ಶಿವಮೊಗ್ಗ ರಾಗಿಗುಡ್ಡ ಗಲಾಟೆ ಹಿನ್ನೆಲೆ, ದಕ್ಷ ಪ್ರಾಮಾಣಿಕ ಇನ್ಸ್ಪೆಕ್ಟರ್ ಸಸ್ಪೆಂಡ್: ಇದು ನ್ಯಾಯವೇ...ನಾಗರೀಕರ ಆಕ್ರೋಶ
ಶಿವಮೊಗ್ಗ: ರಾಗಿಗುಡ್ಡದ (ಶಾಂತಿನಗರ) ಗಲಭೆ ಪ್ರಕರಣದಲ್ಲಿ ಓರ್ವ ಇನ್ಸ್ಪೆಕ್ಟರ್ ಮತ್ತು ಮೂವರು ಸಿಬ್ಬಂದಿಗಳನ್ನ ಕರ್ತವ್ಯದಲ್ಲಿ ನಿರ್ಲಕ್ಷ ಎಂಬ ಆರೋಪದ ಅಡಿ ಅಮಾನತ್ತುಗೊಳಿಸಲಾಗಿದೆ.ಇದಕ್ಕೆ ವ್ಯಾಪಕ ವಿರೋದ ವ್ಯಕ್ತವಾಗುತ್ತಿದೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯ ದಕ್ಷ,ಪ್ರಾಮಾಣಿಕ, ಖಡಕ್ ಓರ್ವ ಇನ್ಸ್ಪೆಕ್ಟರ್ ಮತ್ತು ಮೂವರು ಸಿಬ್ಬಂದಿಗಳನ್ನ ಕರ್ತವ್ಯದಲ್ಲಿ ನಿರ್ಲಕ್ಷ ಎಂಬ ಆರೋಪದ ಅಡಿ ಸಸ್ಪೆಂಡ್ ಮಾಡಿರುವುದು ಇದೀಗ ಜಿಲ್ಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಬಹುಚರ್ಚಿತವಾಗುತ್ತಿರುವ ವಿಷಯವಾಗಿದೆ.
ರಾಗಿಗುಡ್ಡದಲ್ಲಿ ಕಾನೂನು ಸುವ್ಯವಸ್ಥೆ ಮತ್ತ ಗಲಾಟೆ ನಿಯಂತ್ರಣ ಮಾಡಲು ಅಧಿಕಾರಿ ಮತ್ತು ಪೊಲೀಸರು ವಿಫಲರಾಗಿದ್ದಾರಾ? ಅಥವಾ ಇಲ್ಲವೇ ಎಂಬುದು ಇದೀಗ ಮುನ್ನಲೆಗೆ ಬಂದಿದೆ .
ಶಾಂತಿನಗರ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಅಷ್ಟೋಂದು ದೊಡ್ಡ ಪ್ರಮಾಣದ್ದು ಅನಿಸುತ್ತಾ? ಇಲ್ಲಿ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ. ಕೆಲವು ಮಾಧ್ಯಮಗಳು ಶಿವಮೊಗ್ಗದ ರಾಗಿಗುಡ್ಡ ಸಣ್ಣ ಪುಟ್ಟ ಗಲಾಟೆಯನ್ನು ವೈಭವಿಕರಿಸಿ ಬೆಳಿಗ್ಗೆಯಿಂದ ಸಂಜೆವರೆಗೆ ಟಿ.ವಿ ಯಲ್ಲಿ ಬಹುದೊಡ್ಡದಾಗಿ ಸುದ್ದಿ ಮಾಡಿದ್ದರಿಂದ ಇದೋಂದು ಘಟನೆ ರಾಜಕೀಯವಾಗಿ ಎಲ್ಲರ ಗಮನ ಸೆಳೆದಿತ್ತು.
ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಮತ್ತು ಹಲವು ಪಕ್ಷದ ರಾಜಕಾರಣಿ ಗಳು, ಹಾಗೂ ಕೆಲವು ಪ್ರಮುಖರು ಸ್ಥಳಕ್ಕೆ ಆಗಮಿಸಿ ಗಲಾಟೆಯ ಬಗ್ಗೆ ಮಾಹಿತಿಯನ್ನು ಪಡೆದು ಹಿಂತಿರುಗಿದ್ದಾರೆ. ರಾಗಿಗುಡ್ಡ ಗಲಾಟೆ ಸಹ ತಕ್ಷಣಕ್ಕೆ ನಿಯಂತ್ರಣಕ್ಕೆ ತರುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಇಷ್ಟಾದರೂ ಇದೀಗ ಶಿವಮೊಗ್ಗ ಗ್ರಾಮಾಂತರ ಠಾಣೆಯ ದಕ್ಷ,ಪ್ರಾಮಾಣಿಕ, ಖಡಕ್ ಇನ್ಸ್ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್ ಮತ್ತು ಮೂವರು ಸಿಬ್ಬಂದಿಗಳನ್ನ ಅಮಾನತ್ತು ಮಾಡಿರುವುದು ಸ್ಥಳೀಯ ಪೋಲೀಸರ ಮತ್ತು ಸಾರ್ವಜನಿಕರ ಆಕ್ರೋಶ ಕ್ಕೆ ಕಾರಣವಾಗಿದೆ.
ಸಣ್ಣ ಪುಟ್ಟ ಘಟನೆಗಳು ನಡೆದರೂ ಅದರಲ್ಲಿ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಪ್ರವೇಶ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಪೊಲೀಸರ ನೈತಿಕ ಸ್ಥೈರ್ಯ ವನ್ನು ಮೊಟಕುಗೊಳಿಸುತ್ತಿದ್ದಾರೆ. ಪೊಲೀಸರು ರಾಜಕೀಯ ಮೇಲಾಟಕ್ಕೆ ಹೈರಾಣಾಗಿ ಸೂಕ್ತ ಕ್ರಮ ಕೈಗೊಳ್ಳಲು ಕಷ್ಟವಾಗುತ್ತಿದೆ. ನಿಜವಾದ ಆರೋಪಿ ಗಳನ್ನು ಬಂಧಿಸಿದರೇ ಅಲ್ಲಿ ರಾಜಕೀಯ ಶುರುವಾಗಿ ಪ್ರಾಮಾಣಿಕವಾಗಿ ಯಶಸ್ವಿಯಾಗಿ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಯಾಗುತ್ತಿದೆ ಎಂಬುದು ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿದೆ.ಇತ್ತೀಚೆಗೆ ರಾಜಕೀಯ ಪ್ರಮುಖ ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳಿಗೆ ಸ್ವತಂತ್ರ ವಾಗಿ ಕೆಲಸ ಮಾಡಲುಬಿಡುತ್ತಿಲ್ಲ. ಸಣ್ಣ ಪುಟ್ಟ ಪ್ರಕರಣದಲ್ಲಿ ಎಂಟ್ರಿಯಾಗಿ ಮಧ್ಯಸ್ಥಿಕೆ ವಹಿಸುತ್ತಾರೆ.
ಶಿವಮೊಗ್ಗದಲ್ಲಿ ಬಹುದೊಡ್ಡ ಪ್ರಕರಣ ಹುಣಸೋಡು ಸ್ಫೋಟ ಪ್ರಕರಣ.ಈ ಪ್ರಕರಣದಲ್ಲಿ ಅನೇಕ ವ್ಯಕ್ತಿಗಳು ಮರಣ ಹೊಂದಿದರು. ಅದೇ ರೀತಿಯಲ್ಲಿ ಹರ್ಷನ ಕೊಲೆ ಪ್ರಕರಣ ಮತ್ತು ಶವ ಮೆರವಣಿಗೆ ಗಲಾಟೆಯಲ್ಲಿ ಸಾಕಷ್ಟು ಬೆಂಕಿ ಹಚ್ಚಿದ ನಷ್ಟ ಪ್ರಕರಣಗಳು, ಮನೆಗೆ ಕಲ್ಲುತೂರಿದ ಪ್ರಕರಣಗಳು ಕಣ್ಣೆದುರಿಗೆ ಇದ್ದಾವೆ ...
ಆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಕರ್ತವ್ಯ ಲೋಪವೆಂದು ಶಿವಮೊಗ್ಗದಲ್ಲಿ ಯಾವುದೇ ಠಾಣೆಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಿಲ್ಲ.ಆದರೇ ರಾಗಿಗುಡ್ಡದಲ್ಲಿ ನಡೆದ ಸಣ್ಣ ಪುಟ್ಟ ಗಲಾಟೆಯನ್ನ ಮುಂದಿಟ್ಟು ಕೊಂಡು ಶಿವಮೊಗ್ಗದ ಪೊಲೀಸ್ ಇಲಾಖೆಯ ವರಿಷ್ಟರು ದಕ್ಷ, ಪ್ರಾಮಾಣಿಕ, ನಿಷ್ಟಾವಂತ,ಖಡಕ್ ಅಧಿಕಾರಿ ಹಾಗೂ ಶಿವಮೊಗ್ಗದ ಅನೇಕ ಮರ್ಡರ್ ಮತ್ತು ದರೋಡೆ, ಇನ್ನಿತರೇ ಪ್ರಕರಣದ ಆರೋಪಿ ಗಳನ್ನು ಹಿಡಿದು ಮಟ್ಟ ಹಾಕುವಲ್ಲಿ ಯಶಸ್ವಿಯಾದ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಮತ್ತು ಪೊಲೀಸರನ್ನ ಸಸ್ಪೆಂಡ್ ಮಾಡಿದ್ದು ನ್ಯಾಯನಾ? ಇದೋಂದು ರಾಜಕೀಯ ಪ್ರೇರಿತಾ ಕ್ರಮ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪ್ರಾಮಾಣಿಕ ಅಧಿಕಾರಿಗಳ ನೈತಿಕ. ಸ್ಥೈರ್ಯ ವನ್ನು ಕುಗ್ಗಿಸಬಾರದು. ಅವರ ಬೆನ್ನುತಟ್ಟಿ ಪ್ರೊತ್ಸಾಯಿಸಬೇಕು ಕೂಡಲೇ ಪೊಲೀಸ್ ಇಲಾಖೆಯ ವರಿಷ್ಟಾಧಿಕಾರಿಗಳು ಈ ಬಗ್ಗೆ ಅವಲೋಕಿಸಿ ಸಸ್ಪೆಂಡ್ ಆದೇಶವನ್ನ ಹಿಂಪಡೆಯಬೇಕು ಎಂಬುದು ನಾಗರೀಕರ ಒತ್ತಾಸೆಯಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸೇರಿ ಮೂವರು ಸಿಬ್ಬಂದಿಗಳು ಅಮಾನತ್ತು;
ಕರ್ತವ್ಯದ ನಿರ್ಲಕ್ಷದ ಹಿನ್ನಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಮತ್ತು ಮೂವರು ಸಿಬ್ಬಂದಿಗಳನ್ನ ಅಮಾನತುಗೊಳಿಸಲಾಗಿದೆ.
ಅ.1 ರಂದು ರಾಗಿಗುಡ್ಡದ ಗಲಭೆ ಪ್ರಕರಣ ಮತ್ತು ಈ ಮೊದಲು ನಡೆದ ಪ್ಲೆಲ್ಸ್ ಗಲಾಟೆ ನಡೆದಿತ್ತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಕರ್ತವ್ಯ ನಿರ್ಲಕ್ಷದಿಂದಾಗಿ ಮೂವರು ಸಿಬ್ಬಂದಿಗಳನ್ನ ಅಮಾನತ್ತುಗೊಳಿಸಿದ್ದಾರೆ.
ಠಾಣೆಯ ಠಾಣಾಧಿಕಾರಿ ಅಭಯ್ ಪ್ರಕಾಶ್ ಸೋಮನಾಳ್ ವಿರುದ್ಧ ಐಜಿಗೆ ವರದಿ ಸಹ ಹೋಗಿತ್ತು. ವರದಿಯ ಹಿನ್ನಲೆಯಲ್ಲಿ ಐಜಿಯವರು ಪಿಐ ಅಭಯ್ ಪ್ರಕಾಶ್ ಸೋಮನಾಳ್ ಅವರನ್ನ ಅಮಾನತ್ತುಗೊಳಿಸಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಠಾಣೆಯ ಕಾಶಿನಾಥ್, ರಂಗನಾಥ್ ಮತ್ತು ಶಿವರಾಜ್ ಎಂಬ ಮೂವರು ಸಿಬ್ಬಂದಿಗಳು ಅಮಾನತ್ತುಗೊಂಡಿದ್ದಾರೆ. ಇಲಾಖೆ ಕರ್ತವ್ಯ ನಿರ್ಲಕ್ಷದ ವಿರುದ್ಧ ಕ್ರಮಕೈಗೊಂಡಿದೆ.

Leave a Comment