ರೈತರ ಸಾಲ ವಸೂಲಾತಿಗಾಗಿ ರೈತನಿಗೆ ಆಸ್ತಿ ಜಪ್ತಿ ಮಾಡುವ ನೋಟೀಸ್:ರೈತ ಸಂಘದಿಂದ ಪ್ರತಿಭಟನೆ

 ಶಿವಮೊಗ್ಗ: ತಾಲ್ಲೂಕಿನ ಹೊಳೆಹಟ್ಟಿ ಗ್ರಾಮದ ಕುಪ್ಪೇಂದ್ರಪ್ಪ ಎಂಬ ರೈತನಿಗೆ ಕೆನರಾ ಬ್ಯಾಂಕ್ ನವರು ರೈತರ ಸಾಲ ವಸೂಲಾತಿಗಾಗಿ ಆಸ್ತಿ ಜಪ್ತಿ ಮಾಡುವ ನೋಟೀಸ್ ಅನ್ನು ನೀಡಿದ ಹಿನ್ನಲೆಯಲ್ಲಿ ಇಂದು  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ಶಿವಮೊಗ್ಗ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಎದುರು ಪ್ರತಿಭಟನೆಯನ್ನು ನಡೆಸಲಾಯಿತು.
ರಾಜ್ಯಾಧ್ಯಕ್ಷರು ಮಾತನಾಡಿ
ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿದೆ. ಈ ಸಂಧರ್ಭದಲ್ಲಿ ಎಲ್ಲಾ ಬ್ಯಾಂಕ್ ನವರು ಅಸಲಿನಲ್ಲಿ 10% ಕಟ್ಟಿಸಿಕೊಂಡು ಸಾಲ ತಿರುವಳಿ ಮಾಡಿಕೊಡುತ್ತಿದ್ದಾರೆ. ಆದರೆ ಕೆನರಾ ಬ್ಯಾಂಕ್ ನವರು ಆಸ್ತಿ ಜಪ್ತಿ ನೋಟೀಸ್ ನೀಡುತ್ತಿದ್ದಾರೆ. ರೈತ ಕುಪ್ಪೇಂದ್ರಪ್ಪ ಮಾಡಿರುವ 9,50,000/-ರೂ.ಗಳಲ್ಲಿ 5ಲಕ್ಷ ರೂಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿದ್ದಾನೆ. ಈ ಅಸಲಿಗೆ ಬ್ಯಾಂಕ್ ನವರು ಬಡ್ಡಿ ಸೇರಿಸಿ 1ಕೋಟಿ 1ಲಕ್ಷ ರೂ.ಗಳನ್ನು ಕಟ್ಟಬೇಕು ಎನ್ನುತ್ತಿದ್ದಾರೆ. ಕೆನರಾ ಬ್ಯಾಂಕ್ ಮೀಟರ್ ಬಡ್ಡಿ ಹಾಕುವ ಬ್ಯಾಂಕ್ ಎನ್ನುಸುತ್ತಿದೆ. ಕುಪ್ಪೇಂದ್ರಪ್ಪನ ಅನಾರೋಗ್ಯದಿಂದ ಬಳಲುತ್ತಿದ್ದಾನೆ, ಅವನ ಪತ್ನಿ ಮೆದುಳಿನ ರಕ್ತಸ್ರಾವ ಸಮಸ್ಯೆಯಿಂದ ಪ್ರಜ್ಞೆ ಕಳೆದುಕೊಂಡಿದ್ದಾರೆ. ವಯೋವೃದ್ದೆ ಅಜ್ಜಿ ಹಾಸಿಗೆ ಹಿಡಿದಿದ್ದಾರೆ. ಮಕ್ಕಳ ಮದುವೆಗೆ ಮತ್ತು ಇವರುಗಳ ಚಿಕಿತ್ಸೆಗೆ ಜಮೀನು ಮಾರಾಟ ಮಾಡಿದ್ದಾನೆ ಆದ್ದರಿಂದ ಇದನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು. ಒಂದು ಆಸ್ತಿ ಜಪ್ತಿಗೆ ಬ್ಯಾಂಕ್ ನವರು ಮುಂದಾದರೆ ರೈತ ಸಂಘದ ವತಿಯಿಂದ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

ಈ ಸಂಧರ್ಭದಲ್ಲಿ
ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು,
ಜಿಲ್ಲಾ ಗೌರವಾಧ್ಯಕ್ಷರಾದ ಈಶಣ್ಣ, 
ಜಿಲ್ಲಾಧ್ಯಕ್ಷರಾದ ಎಸ್.ಶಿವಮೂರ್ತಿ,
ಜಿಲ್ಲಾ ಕಾರ್ಯಾಧ್ಯಕ್ಷರಾದ ಪಿ.ಡಿ ಮಂಜಪ್ಪ, ಕೆ.ರಾಘವೇಂದ್ರ,
ಗ್ರಾಮಾಂತರ ಅಧ್ಯಕ್ಷರಾದ ಕಸಟ್ಟಿ ರುದ್ರೇಶ್,
ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಸಿ.ಚಂದ್ರಪ್ಪ, 
ಭದ್ರಾವತಿ ತಾಲ್ಲೂಕು ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಪ್ಪ,
ಹಾಗೂ ಸಾಲಗಾರ ರೈತ ಕುಪ್ಪೇಂದ್ರಪ್ಪ, ಪತ್ನಿ ರಾಜೇಶ್ವರಿ, ಮಗ ಆದರ್ಶ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.