ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಮೂಲವ್ಯಾಧಿ (ಫೈಲ್ಸ್) ಮತ್ತು ಪಿಸ್ತೂಲಾ ಭಾದೆಗೆ ಲೇಸರ್ ಚಿಕಿತ್ಸೆ
ಶಿವಮೊಗ್ಗ:ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಮೂಲವ್ಯಾಧಿ (ಫೈಲ್ಸ್) ಮತ್ತು ಪಿಸ್ತೂಲಾ ಭಾದೆಗೆ ಲೇಸರ್ ಚಿಕಿತ್ಸೆ ನೀಡಲಾಗುವುದು ಎಂದು ಜನರಲ್ ಸರ್ಜನ್ ಡಾ.ಪ್ರವೀಣ್ ಕುಮಾರ್ ಹೇಳಿದರು.
ಇಂದು ಬೆಳಿಗ್ಗೆ ನಗರದ ಕುವೆಂಪು ರಸ್ತೆಯಲ್ಲಿ ರುವ ಸಹ್ಯಾದ್ರಿ ನಾರಾಯಣ ಕ್ಲಿನಿಕ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ನೀಡಿದರು.
ಈ ಲೇಸರ್ ಚಿಕಿತ್ಸೆಯಲ್ಲಿ ಗುದದ್ವಾರದ ಮೂಲಕ ಲೇಸರ್ ಫೈಬರ್‌ಅನ್ನು ರವಾನಿಸಿ ಮತ್ತು ನಂತರ ಅದೊರೊಹಾಯಿರ್
ದ್ರವ್ಯರಾಶಿಗೆ ಚಿಕಿತ್ಸೆ ನೀಡಲು ನಿಯಂತ್ರಿತ ಲೇಸರ್ ಶಕ್ತಿಯನ್ನು ಬಳಸುತ್ತಾರೆ.
ಈ ವಿಧಾನವು ತುಂಬಾ ಸುರಕ್ಷಿತವಾಗಿದೆ. ಮತ್ತು ಇದು ನಿಯಂತ್ರಿತ ಲೇಸರ್ ಶಕ್ತಿಯನ್ನು ಬಳಸುವುದರಿಂದ ಸುತ್ತಮುತ್ತಲಿನ
ಅಂಗಾಶಗಳಿಗೆ ಯಾವುದೇ ಹಾನಿಯಾಗುವುದಿಲ್ಲ.
ಸಾಮಾನ್ಯ ಅರವಳಿಕೆಯ ಅಗತ್ಯವಿಲ್ಲ.
ಯಾವುದೇ ಶಸ್ತ್ರಚಿಕಿತ್ಸಾ ವಿಧಾನಗಳಿಂದ ಕಡಿಮೆ ನೋವು
ಅಸ್ಪತ್ರೆಯಲ್ಲಿ ಉಳಿಯುವ ಅಗತ್ಯವಿಲ್ಲ.
ಸುರಕ್ಷಿತ ಚಿಕಿತ್ಸೆಯ ಆಯ್ಕೆ
ಕಾರ್ಯ ವಿಧಾನದ ಸಮಯದಲ್ಲಿ ಕಡಿಮೆ ರಕ್ತಸ್ರಾವ,
ತ್ವರಿತ ಚಿಕಿತ್ಸೆ
ಶಬ್ದಮೆ ಚೇತರಿಕೆಯ ಅವಧಿ
ಯಾವುದೇ ಕಡಿತ, ತೆರೆದ ಗಾಯಗಳು ಅಥವಾ ಹೊಲಿಗೆಗಳಿಲ್ಲ. ನಿಯಮಿತ ಚಟುವಟಿಕೆಗಳಿಗೆ ತ್ವರಿತ ಮರಳುವಿಕೆ.
ಕಾರ್ಯ ವಿಧಾನವನ್ನು ಪೂರ್ಣವಾಗಿಸಲು ಕಡಿಮೆ ಅವಧಿ. ಹೆಚ್ಚಿನ ಯಶಸ್ಸಿನ ಪ್ರಮಾಣ
ಕಡಿಮೆ ಫಾಲೋಅಪ್ ಭೇಟಿಗಳು
ಮರುಕಳಿಸುವಿಕೆಯ ಕಡಿಮೆ
ಶಸ್ತ್ರಚಿಕಿತ್ಸೆಯ ನಂತರದ ಸೋಂಕುಗಳ ಅಪಾಯವಿಲ್ಲ ಎಂದರು.
*ಮೂಲವ್ಯಾಧಿ:*
ಮನುಷ್ಯನು ಮಲ ವಿಸರ್ಜಿಸುವ ಮಾರ್ಗವಾದ ಗುದದ್ವಾರದ ಒಳಭಾಗದಲ್ಲಿ ಶೇಖರಣೆಗೊಳ್ಳುವ ಉರಿಯೂತದ ಬಾವು ಸಾಮಾನ್ಯವಾಗಿ ಪೈಲ್ಸ್ ಎಂದೇ ಎಲ್ಲೆಡೆ ಕರೆಯಲ್ಪಡುವ ಮೂಲವ್ಯಾಧಿಯು ಬಹಳಷ್ಟು ಜನರು ಅನುಭವಿಸುವ ಒಂದು ಆರೋಗ್ಯ ಬಂದತಿರುವ ಅಂಗಾರಿಶಗಳನ್ನೇ ಪೈಲ್ಸ್ ಅಥವಾ ಮೂಲವ್ಯಾಧಿ ಎಂದು ಕರೆಯುತ್ತಾರೆ,
*ಇದರ ಲಕ್ಷಣಗಳು:*
ಗುದದ್ವಾರದ ಬಳಿ ಗಟ್ಟಿಯಾದ ಹಾಗೂ ನೋವಿನಿಂದ ಕೂಡಿರುವ ಗಂಟಿನ ಉಪಸ್ಥಿತಿಯನ್ನು ಮನುಷ್ಯನು ಅನುಭವಿಸುತ್ತಾನೆ. ಇಂತಹ ಗಂಟಿನಲ್ಲಿ ರಕ್ತವಿದ್ದರೆ ಇದನ್ನು ಧೋಂಬೋಸ್ಟ್ ಎರ್ಕ್ಟನಲ್ ಡ್ಯೂಮರಾಯ್ ಆಸ ಎಂದು ಕರೆಯುತ್ತಾರೆ. ಮೂಲವ್ಯಾಧಿಯಿಂದ ಬಳಲುವ ಮನುಷ್ಯ ಮಲವಿಸರ್ಜಿಸಿದ ನಂತರವೂ ಅವನಲ್ಲಿ ಪೂರ್ಣವಾಗಿ ವಿಸರ್ಜಿತವಾಗಿದೆ ಎಂಬ ಸಮಾಧಾನ ಅಥವಾ ತೃಪ್ತಿ ಎಂಬುವುದು
ಇರುವುದಿಲ್ಲ.
ಮೂಲವ್ಯಾಧಿಯ ಪರಿಣಾಮಗಳು:
ಮಲ ವಿಸರ್ಜನೆಯ ಸಂದಂರ್ಭದಲ್ಲಿ ಅತಿಯಾದ ರಕ್ತಸ್ರಾವ ಉಂಟಾಗುವುದು. ಕೊನೆಗೆ ಇದು ಅನೇಮಿಯಾ ಉಂಟು ಮಾಡಬಲ್ಲದು.
ಸೋಂಕು ಉಂಟಾಗುವುದು ಎಂದರು.
ಮಲ ವಿಸರ್ಜನೆಯಾಗುವ ಗುದದ್ವಾರದ ಬಳಿ ಕೆರತದ ಅನುಭವ, ಕೆಂಪಾಗುವಿಕೆ ಹಾಗೂ ಬಾವು ಕಾಣುವುದು. ಮಲವಿಸರ್ಜನೆಯ ಸಂದರ್ಭದಲ್ಲೂ ನೋವು ಉಂಟಾಗುವುದು ಎಂದರು.
ಮೂಲವ್ಯಾಧಿ ಉಂಟಾಗಲು ಕಾರಣಗಳು :
ತೀರ್ವವಾದ ಅಥವಾ ನಿರಂತರವಾದ ಮಲಬದ್ಧತೆ ಅನುಭವಿಸಿದಾಗ ಗುದ ಭಾಗದೊಳಗಿನ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ಅತಿಯಾದ ಭೇದಿ ಉಂಟಾದ ಸಂದರ್ಭಗಳಲ್ಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.
ಮಲ ವಿಸರ್ಜನೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುವುದು.
ಗುದದ್ವಾರದ ಬಳಿ ಅಥವಾ ಒಳ ಬಾಗದಲ್ಲಿ ಹೊಸದಾದ ಚಾನೆಲ್ ಒಂದು ಸೃಷ್ಟಿಯಾಗುವಿಕೆ.
ಬಾಹ್ಯವಾಗಿ ಉಂಟಾಗುವ ಮೂಲವ್ಯಾಧಿಯು ಗುದದ್ವಾರದ ಸುತ್ತ ಗಂಟುಗಳನ್ನು ನಿರ್ಮಿಸುತ್ತದೆ. ರಕ್ತ ಹೆಪ್ಪುಗಟ್ಟಿದ ಸಂದರ್ಭದಲ್ಲಿ ಅವು ವಿಪರೀತವಾಗಿ ಕೆರೆತ ಹಾಗೂ ನೋವನ್ನು ಉಂಟುಮಾಡುತ್ತವೆ. ಈ ಸಂದರ್ಭದಲ್ಲಿ ಇದನ್ನು ಉಪಚರಿಸಬೇಕಾಗಿರುವುದು
ಅನಿವಾರ್ಯವಾಗುತ್ತದೆ.
ಒಮ್ಮೊಮ್ಮೆ ಅತಿಯಾದ ಭಾರ ಎತ್ತುವಿಕೆಯಿಂದಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.
ಬಲವಾಗಿ ಮಲ ವಿಸರ್ಜಿಸುವಾಗಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.
ಇಲ್ಲಿ ಗಮನಿಸಬೇಕಾದ ಒಂದು ಅಂಶವೆನೇಂದರೆ ವಯಸ್ಸಾದಂತೆ ಮೂಲವ್ಯಾಧಿಗೊಳಪಡುವ ಸಂಭವನೀಯತೆ ಹೆಚ್ಚಾಗ ತೊಡಗುತ್ತದೆ.
ಆಹಾರ ಪದ್ಧತಿ :
ಹಣ್ಣು ಮತ್ತು ತರಕಾರಿಗಳಂತಹ ಹೆಚ್ಚು ಫೈಬರ್ ಯುಕ್ತ ಆಹಾರ ಸೇವನೆಯಿಂದ, ಅವಶ್ಯಕ ಪ್ರಮಾಣದಷ್ಟು ನೀರು ಕುಡಿಯುವುದರಿಂದ ಹಾಗೂ ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಮಲಬದ್ಧತೆಯನ್ನು ಹೋಗಲಾಡಿಸಿ ಆ ಮೂಲಕ ಅದರಿಂದ ಉಂಟಾಗಬಹುದಾಗಿದ್ದ ಮೂಲವ್ಯಾಧಿಯನ್ನು ಬರದಂತೆ ತಡೆಗಟ್ಟಬಹುದು ಎಂದರು.
ಈ ಸಂದರ್ಭದಲ್ಲಿ ಶೈಲೇಶ್ , ಶ್ರೀಯುತ ವರ್ಗೀಸ್ ಪಿ ಜಾನ್ - ವ್ಯವಸ್ಥಾಪಕ ನಿರ್ದೇಶಕರು ಶ್ರೀಯುತ ರಾಜಸಿಂಗ್ - ಮಾರ್ಕೆಟಿಂಗ್ ಮುಖ್ಯಸ್ಥರು ಹಾಜರಿದ್ದರು.
Leave a Comment