ಪ್ರದಾನಿ ನರೇಂದ್ರ ಮೋದಿಜೀರವರ ಕಾರ್ಯವನ್ನು ಮೆಚ್ಚಿ 3 ರಾಜ್ಯದಲ್ಲಿ ಜನ ಬಿಜೆಪಿಗೆ ಬೆಂಬಲಿಸಿದ್ದಾರೆ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ:  ನಾಲ್ಕು ರಾಜ್ಯಗಳ ಫಲಿತಾಂಶ ಬಂದಿದೆ ಅದರಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ.ವಿಶ್ವ ನಾಯಕ ಪ್ರದಾನಿ ನರೇಂದ್ರ ಮೋದಿಜೀಯವರ ಆಡಳಿತದ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಜನರು ಬಿಜೆಪಿ ಪಕ್ಷವನ್ನು ಬೆಂಬಲಿಸಿ ಮತ ನೀಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಮಾಜಿ ಶಿವಮೊಗ್ಗ ಶಾಸಕ ಕೆ.ಎಸ್ ಈಶ್ವರಪ್ಪ ಹೇಳಿದರು.
ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಖಾಸಾಗಿ ಹೋಟೆಲ್‌ ಮೀನಾಕ್ಷಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯ  ಮುಂದಿನ  ಚುನಾವಣೆಯಲ್ಲಿ ಸ್ಪರ್ಧಿಸೊಲ್ಲ ಅಂತಾ ಹೇಳುತ್ತಿದ್ದಾರೆ.ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯಿಂದ  ಅಭಿವೃದ್ಧಿ ಶೂನ್ಯವಾಗಿದೆ.ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಹಣವಿಲ್ಲ. ಗ್ಯಾರೆಂಟಿಗಾಗಿ ಹಣ ಜೋಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಭಿವೃದ್ಧಿ ಕೆಲಸ ಕುಂಠಿತಗೊಂಡಿದೆ ಎಂದರು.

 ಕೊನೆ ಚುನಾವಣೆ ಎಂದಿರುವ ಸಿದ್ದರಾಮಯ್ಯ ದಲಿತರಿಗೆ ವಸತಿಗಳಿಗೆ ಹಣ ಬಿಡುಗಡೆ ಮಾಡುವಂತೆ ಈಶ್ವರಪ್ಪ ಮನವಿ ಮಾಡಿಕೊಂಡರು..

ನಗರದಲ್ಲಿ 4800 ಮನೆ ನಿಂತಿದೆ. ಈ ಮನೆಗಳು ಬಡವರು ಮತ್ತು ಹಿಂದುಳಿದವರೆ ಈ ಮನೆಗಳನ್ನ ಹೆಚ್ಚು ಹೊಂದಿರುವುದಾಗಿದ್ದರಿಂದ ಬಡವರಿಗೆ ಅನುಕೂಲವಾಗಲಿದೆ ಗೋವಿಂದಾಪುರ ಮತ್ತು‌ಗೋಪಿಶೆಟ್ಟಿಕೊಪ್ಪದಲ್ಲಿ 400 ಮನೆ ನೀಡಲಾಗಿದೆ 600 ಮನೆ ಹಂಚಲಾಗುವುದು. ಒಬ್ಬರೈತರಿಗೆ ಬೆಳೆ ಪರಿಹಾರ ಬಂದಿಲ್ಲ.ಕೇಂದ್ರದವರ ಮೇಲೆ ಬೆಟ್ಟುಮಾಡುತ್ತಿದೆ. ರಾಜ್ಯ ಮೊದಲು ಹಣ ಬಿಡುಗಡೆ ಮಾಡಿದರೆ ಕೇಂದ್ರ ತಮ್ಮ ಪಾಲು ಬಿಡುಗಡೆ ಮಾಡಲಿದೆ ಎಂದರು.

20 ತಿಂಗಳಿಂದ ಸಂಬಳ ಬಂದಿಲ್ಲವೆಂದು ಪ್ರತಿಭಟನೆ ನಡೆಯುತ್ತಿದೆ. ಹಿಂದುಳಿದ ವರ್ಗಗಳ ವಸತಿ ಮತ್ತು ಹಾಸ್ಟೆಲ್ ಗಳು ನಿರ್ಮಾಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಮುಂದಿನ ವರ್ಷಗಳಲ್ಲಿ ಸಿದ್ದರಾಮಯ್ಯ ತಮ್ಮ  ಯೋಚನೆಗಳನ್ನ ಸ್ವತಂತ್ಯವಾಗಿ ಜಾರಿಗೊಳಿಸುವಂತಾಗಲಿ ಎಂದರು.
ಡಿಕೆಶಿಗೂ ಟಾಂಗ್ ನೀಡಿದ ಈಶ್ವರಪ್ಪ ಅವರಿಗೆ ಉಜ್ವಲ ರಾಜಕಾರಣ ಇದೆ. ಆದರೂ ತೆಲಂಗಾಣಕ್ಕೆ ಹೋಗಿ ಕುಳಿತಿದ್ದಾರೆ ಎಂದು ವ್ಯಂಗ್ಯ ವಾಡಿದರು.

 ಸಿಎಂ ಮತ್ತು ಮಗ ಸಾಕಷ್ಟು ದುಡಿದಿದ್ದೀರಿ ಹಲೋ ಅಪ್ಪ ತನಿಖೆ ಮಾಡಿ ಎಂದು ಒತ್ತಾಯಿಸಲಾಗಿತ್ತು. ಹೋಗಲಿ ತನಿಖೆ ಬೇಡ ಅಭಿವೃದ್ಧಿ ಮಾಡಿ. ಜನ ನೆನಪಿಸಿಕೊಳ್ಳುವಂತೆ ಯೋಜನೆ ಜಾರಿಗೆ ತನ್ನಿ ಎಂದು ಸಲಹೆ ನೀಡಿದರು.

ಮೂರು ರಾಜ್ಯದಲ್ಲಿ ಕಾಂಗ್ರೆಸ್ ಅವರ ಗ್ಯಾರೆಂಟಿ ವರ್ಕ್ ಆಗಿಲ್ಲ. ಇನ್ನು ಮುಂದೆ ಪಿಎಂ‌ ಮೋದಿನೇ ಗ್ಯಾರೆಂಟಿ ಎಂದ ಈಶ್ವರಪ್ಪ ತೆಲಂಗಾಣದ ಚುನಾವಣೆಯಲ್ಲಿ  ಜಮೀರ್ ಹೇಳಿಕೆ ನೀಡಿದ್ದ ಮುಸ್ಲೀಂರಿಗೆ ಬಿಜೆಪಿ ತಲೆಬಾಗುವಂತೆ ಮಾಡಿದೆ ಎಂದು ಹೇಳಿದ್ದರು. ಮುಸ್ಲೀಂರಲ್ಲಿ ಹೆಚ್ಚಿನ ಕೋಮುದ್ವೇಷ ತುಂಬಿದ್ದರಿಂದ ಕಾಂಗ್ರೆಸ್ ಗೆಲವಿಗೆ ಕಾರಣವಾಗಿದೆ ಎಂದರು.
 ಮುಂದಿನ ಚುನಾವಣೆಯಲ್ಲಿ ಎಚ್ಚೆತ್ತುಕೊಂಡು ಕೇಂದ್ರದ ಶ್ರೀಕೃಷ್ಣನ ತಂತ್ರಗಾರಿಕೆಯಿಂದ ಗೆಲವು ಸಾಧಿಸಲಿದ್ದೇವೆ ಎಂದರು.‌

17 ರಾಜ್ಯದಲ್ಲಿ ಬಿಜೆಪಿ, 4 ಕಡೆ ಕಾಂಗ್ರೆಸ್ ನವರು ಸರ್ಕಾರ ನಡೆಸುತ್ತಿದ್ದಾರೆ. ಸನಾತನ ಧರ್ಮವನ್ನ iNDIA ಯ  ಸದಸ್ಯರೊಬ್ವರು ಟೀಕಿಸಿದ್ದಾರೆ.ಇದರ ಫ್ರತಿಫಲದೊರೆಯಲಿದೆ. ತೆಲಂಗಾಣದಲ್ಲಿ ಮುಂದಿನ ಸಿಎಂ ಎಂದು ಹೊರಟಿದ್ದ ಯಶವಂತ್ ರೆಡ್ಡಿ ಹಾಲಿ ಸಿಎಂ ಕೆಸಿಎಆರ್‌ನ್ನ ಸೋಲಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.

ಶಿವರಾಜ್ ಸಿಂಗ್ ಚೌಹಾಣ್ ಅವರನ್ನ ಮಧ್ಯಪ್ರದೇಶದಲ್ಲಿ ಸಿಎಂ ಎಂದು ಬಿಂಬಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿ ಐದನೇ ಬಾರಿಗೆ ಗೆಲವು ಸಾಧಿಸಲಿದೆ ಎಂದರು.
 ಪಂಚರಾಜ್ಯದ ಚುನಾವಣೆ ಸ್ಪೂರ್ತಿ ತುಂಬಿದೆ.ಕರ್ನಾಟಕ  ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರವನ್ನ ಗೆಲ್ಲುತ್ತೇವೆ ಎಂದರು.

ಯತ್ನಾಳ್ ಪದೇ ಪದೇ ರಾಜ್ಯ ಅಧ್ಯಕ್ಷ ರ ವಿರುದ್ಧ ಮಾತನಾಡುತ್ತಿರುವುದು ಪಕ್ಷಕ್ಕೆ ಮುಜುಗರ ತರೊಲ್ವಾ ಎಂದು ಪ್ರಶ್ನಿಸಿದ ಪ್ರತ್ರಕರ್ತರಿಗೆ ಯತ್ನಾಳ್ ಕಟ್ಟರ್ ಹಿಂದುತ್ವ ವಾದಿ ಅವರ ಮನಸ್ತಾಪ ತಣ್ಣಗಾಗಿಸಲಾಗುವುದು ಎಂದರು.

ಡಿಕೆಶಿ ರವರ ಅಕ್ರಮ ಹಣ , ಜಮೀರ್ ಅಹಮ್ಮದ್ ರವರ ಮುಸ್ಲಿಂ ಕೋಮು ದ್ವೇಷದ ಭಾಷಣದಿಂದ ತೆಲಂಗಾಣ ದಲ್ಲಿ ಕಾಂಗ್ರೆಸ್ ಜಯಗಳಿಸಿದೆ ಎಂದರು.

  ನರೇಂದ್ರಮೋದಿ ಮತ್ತೆ ಪ್ರದಾನಿ ಯಾಗುತ್ತಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಬಿಜೆಪಿ ಪಕ್ಷಕ್ಕೆ ದೇಶದ ಜನರು ನೀಡಲಿದ್ದಾರೆ ಎಂದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.