ಶ್ರೀ ವಿಜಯದಾಸರ ಮತ್ತು ಸತ್ಯವೀರರ ಆರಾಧನೆ
ಶಿವಮೊಗ್ಗ ನ.೨೨: ಇಂದು ಶಿವಮೊಗ್ಗ ನಗರದ ಕೆ.ಆರ್.ಪುರಮ್ ರಸ್ತೆಯಲ್ಲಿರುವ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ದಾಸ ಶ್ರೇಷ್ಠರಾದ ಶ್ರೀ ವಿಜಯದಾಸರ ಮತ್ತು ಶ್ರೀ ಮದ್ ಉತ್ತರಾಧಿಮಠದ ಸ್ವಾಮಿಗಳಾಗಿದ್ದ ಶ್ರೀ ಶ್ರೀ ಶ್ರೀ ಸತ್ಯವೀರ ತೀರ್ಥರ ಆರಾದನೆಯನ್ನು ನಗರದ ಗೆಳೆಯ ವೃಂದದ ವತಿಯಿಂದ ಆಚರಿಸಲಾಯಿತು. ಈ ಪ್ರಯುಕ್ತ ಇಂದು ಬೆಳಿಗ್ಗೆ ನಗರದ ಕೆ.ಆರ್.ಪುರಮ್, ತಿಮ್ಮಪ್ಪನ ಕೊಪ್ಪಲು ಮತ್ತು ತುಮಕೂರು ಶ್ಯಾಮರಾವ್ ರಸ್ತೆಯ ಬಡಾವಣೆಗಳಲ್ಲಿ ಶ್ರೀ ವಿಜಯದಾಸರ ಕೀರ್ತನೆಗಳನ್ನು ಹಾಡುತ್ತ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು ನಂತರ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಪ್ರಮುಖ ಭಜನಾ ಮಂಡಳಿ ವತಿಯಿಂದ ಭಜನೆ, ಹಾಗೂ ಶ್ರೀ ವಿಜಯದಾಸರ ಬಗ್ಗೆ ಪಂಡಿತ ಶ್ರೀನಿಧಿ ಆಚಾರ್ಯ ಗುಡಿ ಇವರು ಹಾಗೂ ಶ್ರೀ ಶ್ರೀ ಶ್ರೀ ಸತ್ಯವೀರರ ಬಗ್ಗೆ ರಘೋತ್ತಮ ಆಚಾರ್ಯ ಸಂಡೂರ್ ಇವರುಗಳಿಂದ ಉಪನ್ಯಾಸ ನಡೆಸಲಾಯಿತು.
ಚಿತ್ರದಲ್ಲಿ, ಹೆಚ್.ಎಸ್.ನಾಗೇಂದ್ರ, ವಸಂತ ರಾವ್, ಎಮ್.ಜಿ.ವಾಸುದೇವ ಮೂರ್ತಿ, ಕೆ.ಪ್ರಹ್ಲಾದ, ಪುಷ್ಪ ವಿಜಯೇಂದ್ರ, ಕುಷ್ಠಗಿ ಅನಂತಾಚಾರ್, ಕುಷ್ಠಗಿ ಸುಧಾ ಅನಂತಾಚಾರ್, ಸುಭದ್ರಾ ವಸಂತರಾವ್, ಸಿ.ವಿ.ವಿಜಯೇಂದ್ರ, ಕುಷ್ಠಗಿ ಅನಂತಾಚಾರ್, ಮೀನಾಕ್ಷಿ ವೇಣೂಗೋಪಾಲ ಪದ್ಮ ಕೇಶವಮೂರ್ತಿ, ರಾಮದ್ಯಾನಿ ಅನಂತಮೂರ್ತಿ ಇವರುಗಳನ್ನು ಕಾಣಬಹುದು.
Leave a Comment