ಎಸ್ಪಿ ಗಮನಕ್ಕೆ ಬಾರದೇ ಶಿವಮೊಗ್ಗ ನಗರದಲ್ಲಿ ಎಲ್ಲೆಂದರಲ್ಲಿ ಹೆಚ್ಚಿದ ಒಸಿ ಮಟ್ಕಾ ಜೂಜಾಟ!!
ಶಿವಮೊಗ್ಗ ಜಿಲ್ಲೆಯ ಎಸ್ಪಿ ಮಿಥುನ್ ಕುಮಾರ್ ರವರು ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲದೇ ಶಿವಮೊಗ್ಗದಲ್ಲಿ ನಗರದ ಹಲವು ಠಾಣೆಯ ಏರಿಯಾದಲ್ಲಿ ಎಲ್ಲೆಂದರಲ್ಲಿ ಒಸಿ ಮಟ್ಕಾ ರಾಜರೋಷವಾಗಿ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಠಾಣಾಧಿಕಾರಿಗಳು ಮತ್ತು ಪೊಲೀಸರು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇದ್ದಾರೆ. ಕೆಲವು ಅಧಿಕಾರಿಗಳು ಮತ್ತು ಪೊಲೀಸರ ಜೇಬು ಭರ್ತಿಯಾಗ ತೊಡಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ರಾಜಾರೋಷವಾಗಿ ಎಲ್ಲೆಂದರಲ್ಲಿ ಒಸಿ ಮಟ್ಕಾ ಜೂಜಾಟ ನಡೆಯುತ್ತಿದೆ.ಚೀಟು ಬರೆಯುವ ಒಬ್ಬೊಬ್ಬ ವ್ಯಕ್ತಿ ಲಕ್ಷಗಟ್ಟಲೆ ಹಣ ಸಂಗ್ರಹಿಸುತ್ತಾನೆ ಅಂತಾ ತಿಳಿದು ಬಂದಿದೆ. ಅಲ್ಲಿಗೆ ಶಿವಮೊಗ್ಗದಲ್ಲಿ ಎಷ್ಟು ಹಣ ಸಂಗ್ರಹ ಆಗಬಹುದು ನಿವೇ ಊಹಿಸಿ.
ಆದರೆ ಪೊಲೀಸ್ ಠಾಣೆಯ ಮತ್ತು ಜಿಲ್ಲಾ ಗುಪ್ತದಳದ ಸಿಬ್ಬಂಧಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲವೇ.ಇದು ಗುಪ್ತದಳದ ಸಿಬ್ಬಂಧಿಗಳ ವೈಫಲ್ಯ ಸಹ ಕಂಡುಬರುತ್ತಿದೆ.
ನಮ್ಮ ಪತ್ರಿಕೆಗೆ ಈ ಬಗ್ಗೆ ಅನೇಕ ದೂರುಗಳು ಬಂದಿವೆ. ಅದು ನಿಜವೇ ಸುಳ್ಳಾ ಎಂಬ ಬಗ್ಗೆಯೂ ಒಂದೆರೆಡು ಕಡೆ ಹೋಗಿ ಒಸಿ ಬರೆಯುತ್ತಿರುವ ಬಗ್ಗೆ ಪರಿಶೀಲನೆ ಮಾಡಲಾಗಿ ವಿನೋಬನಗರ ಲಕ್ಷ್ಮಿಟಾಕೀಸ್ ಎದುರು ಮತ್ತು ಸವಳಂಗ ರಸ್ತೆಯಲ್ಲಿ ಕಮಲ ನರ್ಸಿಂಗ್ ಹೋಂ ಪಕ್ಕದ ಖಾಲಿ ಜಾಗದ ಪೆಟ್ಟಿಗೆ ಅಂಗಡಿ ಯೊಂದರಲ್ಲಿ ಜನ ಸಾಲು ಸಾಲಾಗಿ ಹೋಗಿ ಒಸಿ ಬರೆಸುತ್ತಿದ್ದ ದೃಶ್ಯ ಕಂಡು ಬಂದಿದೆ.
ಅತಿ ಹೆಚ್ಚು ಕೂಲಿಕಾರ್ಮಿಕರು, ಆಟೋಡ್ರೈವರ್,ಬಸ್ ಡ್ರೈವರ್, ಕಂಡಕ್ಟರ್ ಗಳು ದಿನ ನಿತ್ಯವೂ ಒಸಿ ಚೀಟಿ ಬರೆಸಿ ಹಣಕೊಟ್ಟು ಬರಿಗೈಯಲ್ಲಿ ಮನೆಗೆ ವಾಪಸ್ಸು ಆಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಬಗ್ಗೆ ದಕ್ಷ ಪ್ರಾಮಾಣಿಕರೆಂದು ಖ್ಯಾತಿ ಗಳಿಸಿರುವ ಎಸ್ಪಿ ಮಿಥುನ್ ಕುಮಾರ್ ರವರು ಗಮನ ಹರಿಸಿ ಪರಿಶೀಲನೆ ಮಾಡಿ ಸೂಕ್ತವಾದ ಕ್ರಮ ಕೈಗೋಳ್ಳಲಿ ಎಂಬುದು ನಮ್ಮ ಪತ್ರಿಕೆಯ ಆಶಯ ವಾಗಿದೆ.
ಈ ಬಗ್ಗೆ ನಮ್ಮ ಹಲೋ ಶಿವಮೊಗ್ಗ ದಿನ ಪತ್ರಿಕೆ ಮಾಹಿತಿ ಕಲೆ ಹಾಕುತ್ತಿದ್ದು,ಒಸಿ ಜೂಜಾಟ ಎಲ್ಲೆಲ್ಲಿ ನಡೆಯುತ್ತಿದೆ... ಯಾರು ನಡೆಸುತ್ತಿದ್ದಾರೆ.... ಯಾರ್ಯಾರು ಎಲ್ಲೆಲ್ಲಿ ಒಸಿ ಬರೆಯುತ್ತಿದ್ದಾರೆ ಎಂಬ ಬಗ್ಗೆ ಸದ್ಯದಲ್ಲಿಯೇ ದೊಡ್ಡ ಸುದ್ದಿ ಮಾಡಲಿದೆ ನೀರಿಕ್ಷಿಸಿ......
Leave a Comment