2024 ಹೊಸ ವರ್ಷ ಆಚರಣೆ: ಹೋಟೆಲ್, ಕ್ಲಬ್ ಮತ್ತು ರೆಸಾರ್ಟ್ ಮಾಲೀಕರಿಗೆ ಎಸ್ಪಿ ನೀಡಿದ ಸೂಚನೆ ನೋಡಿ....

  ಶಿವಮೊಗ್ಗ:*ಮುಂಬರುವ ಹೊಸ ವರ್ಷ ಆಚರಣೆಯ*  ಸಂಬಂಧ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ  ಇವರು, ಶಿವಮೊಗ್ಗ ನಗರದ *ಹೋಟೆಲ್, ಕ್ಲಬ್ ಮತ್ತು ರೆಸಾರ್ಟ್* ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯನ್ನು ನಡೆಸಿ, ಈ ಕೆಳಕಂಡ ಸೂಚನೆಗಳನ್ನು ನೀಡಿದ್ದಾರೆ.1) ಹೊಸ ವರ್ಷ ಆಚರಣೆ ಸಮಾರಂಭವನ್ನು ಆದಷ್ಟೂ *ಶಿಸ್ತಿನಿಂದ, ಮಿತಿಯ ಒಳಗೆ ಆಚರಿಸಿ,* ಮಿತಿಯನ್ನು ಮೀರಿದ್ದಲ್ಲಿ ಅಪಘಾತಗಳು ನಡೆಯುವ ಸಂಭವವಿರುತ್ತದೆ ಮತ್ತು ಸಂಭ್ರಮಾಚರಣೆಯನ್ನು *ಬೆಳಗಿನ ಜಾವ 01:00 ಗಂಟೆಯ* ಒಳಗಾಗಿ ಮುಕ್ತಾಯಗೊಳಿಸುವುದು. 

2) ವಾಹನ ಸವಾರರ *ಸುರಕ್ಷತೆಯ ದೃಷ್ಠಿಯಿಂದ* ಮಧ್ಯಪಾನ ಮಾಡಿ ವಾಹನವನ್ನು ಚಾಲನೆ ಮಾಡದೇ, *ಮಧ್ಯಪಾನ ಮಾಡದೇ ಇರುವವರು ಮಾತ್ರ ವಾಹನ ಚಾಲನೆ ಮಾಡುವುದು* ಸೂಕ್ತವಿರುತ್ತದೆ.

3) *ಘನ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ* ಹೊರಾಂಗಣದ ಸಂಭ್ರಮಾಚರಣೆಗಳಲ್ಲಿ ರಾತ್ರಿ 10 ಗಂಟೆಯ ವರೆಗೆ ನಿಗದಿ ಪಡಿಸಿದ ಶಬ್ದ ಮಿತಿಯ ಒಳಗೆ ಸೌಂಡ್ ಸಿಸ್ಟಂ ಗಳನ್ನು ಬಳಸುವುದು ಮತ್ತು *ರಾತ್ರಿ 10 ಗಂಟೆಯ ನಂತರ ಕೇವಲ ಒಳಾಂಗಣ ಸಂಭ್ರಮಾಚರಣೆಗಳಲ್ಲಿ* ಮಾತ್ರ ಶಬ್ದ ಮಿತಿಯ ಒಳಗೆ ಸೌಂಡ್ ಸಿಸ್ಟಂ ಗಳನ್ನು ಬಳಸುವುದು.

4) ಹೊಸ ವರ್ಷ ಆಚರಣೆ ಸಮಾರಂಭದ ಆಯೋಜಕರು, ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಪೊಲೀಸ್ ಇಲಾಖೆಯ  ಗಮನಕ್ಕೆ ತರುವುದು, *ಕಾನೂನುನಿನ ಚೌಕಟ್ಟಿನ ಒಳಗೆ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಅಭ್ಯಂತರವಿರುದಿಲ್ಲ* ಮತ್ತು ಕಾರ್ಯಕ್ರಮದಲ್ಲಿ *ಯಾವುದೇ ರೀತಿಯ  ಮಾದಕ ವಸ್ತುಗಳನ್ನು ಬಳಸಬಾರದು.*

5) ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವವರ *ಸುರಕ್ಷತೆಯ ದೃಷ್ಠಿಯಿಂದ, ಅಪಾಯವಿರುವ ಸ್ಥಳಗಳಾದ ಮೇಲಂತಸ್ತು (ಟಾಪ್ ರೂಫ್) ಗಳಲ್ಲಿ ಮತ್ತು ಎತ್ತರವಾದ ಸ್ಥಳಗಳಲ್ಲಿ* ಕಾರ್ಯಕ್ರಮಗಳನ್ನು ಆಯೋಜನೆ ಮಾಡವುದು ಸೂಕ್ತವಿರುವುದಿಲ್ಲ. ಆದ್ದರಿಂದ ಎಲ್ಲಾ *ಸುರಕ್ಷತಾ ನಿಯಮಗಳನ್ನು ಮತ್ತು  ಮುಂಜಾಗ್ರತಾ ಕ್ರಮಗಳನ್ನು  ಪಾಲಿಸಿ,* ಸುರಕ್ಷಿತವಾದ ಸ್ಥಳಗಳಲ್ಲಿಯೇ  ಕಾರ್ಯಕ್ರಮವನ್ನು ಆಯೋಜನೆ ಮಾಡುವುದು. 

6) ಸಾರ್ವಜನಿಕರ ಹಿತ ದೃಷ್ಠಿಯಿಂದ, *ಸಂಭ್ರಮಾಚರಣೆಯನ್ನು ಕಾರ್ಯಕ್ರಮ ಆಯೋಜಿಸಿರುವ ಸ್ಥಳದ ಹೊರಗಡೆ,* ರಸ್ತೆಬದಿಗಳಲ್ಲಿ ಮಾಡದೇ, *ನಿಗದೀಪಡಿಸಿರುವ ಸ್ಥಳದ ಒಳಗಡೆಯೇ ಮಾಡುವಂತೆ* ನೋಡಿಕೊಳ್ಳುವುದು ಕಾರ್ಯಕ್ರಮದ ಆಯೋಜಕರ ಜವಬ್ದಾರಿಯಾಗಿರುತ್ತದೆ.   

7) *ಯಾವುದೇ ತುರ್ತು ಸಂದರ್ಭದಲ್ಲಿ* ಅಥವಾ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ/ ಪೊಲೀಸ್ ಕಂಟ್ರೋಲ್ ರೂಂ ನಂಬರ್: 9480803300 / 08182-261413 ಅಥವಾ ತುರ್ತು ಸಹಾಯವಾಣಿ  112 ಗೆ ಕರೆ ಮಾಡುವಂತೆ ತಿಳಿಸಿದರು.

     ಈ ಸಂದರ್ಭದಲ್ಲಿ *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, *ಶ್ರೀ ಬಾಲರಾಜ್,* ಡಿವೈಎಸ್ಪಿ, ಶಿವಮೊಗ್ಗ ಎ ಉಪ ವಿಭಾಗ ಮತ್ತು ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ *ಹೋಟೆಲ್, ಕ್ಲಬ್ ಮತ್ತು ರೆಸಾರ್ಟ್* ಮಾಲೀಕರು ಹಾಗೂ ವ್ಯವಸ್ಥಾಪಕರುಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.