ಅರ್ಚನೆ ಕಾರ್ಯಕ್ರಮ ನಡೆಯಿತು.ಶನಿವಾರ ಬೆಳಿಗ್ಗೆಯಿಂದ ತಿರುಮಲ ಶ್ರೀ ಲಕ್ಷ್ಮೀ
ವೆಂಕಟರಮಣ ಮೂರ್ತಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಕುಂಕುಮ ಅರ್ಚನೆ ಸಂಕೀರ್ತನಾ ಸೇವೆ ಹಾಗೂ  ಅರ್ಚನೆ
ವೈಭವದಿಂದ ನಡೆಯಿತು.
 ವಿಶೆಷ ಪೂಜೆ ಅರ್ಚನೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ದೇವಸ್ಥಾನ ಸಮಿತಿಯವರು ಅಚ್ಚುಕಟ್ಟಾಗಿ ಮಾಡಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿಶೇಷವಾಗಿ ವೈಕುಂಠ ಏಕಾದಶಿ ನಿಮಿತ್ತ ದೇವಸ್ಥಾನಕ್ಕೆ ಬಂದ ಭಕ್ತರು  ಸ್ವಾಮಿಯ ದರ್ಶನ ಪಡೆದುಕೊಂಡು ಲಡ್ಡು ಪ್ರಸಾದ,  ಸ್ವೀಕರಿಸಿ ದೇವರ ಆಶೀರ್ವಾದ ಪಡೆದು ಪುನೀತರಾದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.