ಶಿವಮೊಗ್ಗದ ಗಾಂಧೀಬಜಾರ್ ಪಟಾಕಿ ಅಂಗಡಿ ಮೇಲೆ ಪೋಲಿಸರ ದಾಳಿ: ಪಟಾಕಿ ವಶಕ್ಕೆ

ಶಿವಮೊಗ್ಗ: ನಗರದ  ಗಾಂದಿಬಜ಼ಾರ್ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ಮಳಿಗೆಯೊಂದರಲ್ಲಿ ಪಟಾಕಿಗಳನ್ನ ಸಂಗ್ರಹಿಸಿ ಮಾರಾಟಮಾಡುತ್ತಿದ್ದ ಮಳಿಗೆ ಮೇಲೆ ಇಂದು ರಾತ್ರಿ ಶಿವಮೊಗ್ಗ ತಹಶಿಲ್ದಾರರ ನೇತೃತ್ವದಲ್ಲಿ  ನಗರದ ದೊಡ್ಡ ಪೇಟೆ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.
  ಯಾವುದೇ ಅಂಗಡಿ ಹೆಸರಿನ ಬೋರ್ಡ್ ಇಲ್ಲದ  ಜನನಿಬಿಡ ಪ್ರದೇಶದಲ್ಲಿ ಗಾಂಧೀಬಜಾರ್ ನಲ್ಲಿ  ಎಲ್ಲಾ ರೀತಿಯ ಪಟಾಕಿ ಇಂದು ಮಾರಾಟ ಮಾಡುತ್ತಿರುವ ಬಗ್ಗೆ ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ ಪೋಟೋ ಗಳ ಸಮೇತ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಅಧಿಕಾರಿಗಳ ಸೂಚನೇ ಮೇರೆಗೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ ಮತ್ತು ರೆವಿನ್ಯೂ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪಟಾಕಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.ಶಿವಮೊಗ್ಗ ತಹಶಿಲ್ದಾರರ ನೇತೃತ್ವದಲ್ಲಿ ಪಟಾಕಿ ಅಂಗಡಿ ಮೇಲೆ ದಾಳಿ
ಸರಕಾರ ಮತ್ತು ಸುಪ್ರೀಂಕೋರ್ಟ್ ಪಟಾಕಿ ನಿಷೇಧ ಮಾಡಿದ್ದು,ಹಸಿರು ಪಟಾಕಿಮಾರಾಟ ಮಾಡಲು ಮಾತ್ರ ಅನುಮತಿಯನ್ನು ನೀಡಿದೆ.ಆದರೇ ನಿಯಮ ಮೀರಿ ಜನನಿಬಿಡ ಪ್ರದೇಶದಲ್ಲಿ ಪಟಾಕಿ ಸಂಗ್ರಹಿಸಿ ಮಾರಾಟ ಮಾಡಿ ಮಾರಾಟ ಮಾಡುತ್ತಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ರಮೇಶ್ ಎಂಬುವವರಿಗೆ ಸೇರಿದ ಪೂಜಾಸಾಮಾಗ್ರಿಯ ಗಾಂಧೀಬಜಾರ್ ಮಾರಾಟ ಮಳಿಗೆಯಲ್ಲಿ ಈ ಪಟಾಕಿಗಳು ಸಂಗ್ರಹಿಸಿ ಇಡಲಾಗಿದ್ದು, ಪ್ರೀಡಂ ಪಾರ್ಕ್ ವಿನೋಬನಗರದಲ್ಲಿ ಪಟಾಕಿ ಲೈಸನ್ಸ್ ದಾರರಿಗೆ ಪಟಾಕಿ ಮಾರಲು ಅನುಮತಿಯನ್ನು ಜಿಲ್ಲಾಡಳಿತ ನೀಡಿದೆ.

ಗಾಂಧೀಬಜಾರ್ ನಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನ ಪಡೆದ ಪೊಲೀಸರು ಇಂದು  ದಾಳಿನಡೆಸಿ ಸುಮಾರು 50 ರಿಂದ 60 ಸಾವಿರ ಬೆಲೆಯ ಪಟಾಕಿಗಳನ್ನ ವಶಕ್ಕೆ ಪಡೆದು ಆರೋಪಿ ರಮೇಶ್ ಎನ್ನುವವರ ವಿರುದ್ದ ದೂರು ದಾಖಲು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

 ರಮೇಶ್ ರವರದ್ದು ಪಟಾಕಿಗೆ ಸಂಬಂದಿಸಿದಂತೆ ಬೇರೆಡೆಗೆ ಅಂಗಡಿಯಿದ್ದು, ಅಲ್ಲಿನ ಪಟಾಕಿಗಳನ್ನ ಗಾಂದಿಬಜಾರ್ ಅಂಗಡಿಗೆ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ರಮೇಶ್ ಇವರು ಹಲವಾರು ವರ್ಷಗಳಿಂದ ಗಾಂಧೀಬಜಾರ್ ನಲ್ಲಿ ಮಳಿಗೆಯೊಂದರಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದರು. ಇವರು  ಸದರಿ ಜಾಗದಲ್ಲಿ ಪಟಾಕಿ ಮಾರಾಟ ಮಾಡಲು ಲೈಸೆನ್ಸ್  ಇದೆ ಎಂದು ಸುಳ್ಳು ಹೇಳಿ ಪಟಾಕಿ ರಾಜಾರೋಷವಾಗಿ ಪಟಾಕಿ ಮಾರಾಟ ಮಾಡುತ್ತಿದ್ದರು.

ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.