ಶಿವಮೊಗ್ಗದಲ್ಲಿ *2023ನೇ* ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು *ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸ್ ಇಲಾಖೆ

  *2023ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ  ಹಿಂದಿರುಗಿಸುವ ಕವಾಯತು (Property Return Parade)*
 ದಿನಾಂಕಃ 30-12-2023 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್  ವತಿಯಿಂದ, ಪೊಲೀಸ್ ಕವಾಯತು ಮೈದಾನ ಡಿಎಆರ್ ಶಿವಮೊಗ್ಗದಲ್ಲಿ *2023ನೇ* ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು *ವಾರಸುದಾರರಿಗೆ  ಹಿಂದಿರುಗಿಸುವ ಕವಾಯತನ್ನು* ಹಮ್ಮಿಕೊಳ್ಳಲಾಗಿತ್ತು.
*2023ನೇ* ಸಾಲಿನ *181* ಪ್ರಕರಣಗಳು ಮತ್ತು ಹಿಂದಿನ ವರ್ಷಗಳ *42 ಪ್ರಕರಣಗಳು ಸೇರಿ ಒಟ್ಟು 223 ಪ್ರಕರಣಗಳನ್ನು ಪತ್ತೆ* ಮಾಡಿ, ಅಂದಾಜು ಮೌಲ್ಯ *3,55,24,368/- ರೂಗಳ ಮಾಲುಗಳನ್ನು ವಶ ಪಡಿಸಿಕೊಂಡಿರುತ್ತದೆ* ಮತ್ತು CEIR ( Central Equipment Identity Register)  *ಪೋರ್ಟಲ್ ಮುಖಾಂತರ ಕಳೆದು ಹೋದ ಒಟ್ಟು 333 ಮೊಬೈಲ್ ಫೋನ್* ಗಳನ್ನು ಪತ್ತೆ ಹಚ್ಚಲಾಗಿರುತ್ತದೆ. 2023ನೇ ಸಾಲಿನಲ್ಲಿ* ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ *ಒಟ್ಟು 492 ಸ್ವತ್ತು ಕಳವು ಪ್ರಕರಣಗಳು* ವರದಿಯಾಗಿರುತ್ತವೆ. ಸದರಿ ಪ್ರಕರಣಗಳಲ್ಲಿ 1 ಲಾಭಕ್ಕಾಗಿ ಕೊಲೆ,  7 ದರೋಡೆ, 11 ಸುಲಿಗೆ, 1 ಶ್ರೀ ಗಂಧ ಮರದ  ತುಂಡುಗಳ ಕಳ್ಳತನ,  7 ಸರಗಳ್ಳತನ, 7 ಜಾನುವಾರು ಕಳವು, 8 ಮನೆಗಳ್ಳತನ, 27 ಸಾಮಾನ್ಯ ಕಳವು, 43 ಕನ್ನಕಳವು, 63 ವಾಹನ ಕಳವು ಹಾಗೂ 6 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು *181 ಪ್ರಕರಣಗಳನ್ನು* ಪತ್ತೆ ಮಾಡಿ ಅಂದಾಜು ಮೌಲ್ಯ *2,96,29,775/- ರೂ* ಗಳ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತದೆ.
ಅಲ್ಲದೇ *ಹಿಂದಿನ ವರ್ಷಗಳಲ್ಲಿ* ವರದಿಯಾದ ಪ್ರಕರಣಗಳಲ್ಲಿ 19 ಮನೆಗಳ್ಳತನ,  2 ಮೋಸ, 6 ಸಾಮಾನ್ಯ ಕಳವು ಮತ್ತು 15 ವಾಹನ ಕಳವು ಸೇರಿದಂತೆ *ಒಟ್ಟು 42  ಪ್ರಕರಣಗಳನ್ನು* ಸಹಾ ಪತ್ತೆ ಮಾಡಿ ಅಂದಾಜು ಮೌಲ್ಯ *58,94,593/-* ರೂಗಳ ಮಾಲುಗಳನ್ನು ವಶ ಪಡಿಸಿಕೊಂಡಿದ್ದು *ಸದರಿ ಮಾಲನ್ನು  ಹಾಗೂ CEIR ಪೋರ್ಟಲ್* ಮುಖಾಂತರ ಪತ್ತೆ ಹಚ್ಚಲಾದ *ಮೊಬೈಲ್ ಫೋನ್ ಗಳನ್ನು ಈ ದಿನ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.*ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ, ಕಳೆದುಹೋದಮಾಲನ್ನು *ಅವುಗಳ ಮಾಲೀಕರಿಗೆ ಹಿಂದಿರಿಸುವಲ್ಲಿ, ಪ್ರಮುಖ ಪಾತ್ರವಹಿಸಿದ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ* ಉತ್ತಮ ಕಾರ್ಯಕ್ಕೆ *ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ* ರವರು ಪ್ರಂಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.