ಡಿ.08 ಜಾತ್ಯಾತೀತ ಜನತಾದಳದ ಕಚೇರಿಯ ಆವರಣದಲ್ಲಿ ನಗರ ಅಧ್ಯಕ್ಷರ ಪದಗ್ರಹಣ ಸ್ವೀಕಾರ ಸಮಾರಂಭ
ಶಿವಮೊಗ್ಗ: ನಗರ ಜಾತ್ಯಾತೀತ ಜನತಾದಳದ ಅಧ್ಯಕ್ಷರನ್ನಾಗಿ ನನಗೆ ನೇಮಿಸಿದ್ದು, ಡಿ.08 ಜಾತ್ಯಾತೀತ ಜನತಾದಳದ ಕಚೇರಿಯ ಆವರಣದಲ್ಲಿ ಪದಗ್ರಹಣ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ದೀಪಕ್ಸಿಂಗ್ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ದೀಪಕ್ ಸಿಂಗ್ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಗಣ್ಯರಾದ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್,ಮುಖಂಡ ರದ ವೈ.ಎಸ್.ವಿ.ದತ್ತಾ, ಕೆ.ಬಿ.ಪ್ರಸನ್ನ ಕುಮಾರ್ ಭಾಗಿಯಾಗಲಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷ ಬಲಗೊಳಿಸಿ ಶಿವಮೊಗ್ಗ ನಗರದಲ್ಲಿ ಪಕ್ಷ ಬಲವರ್ಧನೆ ಮಾಡುವುದಾಗಿ ತಿಳಿಸಿದರು. ಶಿವಮೊಗ್ಗದ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸಮಾಡಲು ಜೆಡಿಎಸ್ ಪಕ್ಷ ಬದ್ಧವಾಗಿದೆ ಎಂದರು.
ಅಧಿಕಾರ ಸ್ವೀಕಾರಕ್ಕೂ ಮೊದಲು ಬೈಕ್ ರ್ಯಾಲಿ ನಡೆಯಲಿದೆ. ಶುಭಮಂಗಳ ಕಲ್ಯಾಣ ಮಂದಿರದಿಂದ ಬೈಕ್ ರ್ಯಾಲಿ ಪ್ರಾರಂಭವಾಗಿ ಪಕ್ಷದ ಕಚೇರಿ ವರೆಗೆ ಬೈಕ್ ರ್ಯಾಲಿ ನಡೆಯಲಿದೆ ಎಂದರು
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ರಾಮಕೃಷ್ಣ, ನರಸಿಂಹ, ಬೊಮ್ಮನ್ ಕಟ್ಟೆ ಮಂಜುನಾಥ್, ಸಂಗಯ್ಯ,ರವೀಶ್,ರಘು, ಮೊದಲಾದವರು ಉಪಸ್ಥಿತರಿದ್ದರು.

Leave a Comment