ಪೊಲೀಸ್ ಮೇಲೆ ದಾಳಿ ಮಾಡಲು ಯತ್ನಿಸಿದ ಆರೋಪಿ ಮೇಲೆ ಫೈರಿಂಗ್ ಮಾಡಿ ವಶಕ್ಕೆ ಪಡೆದ ಇನ್ಸ್ಪೆಕ್ಟರ್

 ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ ಹತ್ತಿರ ವಾಕ್ ಪಾತ್ ಬಳಿ ಶಶಿ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದ ಪ್ರಮುಖ ಆರೋಪಿ, ರೌಡಿ ಶೀಟ‌ರ್ ಮಂಜುನಾಥ್ ಅಲಿಯಾಸ್ ಓಲಂಗನ ಮೇಲೆ ಇಂದು ಬೆಳಿಗ್ಗೆ ಪೊಲೀಸ್ ಇನ್ಸ್ಪೆಕ್ಟರ್ ಫೈರಿಂಗ್ ಮಾಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್  ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆರೋಪಿ, ರೌಡಿ ಶೀಟ‌ರ್ ಮಂಜುನಾಥ್ ಅಲಿಯಾಸ್ ಓಲಂಗ 
ಇಂದು ಬೆಳಗ್ಗೆ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವಾಗ ಪೋಲಿಸ್ ಸಿಬ್ಬಂದಿ ರವಿ ಮತ್ತು ಮತ್ತೊಬ್ಬ ಸಿಬ್ಬಂದಿ ಮೇಲೆ ಆರೋಪಿ, ರೌಡಿ ಶೀಟ‌ರ್ ಮಂಜುನಾಥ್ ಅಲಿಯಾಸ್ ಓಲಂಗ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ.ಶಿವಮೊಗ್ಗ ಸೋಮಿನಕೊಪ್ಪದಲ್ಲಿ ಬೆಳಿಗ್ಗೆ ಘಟನೆ ಸಂಭವಿಸಿದೆ ಎನ್ನಲಾಗಿದೆ.ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ ಹತ್ತಿರ ವಾಕ್ ಪಾತ್ ಬಳಿ ಹಲ್ಲೆಗೆ ಒಳಗಾಗಿದ್ದ ಶಶಿ .
ಎರಡು ದಿನಗಳ ಹಿಂದೆ ಶಿವಮೊಗ್ಗದ ಫ್ರೀಡಂಪಾರ್ಕ್ ನಲ್ಲಿ ಶಶಿ ಎಂಬಾತನ ಮೇಲೆ ಮಂಜುನಾಥ್ ಯಾನೆ ಒಲಂಗ, ಮಂಜುನಾಥ್ ಯಾನೆ ನೇಪಾಳಿ ಮಂಜ ಮತ್ತು ಇತರರು ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿದ್ದರು.
 ಇನ್ಸ್‌ಪೆಕ್ಟರ್ ಸಿದ್ದನಗೌಡ ಕಠಾರಿ ಎಸೆದು ಹೋಗುವಂತೆ ಆರೋಪಿಗೆ ಎಚ್ಚರಿಕೆ ನೀಡಿದರೂ ಅವರು ಕೇಳದೆ ದಾಳಿ ಮುಂದುವರೆಸಿದ ಹಿನ್ನೆಲೆಯಲ್ಲಿ ಫೈರಿಂಗ್ ಮಾಡಲಾಗಿದೆ. 
ಪೊಲೀಸ್ ಸಿಬ್ಬಂದಿ ರವಿ ಗಾಯಗೊಂಡಿದ್ದಾರೆ.. 
ಆತ್ಮರಕ್ಷಣೆಗಾಗಿ ಮತ್ತು  ಸಿಬ್ಬಂದಿಯ ರಕ್ಷಣೆಗಾಗಿ  ಇನ್ಸ್‌ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಹೇಳಲಾಗುತ್ತಿದೆ.ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..

ಆರೋಪಿಯು ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾನೆ. 2010 ರಿಂದ ರೌಡಿಶೀಟರ್ ಆಗಿದ್ದ ಮಂಜುನಾಥ ಯಾನೆ ಒಲಂಗನ ಮೇಲೆ ಶಿವಮೊಗ್ಗದ ವಿವಿಧ ಠಾಣೆಯಲ್ಲಿ 12 ಪ್ರಕರಣಗಳು ದಾಖಲಾಗಿವೆ. ಮತ್ತು ಈ ಹಿಂದೆ ಹಲವು 302 ಮತ್ತು 307 ಪ್ರಕರಣಗಳನ್ನು ಹೊಂದಿದ್ದಾನೆ ಎನ್ನಲಾಗಿದೆ. ತನಿಖೆ ಮುಂದುವರಿದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.