ಶಿವಮೊಗ್ಗದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದರೇ ಹುಷಾರ್!! ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಎಸ್ಪಿ ಮಿಥುನ್ ಕುಮಾರ್

ಶಿವಮೊಗ್ಗ: ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಅವರ ನೇತೃತ್ವದಲ್ಲಿ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಶಿವಮೊಗ್ಗ ನಗರದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಮತ್ತು ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಸಿಬ್ಬಂಧಿಗಳ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಬಗ್ಗೆ ಖಡಕ್ ಸೂಚನೆ ನೀಡಿ ಎಚ್ಚರಿಕೆ ನೀಡಿದ್ದಾರೆ. ಓಸಿ, ಮಟ್ಕಾ, ಇಸ್ಪೀಟು ಜೂಜಾಟಗಳನ್ನು ತಡೆಗಟ್ಟಲು, ಠಾಣಾಧಿಕಾರಿಗಳು ಮತ್ತು ಗುಪ್ತ ಮಾಹಿತಿ ಕರ್ತವ್ಯದ ಸಿಬ್ಬಂದಿಗಳು ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಳ ಮಟ್ಟದ ಮಾಹಿತಿಯನ್ನು ಸಂಗ್ರಹಿಸಿ, ಹೆಚ್ಚಿನ ದಾಳಿಗಳನ್ನು ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಮತ್ತು ಓಸಿ ಬರೆಯುವ ಹಾಗೂ ಓಸಿ ಆಡಿಸುವ ಕಿಂಗ್ ಪಿನ್ ಗಳನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ಅವರ ವಿರುದ್ಧ ಬಲವಾದ ಪ್ರಕರಣಗಳನ್ನು ದಾಖಲಿಸಿ, ಪುನಾಃ ಓಸಿ ಮಟ್ಕಾ ಜೂಜಾಟದಲ್ಲಿ ತೊಡಗದಂತೆ ಬಿಗಿ ಮಾಡುವುದು. ಮತ್ತು ಶಿವಮೊಗ್ಗ ಜಿಲ್ಲೆಯಾದ್ಯಂತ ವಿಶೇಷವಾಗಿ ಶಿವಮೊಗ್ಗ ನಗರದಲ್ಲಿ ಸಂಘಟಿತ ಅಪರಾಧಗಳ ವಿರುದ್ಧ ಶೂನ್ಯ ಸಹಿಷ್ಣುತೆ (Zero Tolerance) ಹೊಂದಿದ್ದು, ಸಾರ್ವಜನಿಕರು ಮತ್ತು ಮಾದ್ಯಮಗಳಿಂದ ಯಾವುದೇ ದೂರುಗಳು ಬಂದಾಗ ಕೂಡಲೇ ಸ್ಪಂದಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು.

ಪೊಲೀಸ್ ಅಧಿಕಾರಿ / ಸಿಬ್ಬಂಧಿಗಳು ಓಸಿ, ಮಟ್ಕಾ, ಇಸ್ಪೀಟು ಜೂಜಾಟವನ್ನು ತಡೆಗಟ್ಟದೇ ಇದ್ದಲ್ಲಿ ಹಾಗೂ ತಮ್ಮ ಬೇಜವಾಬ್ದಾರಿತನ ಮತ್ತು ನಿರ್ಲಕ್ಷತನದಿಂದ ಓಸಿ, ಮಟ್ಕಾ, ಇಸ್ಪೀಟು ಜೂಜಾಟಗಳು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಕಂಡು ಬಂದಲ್ಲಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯಿಂದ ಡೆಕಾಯ್ (ಮಾರುವೇಶದಲ್ಲಿ) ಟೀಮ್ ಗಳನ್ನು ಕಳುಹಿಸಿದ ಸಂದರ್ಭದಲ್ಲಿ ಯಾವ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ಚಟುವಟಿಕೆಗಳು ನಡೆಯುತ್ತಿರುವುದು ಕಂಡು ಬರುತ್ತದೆಯೋ ಆ ಠಾಣೆಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳೇ ನೇರ ಹೊಣೆಗಾರರಾಗಿರುತ್ತಾರೆ. ಅಂತಹ ಅಧಿಕಾರಿ / ಸಿಬ್ಬಂಧಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಇಲಾಖಾ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದು ಎಸ್ಪಿ ಖಡಕ್ ಸೂಚನೆ ನೀಡಿದ್ದಾರೆ.

ಮುಂದಿನ 10 ದಿನಗಳಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುವವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಹೆಚ್ಚಿನ ದಾಳಿಗಳನ್ನು ನಡೆಸಿ NDPS ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸತಕ್ಕದ್ದು. ಹಾಗೆಯೇ ಗಾಂಜಾ ಸೇವನೆ ಪ್ರಕರಣದಲ್ಲಿ ಗಾಂಜಾದ ಮೂಲದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಆ ವ್ಯಕ್ತಿಗೆ ಗಾಂಜಾ ಮಾರಾಟ ಮಾಡಿದ ಮತ್ತು ಗಾಂಜಾ ಬೆಳೆದ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ, ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಂಜೆಯ ವೇಳೆ ಏರಿಯಾ ಡಾಮಿನೇಷನ್ ವಿಶೇಷ ಗಸ್ತು ಮಾಡಿ, ಅನುಮಾನಾಸ್ಪದ ಮತ್ತು ಸಾರ್ವಜನಿಕ ಉಪಟಳ ನೀಡುವ ವ್ಯಕ್ತಿಗಳ ವಿರುದ್ಧ ಮುಂಜಾಗ್ರತಾ ಪ್ರಕರಣ ಮತ್ತು ಲಘು ಪ್ರಕರಣಗಳನ್ನು ದಾಖಲಿಸತಕ್ಕದ್ದು ಹಾಗೂ ಗಾಂಜಾ ಸೇವನೆಮಾಡಿರುವ ಬಗ್ಗೆ ಅನುಮಾನ ಬಂದವರನ್ನು ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಿ, ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪಟ್ಟಾಗ ಅಂತಹವರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭುಮರಡ್ಡಿ, ಡಿವೈಎಸ್ಪಿ ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ ಹಾಗೂ ಶಿವಮೊಗ್ಗ ನಗರದ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಸಿಬ್ಬಂಧಿಗಳು ಹಾಜರಿದ್ದರು.

ಶಿವಮೊಗ್ಗದಲ್ಲಿ ಪದೇ ಪದೇ ಸುದ್ದಿ ಆಗುತ್ತಿರುವ ವಿಷಯ ಓಸಿ, ಮಟ್ಕಾ, ಇಸ್ಪೀಟು ಜೂಜಾಟ:

ಶಿವಮೊಗ್ಗದಲ್ಲಿ ಕಾನೂನು ಬಾಹೀರ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದೆ ಎಂಬ ವಿಷಯ ಇದೀಗ ಸುದ್ದಿಯಾಗುತ್ತಿದ್ದಂತೇ ಎಸ್ಪಿ ಮಿಥುನ್ ಕುಮಾರ್ ಗರಂ ಆಗಿದ್ದಾರೆ ಎನ್ನಲಾಗುತ್ತಿದೆ. ಹಾಗೇನಾದರೂ ಮರುಕಳಿಸಿದರೇ ತಕ್ಕ ಕ್ರಮ ಜರುಗಿಸುವುದಾಗಿ ಪೊಲೀಸ್ ಅಧಿಕಾರಿಗಳಿಗೆ ನಿನ್ನೆ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಓಸಿ, ಮಟ್ಕಾ, ಇಸ್ಪೀಟು ಜೂಜಾಟ ವಿಷಯದಲ್ಲಿ ಠಾಣಾಧಿಕಾರಿಗಳ ಮೌನವೇಕೆ!!

ಪ್ರತಿಯೊಂದು ಘಟನೆಗೆ ಎಸ್.ಪಿ ಯವರೇ ಮುತುವರ್ಜಿವಹಿಸಬೇಕಾದ ಸನ್ನಿವೇಶ ಶಿವಮೊಗ್ಗದಲ್ಲಿ ಉದ್ಬವವಾಗಿದೆ.ಠಾಣಾಧಿಕಾರಿಗಳಿಗೆ ಮತ್ತು ಠಾಣಾಸಿಬ್ಬಂಧಿಗಳಿಗೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಇವರಿಗೆ ಗೊತ್ತಿಲ್ಲವೇ...ಇದಕ್ಕೆ ಬ್ರೇಕ್ ಹಾಕಲು ಇವರಿಗೆ ಸಾದ್ಯವಾಗುತ್ತಿಲ್ಲವೇ ಏಕೆ ಎಂಬುದು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿರುವ ವಿಷಯವಾಗಿದೆ.

 ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಖಾಕಿ ಪೊಲೀಸರು ಗಸ್ತಿನಲ್ಲಿ ಕಾಣುತ್ತಿಲ್ಲ. ಮತ್ತೆ ಸಂಜೆ ಹೊತ್ತಿನಲ್ಲಿ ಪೊಲೀಸ್ ಅಧಿಕಾರಿಗಳ ಗಸ್ತು ಸಹ ಕಾಣುತ್ತಿಲ್ಲ. ಅಧಿಕಾರಿಗಳು ಠಾಣೆ ಬಿಟ್ಟು ಹೊರಬರುತ್ತಿಲ್ಲ ಎಂಬ ಆರೋಪ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಓಸಿ, ಮಟ್ಕಾ, ಇಸ್ಪೀಟು ಜೂಜಾಟ ಹೆಚ್ಚಾಗಿದೆ ಎಂದು ಸುದ್ದಿಯಾದಾಗ ಮತ್ತು ಎಸ್ಪಿಯವರು ಗರಂ ಆದಾಗ ಮಾತ್ರ ಠಾಣಾಧಿಕಾರಿಗಳು ನೆಪಮಾತ್ರಕ್ಕೆ ಕೇಸ್  ಲೆಕ್ಕ ಕೊಡುವ ಸಲುವಾಗಿ ಕೆಲವರನ್ನ ಕರೆತಂದು ಪೆಟ್ಟಿ ಕೇಸ್ ಹಾಕಿ ಕಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. 

ಶಿವಮೊಗ್ಗದಲ್ಲಿ ಬಕೇಟ್ ಪೊಲೀಸ್ ರವರ ಹಾವಳಿ;

ಕೆಲವು ಕ್ರೈಮ್ ಪೊಲೀಸರು ಮತ್ತು ಎಸ್.ಬಿ ಪೊಲೀಸರು ಹಲವಾರು ವರ್ಷದಿಂದ ಶಿವಮೊಗ್ಗ ಬಿಟ್ಟು ಹೋಗಿಲ್ಲ. ವರ್ಗಾವಣೆಯಾದರೂ ಸಹ ಮತ್ತೆ  ವಾಪಾಸ್ಸು ಬರುತ್ತಾರೆ.ಇವರ ಸಹಕಾರ ಸಹ ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಇದೆ ಎನ್ನಲಾಗಿದೆ.

ಶಿವಮೊಗ್ಗದಲ್ಲಿನ  ಕೆಲವು ಪೊಲೀಸರು ಮತ್ತು ಕೆಲವು ಅಧಿಕಾರಿಗಳು ಮನೆಕಟ್ಟುವ ಸಂದರ್ಭದಲ್ಲಿ ಮತ್ತು ಸೈಟ್ ತೆಗೆದುಕೊಳ್ಳುವ ಸಂದರ್ಭದಲ್ಲಿ  ಒಸಿ ಬಿಡ್ಡರ್ ಗಳ ಸಹಾಯ ಪಡೆದಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಎಸ್ಪಿಯವರು ಗಮನಹರಿಸಬೇಕಾಗಿದೆ. ಸತ್ಯವೋ..ಅಥವಾ ಸುಳ್ಳೋ ಎಂಬ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ.

 ಎಸ್ಪಿಯವರ ಖಡಕ್ ಸೂಚನೇ ಮೇರೆಗೆ ಇದೀಗ ಶಿವಮೊಗ್ಗದಲ್ಲಿ ಎರಡು ದಿನದಿಂದ ಕಾನೂನು ಬಾಹೀರ ಚಟುವಟಿಕೆ ಒಸಿ ಮಟ್ಕಾ ಜೂಜಾಟಕ್ಕೆ ಸ್ವಲ್ಪ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಒಸಿ ಬಿಡ್ಡರ್ಗಳು ಊರು ಬಿಟ್ಟಿದ್ದಾರೆ. ಮರಿ ಬಿಡ್ಡರ್ ಗಳು ಇದೀಗ ನಿಯಂತ್ರಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

   ಎಸ್ಪಿ ಮಿಥುನ್ ಕುಮಾರ್ ರವರ ಖಡಕ್ ಸೂಚನೇ ಮೇರೆಗೆ  ಇನ್ನು ಮುಂದಾದರೂ ಶಿವಮೊಗ್ಗದಲ್ಲಿ  ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಸೂಕ್ತವಾದ ಕಾನೂನು ಕ್ರಮ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ.....


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.