ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ವಿಧಿವಶ
ಬೆಂಗಳೂರು/ ದಾರದಹಳ್ಳಿ (ಚಿಕ್ಕಮಗಳೂರು):
ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಶ್ರೀಯುತ ಡಿ.ಬಿ.ಚಂದ್ರೇಗೌಡರು(87 ವರ್ಷ) ಇಂದು ಮುಂಜಾನೆ 12.20 ಕ್ಕೆ ದಾರದಹಳ್ಳಿಯ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದು ವಿಧಿವಶರಾದರು.
ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಮೂಡಿಗೆರೆ ಅಡ್ಯಂತಾಯ ರಂಗದಮಂದಿರದಲ್ಲಿ ಡಿ.ಬಿ. ಚಂದ್ರೇಗೌಡರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬುಧವಾರ ಮಧ್ಯಾಹ್ನ ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿಗಾಗಿ ಡಿ.ಬಿ.ಚಂದ್ರೇಗೌಡರ ಅಣ್ಣನ ಮಗ ಡಿ.ಬಿ. ಜಯಪ್ರಕಾಶ್ ದಾರದಹಳ್ಳಿ ಮೊ :9448004945 ಸಂಪರ್ಕಿಸಬಹುದು.
Leave a Comment