ಶಿವಮೊಗ್ಗ ಜಿಲ್ಲಾ ಜನತಾದಳ( ಜಾತ್ಯಾತೀತ) ನೂತನ ಜಿಲ್ಲಾದ್ಯಕ್ಷರಾಗಿ ಶ್ರೀ ಕಡಿದಾಳ್ ಗೋಪಾಲ್ ನೇಮಕ


ಶಿವಮೊಗ್ಗ: ಶಿವಮೊಗ್ಗ  ಜಿಲ್ಲಾ ಜನತಾದಳ( ಜಾತ್ಯಾತೀತ) ನೂತನ ಜಿಲ್ಲಾದ್ಯಕ್ಷ ರನ್ನಾಗಿ ಶ್ರೀ ಕಡಿದಾಳ್ ಗೋಪಾಲ್ ರವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿಯವರು ನೇಮಕಾತಿ ಆದೇಶವನ್ನು ಕಡಿದಾಳ್ ಗೋಪಾಲ್ ರವರಿಗೆ ಇಂದು ಆದೇಶ ನೀಡಿರುತ್ತಾರೆ.20 ವರ್ಷದಿಂದ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಮಾಡಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಜೆಡಿಎಸ್ ಪಕ್ಷ ತೊರೆದು ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಇದೀಗ ಶ್ರೀಕಾಂತ್ ರವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಾಗಿ ಸೇರಿ ಸದಸ್ಯತ್ವ ಪಡೆದ ಪರಿಣಾಮ ಇಂದು ನೂತನ ಜಿಲ್ಲಾದ್ಯಕ್ಷ ರನ್ನಾಗಿ ನೇಮಕ ಮಾಡಲಾಗಿದೆ.
ಜಿಲ್ಲಾ ಜೆಡಿಎಸ್ ಪಕ್ಷಕ್ಕೆ ಆನೆ ಬಲದಂತಿದ್ದ ಎಂ.ಶ್ರೀಕಾಂತ್ ಅವರು ಕಾಂಗ್ರೆಸ್ ಸೇರ್ಪಡೆ ಮೂಲಕ ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡಿದ್ದರು.

ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದ ಆಯನೂರು ಮಂಜುನಾಥ ಸಹ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದೀಗ ಶಿವಮೊಗ್ಗದಲ್ಲಿ ಜೆಡಿಎಸ್ ಪಕ್ಷದಲ್ಲಿ ಜಿಲ್ಲಾ ಅದ್ಯಕ್ಷ ಸ್ಥಾನಕ್ಕೆ ನೂತನ ಸಾರಥಿ ಹುಡುಕಾಟ ಆರಂಭವಾಗಿತ್ತು.

ಇದೀಗ 5 ಜನರ ಮಧ್ಯೆಶಿವಮೊಗ್ಗ ಜಿಲ್ಲಾ  ಅದ್ಯಕ್ಷ ಸ್ಥಾನಕ್ಕೆ ಪೈಪೋಟಿ ಇತ್ತು; ಈ ಬಗ್ಗೆ ಹಲೋ ಶಿವಮೊಗ್ಗ ದಿನಪತ್ರಿಕೆ ಒಂದು ತಿಂಗಳ ಹಿಂದೇ ಕಡಿದಾಳ್ ಗೋಪಾಲ್ ರವರು ಅಧ್ಯಕ್ಷರಾಗುವ ಸಾದ್ಯತೆಇದೆ ಎಂದು ಸುದ್ದಿ ಮಾಡಿತ್ತು.

  ಮೊಟ್ಟ ಮೊದಲ ಹೆಸರು ಹಿರಿ ಮುತ್ಸದ್ದಿಯಾದ ಶಿವಮೊಗ್ಗದ ಕಡಿದಾಳ್ ಗೋಪಾಲ್‌ ಹೆಸರು ಕೇಳಿ ಬಂದಿತ್ತು.. ಅವರು ಒಕ್ಕಲಿಗ ಸಮಾಜದ ಜಿಲ್ಲಾದ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಚಿರಪರಿಚಿತರು ಮತ್ತು ಜಿಲ್ಲಾ ಜನತಾದಳದಲ್ಲಿ ಸಾಕಷ್ಟು ವರ್ಷದಿಂದ ಗುರುತಿಸಲ್ಪಡುವ ಇವರು ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ.ದೇವೆಗೌಡರೋಂಧಿಗೆ ಗುರುತಿಸಿಕೊಂಡಿದ್ದಾರೆ. ಇವರು ಸಹ ಜಿಲ್ಲಾದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು.

ಎರಡನೇಯದಾಗಿ ಎ.ಟಿ.ಸುಬ್ಬಯ್ಯ ಗೌಡ್ರು ಇವರು ಕುಮಾರಸ್ವಾಮಿಗೆ ಆಪ್ತರಾಗಿರುತ್ತಾರೆ.ಶಿವಮೊಗ್ಗಕ್ಕೆ ಹೆಚ್.ಡಿ. ಕುಮಾರಸ್ವಾಮಿ ಬಂದಾಗ ಇವರ ಕಾರಿನಲ್ಲಿ ಕುಮಾರಸ್ವಾಮಿ ಓಡಾಡಿದ್ದು ಮತ್ತು ಇವರ ಮನೆಗೆ ಸಹ ಹೋಗಿ ಬಂದಿದ್ದಾರೆ. ಜಿಲ್ಲಾ ಜನತಾದಳದಲ್ಲಿ ಈಗಾಗಲೆ ಗುರುತಿಸಿ ಕೊಂಡಿದ್ದು ಇವರು ಸಹ ಜಿಲ್ಲಾದ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು.

ಮೂರನೇಯದಾಗಿ ಕೆ.ಎನ್.ರಾಮಕೃಷ್ಣ, ಇವರು ಹಾಲಿ ಮಲೆನಾಡು ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.ಒಕ್ಕಲಿಗ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಎಲ್ಲರಿಗೂ ಚಿರಪರಿಚಿತರು. ಕುಮಾರಸ್ವಾಮಿ ಮತ್ತು ದೇವೆಗೌಡರೋಂಧಿಗೆ ಒಳ್ಳೆಯ ಭಾಂದವ್ಯ ಇಟ್ಟು ಕೊಂಡಿದ್ದಾರೆ. ಇವರು ಜಿಲ್ಲಾದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು.

ನಾಲ್ಕನೆಯದಾಗಿ ಮಾಜಿ ಜಿಲ್ಲಾ ಪಂಚಾಯತ್ ಮೆಂಬರ್ ಮತ್ತು ಹಾಲಿ ಡಿಸಿಸಿ ಬ್ಯಾಂಕ್ ಡೈರೆಕ್ಟರ್ ಆದ ಭದ್ರಾವತಿ ಯೋಗೀಶ್ ಸಹ ಜಿಲ್ಲಾದ್ಯಕ್ಷ ರಾಗಲೂ ತಯಾರಿನಡೆಸಿದ್ದಾರೆ ಎನ್ನಲಾಗಿತ್ತು.

ಐದನೇಯದಾಗಿ ರಮೇಶ್ ಬಿ ನಾಯಕ್ ಇವರು ಕುಮಾರ ಸ್ವಾಮಿ ಮತ್ತು ದೇವೆಗೌಡರೋಂಧಿಗೆ ಗುರುತಿಸಿ ಕೊಂಡಿದ್ದು, ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡು ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇವರು ಸಹ ಜಿಲ್ಲಾದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು.

ಒಟ್ಟಿನಲ್ಲಿ  ಶಿವಮೊಗ್ಗ ಜಿಲ್ಲಾ ಜೆಡಿಎಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ 5 ಜನರಿಂದ  ಪೈಪೋಟಿ ಏರ್ಪಟ್ಟಿದೆ ಎಂದು ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ ಸುದ್ದಿಮಾಡಿತ್ತು. ಇದೀಗ ಕಡಿದಾಳ್ ಗೋಪಾಲ್ ರವರು ಹೆಸರು ಫೈನಲ್ ಅಗಿದೆ.
ಅವರಿಗೆ ಶುಭವಾಗಲಿ...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.