ಡಿಸೆಂಬರ್ 11 ರಿಂದ 17ರವರೆಗೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಜ್ಞಾನದೀಪ ಸೀನಿಯರ್ ಶಂಕರಿ ಶಾಲೆ

ಶಿವಮೊಗ್ಗ:  ಈ ವರ್ಷ ರಜತ ಮಹೋತ್ಸವದ ಪ್ರಯುಕ್ತ ನಮ್ಮ ಶಾಲೆಯು ಜ್ಞಾನದೀಪ ಬೆಳ್ಳಿ ಹಬ್ಬವನ್ನು ಡಿಸೆಂಬರ್ 11 ರಿಂದ 17ರವರೆಗೆ ಒಂದು ವಾರದ ಕಾಲ ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜ್ಞಾನ ದೀಪ ಶಾಲೆಯ ಪ್ರಾಂಶುಪಾಲರಾದ ಶ್ರೀಕಾಂತ್ ಎಮ್ ಹೆಗ್ಡೆ ಹೇಳಿದರು.
ಇಂದು ಬೆಳಿಗ್ಗೆ ಮಥುರಾ ಪ್ಯಾರಡಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು

ದಿನಾಂಕ 11/12/2023 ಸೋಮವಾರ 10:00ಗಂಟೆಗೆ ಶ್ರೀಮದ್‌ ಜಗದ್ಗುರು ಶಂಕರಾಚಾರ ಕೂಡಲಿ ಶೃಂಗೇರಿ ಮಹಾಸಂಸ್ಥಾನಮ್‌ ಶ್ರೀ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಜ್ಞಾನದೀಪ ಬೆಳ್ಳಿಹಬ್ಬ ಉದ್ಘಾಟನೆಗೊಳ್ಳಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ತಲವಾನೆ ಪ್ರಕಾಶ್‌ರವರು ವಹಿಸಲಿದ್ದಾರೆ. ಇಪ್ಪತ್ತೈದು ವರ್ಷಗಳ ಹೆಜ್ಜೆ ಗುರುತುಗಳನ್ನು ಡಾ|| ನಾರಾಯಣ್‌ರವರು ಸಭೆಗೆ ಪರಿಚಯಿಸಲಿದ್ದಾರೆ ಎಂದರು

ದಿನಾಂಕ 12/12/2023ರಂದು ವಿದ್ಯಾರ್ಥಿಗಳಿಂದ ವಿಜ್ಞಾನ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ. ಇದರ ಉದ್ಘಾಟನೆಯನ್ನು ಗಗನಯಾನ ಪ್ರಾಜೆಕ್ಟ್ ಇಸ್ರೋ ಬೆಂಗಳೂರು ಇದರ ಮಿಷನ್ ನಿರ್ದೇಶಕರಾದ ಡಾ|| ಆರ್, ಹಟನ್‌ರವರು ನೆರವೇರಿಸಲಿದ್ದಾರೆ. 'ಗಗನಯಾನ ಮಿಷನ್' ಬಗ್ಗೆ ಶ್ರೀಯುತರು ಉಪನ್ಯಾಸ ಹಾಗೂ ಸಂವಾದವನ್ನು ನಡೆಸಲಿದ್ದಾರೆ ಎಂದರು.
ದಿನಾಂಕ 13/02/2023ರಂದು ಜ್ಞಾನದೀಪ ಶಾಲೆಯಲ್ಲಿ ಓದಿ ಹಮ್ಮೆಯ ಸಾಧನೆಯನ್ನು ಮಾಡಿರುವ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರಕ್ರಮ ಇರುತ್ತದೆ. ಸಂವಾದದಲ್ಲಿ ಸಾಧಕರಾದ ಪಿಯರ್‌ಲೈಟ್‌, ಲೈನರ್ ಮತ್ತು ಫೌಂಡರ್‌ನ ನಿರ್ದೇಶಕರಾದ ಶ್ರೀ ಅಂಕಿತ್ ದಿವೇಕರ್, ಸೀನಿಯರ್ ಎಂಜಿನಿಯರ್ & ಬ್ಯುಸಿನೆಸ್ ಕಂಪ್ಸಲೆಂಟ್ ಆಗಿರುವ ಶ್ರೀ ವಿನಯ್ ದೊಡ್ಡಮನೆ ಹಾಗೂ ಚಾರ್ಟೆಡ್ ಅಕೌಂಟೆಂಟ್ ಶ್ರೀ ತೇಜಸ್ ಕೆ ಎಸ್ ಭಾಗವಹಿಸಲಿದ್ದಾರೆ ಎಂದರು.
ದಿನಾಂಕ 14/12/2023ರಂದು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಶಾಲಿಗಳಾದ 2150 ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಣಾ ಕಾಠ್ಯಕ್ರಮ ಇರುತ್ತದೆ. ಇದರಲ್ಲಿ ಮುಖ್ಯ ಅತಿಥಿಗಳಾಗಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರ ರಾಷ್ಟ್ರೀಯ ಕ್ರೀಡಾಪಟು ಶ್ರೀ ಎಸ್ ಎಸ್ ಅಶೋಕ್ ಕುಮಾರ್ ಹಾಗೂ ಪ್ರಸಿದ್ಧ ನಾಟಕ ಹಾಗೂ ಚಲನಚಿತ್ರ ಕಲಾವಿದರಾದ ಶ್ರೀ ಎಂ ಎನ್ ಸುರೇಶ್‌ರವರು ಭಾಗವಹಿಸಲಿದ್ದಾರೆ ಎಂದರು.
ದಿನಾಂಕ 15/12/2023ರಂದು ಸಂಜೆ 5:30ಕ್ಕೆ ಚನ್ನಗಿರಿ, ಶಿವಮೊಗ್ಗ, ಭದ್ರಾವತಿ ಹಾಗೂ ಕೈಮರಗಳಲ್ಲಿರುವ ಜ್ಞಾನದೀಪ ಪ್ರೀಸ್ಕೂಲ್‌ನ ಎಲ್ಲಾ ವಿದ್ಯಾರ್ಥಿಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರಕ್ರಮ ಇರುತ್ತದೆ. ಇದಕ್ಕೆ ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಸಾಹಿತಿ ಡಾ|| ಜಯಪ್ರಕಾಶ್ ಮಾವಿನಕುಳಿಯವರು ಭಾಗವಹಿಸುತ್ತಿದ್ದಾರೆ ಎಂದರು.
ದಿನಾಂಕ 16 ಮತ್ತು 17ನೇ ತಾರೀಖಿನಂದು ಜ್ಞಾನದೀಪ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾಠ್ಯಕ್ರಮ ಇರುತ್ತದೆ. 17/12/2023 ರಂದು ಮಧ್ಯಾಹ್ನ 2:00 ಗಂಟೆಗೆ ಪದ್ಮಭೂಷಣ ಡಾ|| ಬಿ.ಎನ್ ಸುರೇಶ್ ಇವರಿಂದ ಶಿಕ್ಷಣ, ಕ್ರೀಡೆ, ವಿಜ್ಞಾನ, ಏರೋಬಿಕ್ಸ್ ವಿಭಾಗದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡಿದ ಸುಮಾರು 150 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಇರುತ್ತದೆ ಎಂದರು.
 ಅನಂತರ “ದ ಸಕ್ಸಸ್‌ ಫುಲ್ ಅಚೀವ್‌ಮೆಂಟ್ ಆಫ್ ಚಂದ್ರಯಾನ -3 ಮತ್ತು ಆದಿತ್ಯ ಎಲ್- 1" ಎಂಬ ವಿಷಯದ ಬಗ್ಗೆ ಡಾ|| ಬಿ ಎನ್ ಸುರೇಶ್‌ರವರು ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.

ಆ ದಿನ ಸಂಜೆ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಸಂಜೆ 5:30ಕ್ಕೆ ವಿದ್ಯಾರ್ಥಿಗಳಿಂದ ವರ್ಣರಂಜಿತ ಸಾಂಸ್ಕೃತಿಕ ಕಾಠ್ಯಕ್ರಮ ನಡೆಯಲಿದೆ.
ಆಯ್ದ ಕಾರ್ಯಕ್ರಮಗಳನ್ನು ವೀಕ್ಷಿಸಲು ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾರಂಭವಾದ ಪ್ರಥಮ ಖಾಸಗಿ ಸಿಬಿಎಸ್‌ಇ ಪಾತ್ರ ಮಲಿದು ಈರದಲ್ಲಿ ಗುರುವಾರ ಈ ಉದ್ದೇಶದಿಂದ ಪ್ರಾರಂಭವಾದ ಶಾಲೆ ಇಂದು ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. 1999ರಲ್ಲಿ 10 ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದೆ. ಬ್ರಹ್ಮ‌ನಿಂದ ಹನ್ನೆರಡ ತರಗತಿಯವರೆಗೆ ಒಟ್ಟು 2500 ವಿದ್ಯಾರ್ಥಿಗಳಿಗೆ ಜ್ಞಾನದೀಪ ಶಾಲೆ ಜ್ಞಾನವನ್ನು ಧಾರೆ ಎರೆಯುತ್ತಿದೆ, ಇಲ್ಲಿತ್ತು ಎಕರೆ ಗರಳ ಸುಸಜ್ಜಿತ ಕಟ್ಟಡ, ನಾಲ್ಕು ಎಕರೆ ಆಟದ ಮೈದಾನ 200 ಮೀಟರ್ ಅಥಟಕ್ ಚಾರ್, ಎಲ್ಲಾ ರ‌ಗಳಲ್ಲಿಯೂ ಆಡಬಹುದಾದ ಅಂತರ ರಾಷ್ಟ್ರೀಯ ಗುಣಮಟ್ಟದ ಎರಡು ಬ್ಯಾಸ್ಕೆಟ್‌ಬಾಲ್ ಕೋರ್ಟ್‌ಗಳನ್ನು ಹೊಂದಿದೆ, ಏಕಕಾಲದಲ್ಲಿ ಹಕ್ಕಕ್ಕಿಂತ ಹೆಚ್ಚು ಆಟಗಳನ್ನು ಆಡಲು ಸೌಲಭ್ಯವಿರುವ ಕ್ರೀಡಾಂಗಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ನಲವತ್ತೈದು ಶಾಲಾ ಬಸ್‌ಗಳನ್ನು ಹೊಂದಿರು ಶಾಲೆಯಿಂದ 40 ಕಿ.ಮೀ ವ್ಯಾಪ್ತಿಯಲ್ಲಿರುವ ಶಿವಮೊಗ್ಗ, ಭದ್ರಾವತಿ, ಚನ್ನಗಿರಿ, ಹೊನ್ನಾಳಿ, ಆಗಟೇರಿಯಿಂದ ಮಕ್ಕಳನ್ನು ಶಾಲೆಗೆ ಕರೆತರುವ ಬಸ್‌ಗಳ ವ್ಯವಸ್ಥೆ ಇದೆ ಎಂದರು.
ಪ್ರತಿ ವರ್ಷ ಅತ್ಯುತ್ತಮ ಶೈಕ್ಷಣಿಕ ಫಲಿತಾಂಶವನ್ನು ಪಡೆಯುತ್ತಿರುವ ಜ್ಞಾನದೀಪ ಶಾಲೆಯ ಕುಮಾರಿ ಸಿಮಿಕ್ ಎಂ, ಕೋಟ್ಯಾ‌ 10ನೇ ತರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ, ಮಿನಲ್ ಟಿ.ಎಸ್ ಆಶ್ರಯ ಎಂ. ಪವಾರ್, ಮೃದುನಿ ಎಂ.ಆರ್, ಶ್ರೇಯಾ ಕಿಶೋರ್ ರಾಷ್ಟ್ರಮಟ್ಟದಲ್ಲಿ ಟಾಪ್ ಟೆನ್ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಲ್ಲಿಯವರೆಗೆ ನಮ್ಮ ಶಾಲೆಯ 775 ವಿದ್ಯಾರ್ಥಿಗಳು, ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿ ಹಲವಾರು ಬಹುಮಾನಗಳನ್ನು ಪಡೆಯುವ ಮೂಲಕ ನಾಡಿಗೆ, ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ, ಅಂದರೆ ಪ್ರವೇಶ ಪಡೆದ ಪ್ರತೀ ಏಳು ವಿದ್ಯಾರ್ಥಿಗಳಲ್ಲಿ ಒಬ್ಬರು ಅಂತರ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿರುವುದು ಶಾಲೆಗೆ ನಮ್ಮೆಯ ಸಂಗತಿ. ಈ ವರ್ಷ ರಾಷ್ಟ್ರ ಮಟ್ಟದ ಏರೋಬಿಕ್ಸ್‌ನ ಆರು ವಿಭಾಗಗಳಲ್ಲಿ ಹನ್ನೊಂದು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯುವ ಮೂಲಕ ಅಂತರ ರಾಷ್ಟ್ರೀಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.
 ಈ ವರ್ಷ ನೇಪಾಳದಲ್ಲಿ ಡಿಸೆಂಬರ್ 26, 27, 28 ರಂದು ಏಷಿಯನ್ ಏರೋಬಿಕ್ಸ್ ಚಾಂಪಿಯನ್‌ಸ್‌ನಲ್ಲಿ ನಮ್ಮ ಶಾಲೆಯ ಏಳು ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ.
ನಡೆಯಲಿರುವಸೌತ್ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಲವು ಬಾರಿ ಭಾಗವಹಿಸಿ ಬಹುಮಾನಗಳಿಸಿದ ಹೆಗ್ಗಳಿಕೆ ಜ್ಞಾನದೀಪ ಶಾಲೆಯದ್ದಾಗಿದೆ ಎಂದರು.
ಹಲವು ವಿದ್ಯಾರ್ಥಿಗಳು ರಾಜ್ಯಮಟ್ಟದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಯುವ ವಿಜ್ಞಾನಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರನ್ನು ಶಾಲೆಯ ದಶಮಾನೋತ್ಸ ಸಮಾರಂಭಕ್ಕೆ ಕರೆಸಿ 25 ಸಾವಿರ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುವ ಅವಕಾಶವನ್ನು ಕಲ್ಪಿಸಲಾಗಿತ್ತು, ಅಬ್ದುಲ್ ಕಲಾಂರವರ ಅಪೇಕ್ಷೆಯಂತೆ ಶಾಲೆಯ ಎದುರು ಸೈನ್ಸ್ಪಾರ್ಕ್ ಸ್ಥಾಪಿಸಲಾಗಿದೆ. ಇದಕ್ಕೆ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಮೊಟೋರಿಯಲ್ ಸೈನ್ಸ್ಪಾರ್ಕ್” ಎಂದು ನಾಮಕರಣ ಮಾಡಲಾಗಿದ್ದು ಇದರಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ 85 ಮಾದರಿಗಳಿವೆ.
ನೂರಾರು ಗಿಡಮೂಲಿಕೆ ಸಸ್ಯಗಳನ್ನು ಹೊಂದಿರುವ ಬಿಜಿಎಲ್ ಸ್ವಾಮಿ ಮೆಮೋರಿಯಲ್ ಔಸಧೀಯ ಸಸ್ಯಗಳ ಉದ್ಯಾನವನ ಅಧ್ಯಯನಕ್ಕೆ ಯೋಗ್ಯವಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಸರ್. ಸಿ.ವಿ. ರಾಮನ್ ಅವರು ಬಳಸುತ್ತಿದ್ದ ಆಕಾಶ ವೀಕ್ಷಣಾಲಯದ ಡೂಮನ್ನು ಜ್ಞಾನದೀಪ ಶಾಲೆ ಹೊಂದಿದೆ. ಇಲ್ಲಿ ಅತ್ಯಾಧುನಿಕವಾದ ಆಕಾಶ ವೀಕ್ಷಣಾ ದೂರದರ್ಶಕವನ್ನು ಅವಳಡಿಸಿ, ಆಕಾಶ ಕಾಯಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ರಾಷ್ಟ್ರೀಯ ಯೋಜನೆಯಲ್ಲಿ ಒಂದಾದ ಅಟಲ್ ಟಿಂಕರಿಂಗ್ ಲ್ಯಾಬ್ ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುತ್ತಿದೆ. ಇದರೊಂದಿಗೆ ಹಲವು ರೀತಿಯ ಸಂಶೋಧನೆಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ. ರಾಷ್ಟ್ರಮಟ್ಟದ ಎ.ಟಿ.ಎಲ್. ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ ಹತ್ತು ಸಾವಿರ ಶಾಲೆಗಳಲ್ಲಿ ಜ್ಞಾನದೀಪ ಶಾಲೆ 75ನೇ ಸ್ಥಾನ ಪಡೆದಿದೆ ಎಂದರು.
ಶಿವಮೊಗ್ಗ ಜಿಲ್ಲೆಯಿಂದ ಆಯ್ಕೆಯಾದ ಮೊದಲ ಮತ್ತು ಏಕೈಕ ಹೈಬ್ರಿಡ್ ಸ್ಕೂಲ್ ಎಂಬ ಹೆಗ್ಗಳಿಕೆ ಹೊಂದಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಲು ಅವಕಾಶವನ್ನು ಮಾಡಲಾಗಿದೆ, ಮಕ್ಕಳಿಗೆ ಹವ್ಯಾಸಿ ಕಲೆಗಳಾದ ನಾಟಕ, ಭರತನಾಟ್ಯ, ಯಕ್ಷಗಾನ, ಕರಾಟೆ, ಸಂಗೀತ, ಚಿತ್ರಕಲೆ, ವಾದ್ಯ ಸಂಗೀತ, ಬ್ಯಾಂಡ್‌ ಸೆಟ್‌ಗಳ ತರಬೇತಿಯನ್ನು ನುರಿತ ಅನುಭವಿ ಶಿಕ್ಷಕರಿಂದ ಕೊಡಿಸುವ ಮೂಲಕ ಅವರಿಗೆ ಕಲೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಪ್ರೀಸ್ಕೂಲ್‌ನಿಂದ ಹನ್ನೆರಡನೇ ತರಗತಿಯವರೆಗೆ ಸಿ.ಬಿ.ಎಸ್.ಇ. ತರಗತಿಗಳನ್ನು ನಡೆಸುತ್ತಿರುವ ಶಿವಮೊಗ್ಗ ಜಿಲ್ಲೆಯ ಏಕೈಕ ಶಾಲೆ ಎಂಬ ಹೆಗ್ಗಳಿಕೆ.

ಶಾಲೆಯದ್ದು. ಅನುಭವ ಹೊಂದಿದ ಶಿಕ್ಷಕ ವೃಂದವನ್ನು ಹೊಂದಿರುವ ಜ್ಞಾನದೀಪ ಶಾಲೆ 2500 ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಎಂಟನೆಯ ತರಗತಿಯಿಂದಲೇ ಜ್ಞಾನದೀಪ ಅಕಾಡೆಮಿಯ ಮೂಲಕ ಫೌಂಡೇಷನ್ ಕೋರ್ ನೀಟ್ ಮತ್ತು ಜೆ.ಇ.ಇ, ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ ಆಯ್ದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ. ಸಾಹಿತ್ಯ, ವಿಜ್ಞಾನ, ಆರೋಗ್ಯ, ಪರಿಸರ, ಹೆರಿಟೇಜ್, ಗಣಿತ ಕ್ಲಬ್‌ಗಳ ಮೂಲಕ ವೈವಿದ್ಯಮಯ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ನಡೆಯಸಲಾಗುತ್ತಿದೆ ಎಂದರು.
ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೆ ವಯೋಮಾನಕ್ಕೆ ಅನುಗುಣವಾಗಿ ಹಲವು ಸ್ಥಳಗಳ ಭೇಟಿ ಹಾಗೂ ಶೈಕ್ಷಣಿಕ ಪ್ರವಾಸವನ್ನು ಪ್ರತಿ ವರ್ಷವೂ ಹಮ್ಮಿಕೊಳ್ಳಲಾಗುತ್ತದೆ. ಶ್ರೀ ಅರಬಿಂದೋ ಫೌಂಡೇಷನ್ ಫಾರ್ ಎಜುಕೇಷನ್ ಎಂಬ ಹೆಸರಿನ ಅಡಿಯಲ್ಲಿ ನಡೆಯುತ್ತಿರುವ ಜ್ಞಾನದೀಪ ಶಾಲೆ ಸೇವಾ ಮನೋಭಾವ ಹೊಂದಿರುವ ಆಡಳಿತ ಮಂಡಳಿಯನ್ನು ಹೊಂದಿ ನಾಡಿಗೆ ಸತ್ಪಜೆಗಳನ್ನು ನೀಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜ್ಞಾನ ದೀಪ ಶಾಲೆಯ ಸಂಸ್ಥಾಪಕರಾದ ಸೇಫ್ ಮತ್ತು ಜೆವಿಎಸ್ ಖಜಾಂಚಿ ಡಾಕ್ಟರ್ ಕೆ.ಆರ್ ಶ್ರೀಧರ್, ಸೆಕ್ರೆಟರಿ ಬಿ.ಎಲ್. ನೀಲಕಂಠಮೂರ್ತಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.