ಸೈಬರ್ ಕ್ರೈಮ್ ಸಿಬ್ಬಂದಿ ಸಂದೀಪ್ ನನ್ನ ಮತ್ತೆ ಟ್ರಾಫಿಕ್ ಠಾಣೆಗೆ ಎತ್ತಂಗಡಿ ಮಾಡಿದ ಎಸ್ಪಿ ಮಿಥುನ್ ಕುಮಾರ್
ಶಿವಮೊಗ್ಗ: ಇತ್ತೀಚೆಗೆ ಸೈಬರ್ ಕ್ರೈಮ್ ಠಾಣೆಯ ಮೂವರು ಸಿಬ್ಬಂದಿಗಳ ವರ್ಗಾವಣೆಯನ್ನು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಮಾಡಿದ್ದರು ಎನ್ನಲಾಗಿದೆ.ಕಳೆದ ವಾರ ಹೊಸನಗರದಲ್ಲಿನ ನಗರ ಠಾಣೆಗೆ ವರ್ಗಾವಣೆ ಆದ ಸಿಇಎನ್ ಕ್ರೈಮ್ ದಫೇದಾರ್ ಸಂದೀಪ ನನ್ನ ಅದೇ ಠಾಣೆಯ ಅಧಿಕಾರಿಗಳು ಪುನಃ ವಾಪಸ್ ಕರೆಸಿಕೊಂಡಿದ್ದಾರೆ ಎಂಬ ವಿಷಯ ಇದೀಗ ಪೊಲೀಸ್ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಮತ್ತು ಮಾಧ್ಯಮ ದಲ್ಲಿ ಸುದ್ದಿಯಾಗಿ ಚರ್ಚೆಯಾಗುತ್ತಿರುವ ವಿಷಯವಾಗಿದೆ.
ಇದೀಗ ಖುದ್ದು ಎಸ್ ಪಿ ಅವರ ಆದೇಶದ ಮೇರೆಗೆ ಹೆಚ್.ಸಿ. ಸಂದೀಪ ನನ್ನು ಪುನಃ ಓಒಡಿಯಾಗಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ನೇಮಿಸಲಾಗಿದೆ ಎನ್ನುವ ಸುದ್ದಿ ವಿಷಯ ತಿಳಿದ ಎಸ್ಪಿ ಮಿಥುನ್ ಕುಮಾರ್ ರವರು ಇದೀಗ ಸಿ.ಇ.ಎನ್, ಸೈಬರ್ ಕ್ರೈಮ್ ಸಿಬ್ಬಂದಿ ಹೆಚ್.ಸಿ. ಸಂದೀಪ ನನ್ನು ದಿಡೀರ್ ಶಿವಮೊಗ್ಗ ಪಶ್ಚಿಮ ಟ್ರಾಫಿಕ್ ಠಾಣೆಗೆ ಒಒಡಿ ಆಧಾರದ ಮೇಲೆ ನೇಮಕ ಮಾಡಿ ಆದೇಶ ಮಾಡಿದ್ದಾರೆ ಎನ್ನಲಾಗಿದೆ.
ನಿನ್ನೆ ದಿವಸ ಶಿವಮೊಗ್ಗದಲ್ಲಿ ಪೋಲೀಸ್ ಇಲಾಖೆಯ ಕಛೇರಿ ಆದೇಶದ ಪತ್ರವೊಂದು ವ್ಯಾಟ್ಸಪ್ ನಲ್ಲಿ ಹರಿದಾಡಿದ ವಿಷಯ ತಿಳಿದ ಎಸ್ಪಿ ಮಿಥುನ್ ಕುಮಾರ್ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಒಸಿ ಜೂಜಾಟ ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಇದುವರೆಗೆ ಸಾಕಷ್ಟು ಕೇಸುಗಳನ್ನು ಹಾಕಲಾಗಿದೆ ಎಂದು ಜಿಲ್ಲಾ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
Leave a Comment