ಶಿವಮೊಗ್ಗದಲ್ಲಿ ಒಸಿ- ಮಟ್ಕಾ ಜೂಜಾಟ:ಪೊಲೀಸರ ಕಾರ್ಯಾಚರಣೆ 33 ಜನ ಆರೋಪಿತರ ವಿರುದ್ಧ 21ಪ್ರಕರಣ ದಾಖಲು

ಶಿವಮೊಗ್ಗ: ಕಳೆದ 12 ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಓಸಿ ಮತ್ತು ಇಸ್ಪೀಟು ಜೂಜಾಟ* ಆಡುತ್ತಿದ್ದವರ ವಿರುದ್ಧ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಓಸಿ ಆಡುತ್ತಿದ್ದ *ಒಟ್ಟು 19* ಜನರ ವಿರುದ್ಧ 78(3) ಕೆಪಿ ಕಾಯ್ದೆ ಅಡಿಯಲ್ಲಿ *19 ಪ್ರಕರಣಗಳು* ಮತ್ತು ಇಸ್ಪೀಟು ಜೂಜಾಟ ಆಡುತ್ತಿದ್ದ *ಒಟ್ಟು 14* ಜನರ ವಿರುದ್ಧ 87 ಕೆಪಿ ಕಾಯ್ದೆ ಅಡಿಯಲ್ಲಿ *02 ಪ್ರಕರಣಗಳು* ಸೇರಿ ಒಟ್ಟು *33 ಜನ ಆರೋಪಿತರ ವಿರುದ್ಧ 21* ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.ಮೇಲ್ಕಂಡ ಪ್ರಕರಣಗಳು ಸೇರಿದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಓಸಿ ಆಡುತ್ತಿದ್ದ *ಒಟ್ಟು 38* ಜನರ ವಿರುದ್ಧ 78(3) ಕೆಪಿ ಕಾಯ್ದೆ ಅಡಿಯಲ್ಲಿ *38 ಪ್ರಕರಣಗಳು* ಮತ್ತು ಇಸ್ಪೀಟು ಜೂಜಾಟ ಆಡುತ್ತಿದ್ದ *ಒಟ್ಟು 31* ಜನರ ವಿರುದ್ಧ 87 ಕೆಪಿ ಕಾಯ್ದೆ ಅಡಿಯಲ್ಲಿ *05 ಪ್ರಕರಣಗಳು* ಸೇರಿ ಒಟ್ಟು *69 ಜನ ಆರೋಪಿತರ ವಿರುದ್ಧ 43* ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ ಶಿವಮೊಗ್ಗದಲ್ಲಿ ಒಸಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಅಕ್ಟೋಬರ್ ತಿಂಗಳಲ್ಲಿ ಸುದ್ದಿ ಮಾಡಿ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ಗಮನ ಸೆಳೆದಿತ್ತು.ಇಂದು ಕೂಡ ಬೆಳಿಗ್ಗೆ ನಮ್ಮ ದಿನಪತ್ರಿಕೆ ಬ್ಲಾಗ್ ನಲ್ಲಿ ಇಂದು ಸಂಜೆ ಹಲೋ ಶಿವಮೊಗ್ಗ ದಿನಪತ್ರಿಕೆ ಯಲ್ಲಿ ಒಸಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ದೊಡ್ಡ ಸುದ್ದಿ ಮಾಡಲಾಗಿತ್ತು, ಇದೀಗ ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ನಡೆಸಿ ಕೇಸು ದಾಖಲು ಮಾಡಿದ್ದಾರೆ. ಈ ಬಗ್ಗೆ ಶಿವಮೊಗ್ಗ  ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.