ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ದ FIR: ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ರವರ ಖಡಕ್ ಎಚ್ಚರಿಕೆ ಸಂದೇಶ
ಶಿವಮೊಗ್ಗ, ಅ. 3: ‘ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ
ವಿರುದ್ದ FIR ದಾಖಲಿಸಿ ಸೂಕ್ತವಾದ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಈ ಕುರಿತಂತೆ ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಕಳೆದ ಭಾನುವಾರ ರಾಗಿಗುಡ್ಡ (ಶಾಂತಿನಗರ) ಬಡಾವಣೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ.ಅಂತಹವರ ವಿರುದ್ದ ಈಗಾಗಗಲೇ ಸೈಬರ್ ಕ್ರೈಮ್ ಠಾಣೆಯಲ್ಲಿ FIR ದಾಖಲಿಸಿ ತನಿಝಾ ತಂಡವನ್ನು ರಚಿಸಿ ಸುಳ್ಳುಸುದ್ದಿ ಹರಡಿದ ವ್ಯಕ್ತಿಯ ಪತ್ತೆಗೆ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಕುರಿತಂತೆ ಎಸ್ಪಿ ಅವರು ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ದ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಎರಡು ಓಮಿನಿ ವಾಹನಗಳ ಬಗ್ಗೆ ಪ್ರತಿಕ್ರಿಯೆ;
ರಾಗಿಗುಡ್ಡ ಬಡಾವಣೆಯಲ್ಲಿ ಘಟನೆ ನಡೆದ ವೇಳೆ, ಪರ ಊರಿನ ಎರಡು ಓಮ್ನಿ ಕಾರುಗಳಿದ್ದ ಬಗ್ಗೆ ಮಾಧ್ಯಮಗಳ ವರದಿ ಕುರಿತಂತೆ ಎಸ್ಪಿ ಅವರು ಸ್ಪಷ್ಟನೆ ನೀಡಿದರು.
ಸದರಿ ಕಾರುಗಳು ನ್ಯಾಮತಿ ಕಡೆಯದ್ದಾಗಿದೆ. ಕಾರುಗಳಲ್ಲಿ ಎರಡು ಕೋಮಿನ ಕಡೆಯವರು ಇದ್ದರು. ಮೆರವಣಿಗೆ ನೋಡುವ ಉದ್ದೇಶದಿಂದ ಅವರೆಲ್ಲ ಶಿವಮೊಗ್ಗಕ್ಕೆ ಆಗಮಿಸಿದ್ದರು.ಆ ಒಂದು ಕಾರಿನಲ್ಲಿ ಎರಡು ಕೋಮಿನವರು ಇದ್ದರು ಶಿವಮೊಗ್ಗ ನಗರ ವೀಕ್ಷಿಸಿ ರಾಗಿಗುಡ್ಡಕ್ಕೆ ಬಂದಿದ್ದರು ಎಂದು ಮಾಹಿತಿಯನ್ನು ನೀಡಿದರು.
ಈ ವೇಳೆ ರಾಗಿಗುಡ್ಡದಲ್ಲಿ ಅಹಿತಕರ ಘಟನೆಗಳು ನಡೆದ ನಂತರ, ಅವರು ತಮ್ಮ ಊರುಗಳಿಗೆ ಹಿಂದಿರುಗಿದ್ದರು. ಘಟನೆಗಳ ಸತ್ಯಾಸತ್ಯತೆ ಪರಾಮರ್ಶಿಸಿ ವರದಿ ಮಾಡುವಂತೆ ಮಾಧ್ಯಮದವರಿಗೆ ವಿನಂತಿಯನ್ನು ಮಾಡಿದರು.
ಸುಮಾರು 10 ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ;
ಘಟನೆಯಲ್ಲಿ ಎರಡು ಕೋಮಿನ ಕಡೆಯವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ಎರಡು ಕೋಮಿನ ಕಡೆಯ ಆರೋಪಿಗಳನ್ನು ಬಂಧಿಸಲಾಗಿದೆ
ರಾಗಿ ಗುಡ್ಡದ ಘಟನೆ ಒಟ್ಟು 24 ಪ್ರಕರಣ ದಾಖಲು 60 ಜನರ ಬಂಧನ:
ರಾಗಿ ಗುಡ್ಡದ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಿ 60 ಜನರನ್ನು ಬಂಧಿಸಲಾಗಿದೆ.. ಒಂದು 4 ಚಕ್ರ, 1 3 ಚಕ್ರ ಮತ್ತು 2 ದ್ವಿಚಕ್ರ ವಾಹನಗಳು ಜಖಂ.. 7 ಮನೆಗಳ ಗಾಜು ಒಡೆದು.. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಶಿವಮೊಗ್ಗ ನಗರದಲ್ಲಿ ಯಾವುದೇ ಪರಿಣಾಮ ಬೀರಿಲ್ಲ.. ಪರಿಸ್ಥಿತಿ ಶಾಂತವಾಗಿದ್ದು, ಅನವಶ್ಯಕ ಗಾಬರಿ ಮೂಡಿಸುವ ಅಥವಾ ಸಾರ್ವಜನಿಕರ ಮನಸ್ಸನ್ನು ಕೆಡಿಸುವ ಕೆಲಸವನ್ನು ಯಾರು ಮಾಡಬಾರದು. ಶಿವಮೊಗ್ಗದ ಜನತೆ ಊಹಾಪೋಹಗಳ ಸುದ್ದಿಗೆ ಗಾಬರಿಯಾಗುವುದು ಬೇಡ ಶಿವಮೊಗ್ಗ ಶಾಂತವಾಗಿದೆ. ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಾಕಾಬಂಧಿ ಪೊಲೀಸ್ ಪಹರೆಯನ್ನು ಬಿಗಿಗೊಳಿಸಿದೆ ಎಂದರು.

Leave a Comment