ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪರಿಗೆ ಸನ್ಮಾನ ಅಭಿನಂದನೆ

ಶಿವಮೊಗ್ಗ:ಶ್ರೀ ಆದಿಶಂಕರಾಚಾರ್ಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ವತಿಯಿಂದ ಇಂದು ಶಿವಮೊಗ್ಗ ನಗರದ ಶಾಸಕರಾದ ಸನ್ಮಾನ್ಯ ಶ್ರೀ ಚನ್ನಬಸಪ್ಪರವರಿಗೆ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.ಶ್ರೀ ಆದಿಶಂಕರಾಚಾರ್ಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ವತಿಯಿಂದ ಬಡಾವಣೆಯಲ್ಲಿನ ಕುಂದು ಕೊರತೆಯ ಬಗ್ಗೆ ಬಡಾವಣೆಯ ಅಧ್ಯಕ್ಷರಾದ ಕೆ.ಸಿ.ದಿವಾಕರ್ ನೇತ್ರತ್ವದಲ್ಲಿ ಮನವಿ ಸಲ್ಲಿಸಿ ಶಾಸಕರ ಗಮನಕ್ಕೆ ತರಲಾಯಿತು.
ಕೂಡಲೇ ಬಡಾವಣೆಯ ನಿವಾಸಿಗಳ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಶಾಸಕರು ಸ್ಥಳದಲ್ಲಿಯೇ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರು ಕೆ.ಸಿ ದಿವಾಕರ್, ಉಪಾಧ್ಯಕ್ಷರು ಆಶಾ ಬಾಯಿ, ಕಾರ್ಯದರ್ಶಿ ವೀರೇಶ್, ಸಹ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಪ್ರಶಾಂತ್ ಭಟ್, ಎಲ್ಲಾ ಪದಾಧಿಕಾರಿಗಳು ಹಾಗೂ ಬಡಾವಣೆಯ ಎಲ್ಲಾ ನಿವಾಸಿಗಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.