ಶಿವಮೊಗ್ಗ ಜಿಲ್ಲಾ ಜೆಡಿಎಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ... ಯಾರ್ಯಾರು ಅಂತೀರಾ ನೋಡಿ..
ಶಿವಮೊಗ್ಗ: 20 ವರ್ಷದಿಂದ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆ ಮಾಡಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಜೆಡಿಎಸ್ ಪಕ್ಷ ತೊರೆದು ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಜಿಲ್ಲಾ ಜೆಡಿಎಸ್ ಪಕ್ಷಕ್ಕೆ ಆನೆ ಬಲದಂತಿದ್ದ ಎಂ.ಶ್ರೀಕಾಂತ್ ಅವರು ಕಾಂಗ್ರೆಸ್ ಸೇರ್ಪಡೆ ಮೂಲಕ ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.
ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಯಾಗಿದ್ದ ಆಯನೂರು ಮಂಜುನಾಥ ಸಹ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇದೀಗ ಶಿವಮೊಗ್ಗದಲ್ಲಿ ಜೆಡಿಎಸ್ ಪಕ್ಷದಲ್ಲಿ ಜಿಲ್ಲಾ ಅದ್ಯಕ್ಷ ಸ್ಥಾನಕ್ಕೆ ನೂತನ ಸಾರಥಿ ಹುಡುಕಾಟ ಆರಂಭವಾಗಿದೆ.
ಇದೀಗ 5 ಜನರ ಮಧ್ಯೆ ಅದ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ...ಅವರು ಯಾರು ಅಂತೀರಾ ನೋಡಿ...
ಮೊಟ್ಟ ಮೊದಲ ಹೆಸರು ಹಿರಿ ಮುತ್ಸದ್ದಿಯಾದ ಶಿವಮೊಗ್ಗದ ಕಡಿದಾಳ್ ಗೋಪಾಲ್ ಹೆಸರು ಕೇಳಿಬರುತ್ತಿದೆ. ಅವರು ಒಕ್ಕಲಿಗ ಸಮಾಜದ ಜಿಲ್ಲಾದ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಚಿರಪರಿಚಿತರು ಮತ್ತು ಜಿಲ್ಲಾ ಜನತಾದಳದಲ್ಲಿ ಸಾಕಷ್ಟು ವರ್ಷದಿಂದ ಗುರುತಿಸಲ್ಪಡುವ ಇವರು ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ.ದೇವೆಗೌಡರೋಂಧಿಗೆ ಗುರುತಿಸಿಕೊಂಡಿದ್ದಾರೆ. ಇವರು ಸಹ ಜಿಲ್ಲಾದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಎರಡನೇಯದಾಗಿ ಎ.ಟಿ.ಸುಬ್ಬಯ್ಯ ಗೌಡ್ರು ಇವರು ಕುಮಾರಸ್ವಾಮಿಗೆ ಆಪ್ತರಾಗಿರುತ್ತಾರೆ.ಶಿವಮೊಗ್ಗಕ್ಕೆ ಹೆಚ್.ಡಿ. ಕುಮಾರಸ್ವಾಮಿ ಬಂದಾಗ ಇವರ ಕಾರಿನಲ್ಲಿ ಕುಮಾರಸ್ವಾಮಿ ಓಡಾಡಿದ್ದು ಮತ್ತು ಇವರ ಮನೆಗೆ ಸಹ ಹೋಗಿ ಬಂದಿದ್ದಾರೆ. ಜಿಲ್ಲಾ ಜನತಾದಳದಲ್ಲಿ ಈಗಾಗಲೆ ಗುರುತಿಸಿ ಕೊಂಡಿದ್ದು ಇವರು ಸಹ ಜಿಲ್ಲಾದ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಮೂರನೇಯದಾಗಿ ಕೆ.ಎನ್.ರಾಮಕೃಷ್ಣ, ಇವರು ಹಾಲಿ ಮಲೆನಾಡು ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.ಒಕ್ಕಲಿಗ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಎಲ್ಲರಿಗೂ ಚಿರಪರಿಚಿತರು. ಕುಮಾರಸ್ವಾಮಿ ಮತ್ತು ದೇವೆಗೌಡರೋಂಧಿಗೆ ಒಳ್ಳೆಯ ಭಾಂದವ್ಯ ಇಟ್ಟು ಕೊಂಡಿದ್ದಾರೆ. ಇವರು ಜಿಲ್ಲಾದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ನಾಲ್ಕನೆಯದಾಗಿ ಮಾಜಿ ಜಿಲ್ಲಾ ಪಂಚಾಯತ್ ಮೆಂಬರ್ ಮತ್ತು ಹಾಲಿ ಡಿಸಿಸಿ ಬ್ಯಾಂಕ್ ಡೈರೆಕ್ಟರ್ ಆದ ಭದ್ರಾವತಿ ಯೋಗೀಶ್ ಸಹ ಜಿಲ್ಲಾದ್ಯಕ್ಷ ರಾಗಲೂ ತಯಾರಿನಡೆಸಿದ್ದಾರೆ ಎನ್ನಲಾಗಿದೆ.
ಐದನೇಯದಾಗಿ ರಮೇಶ್ ಬಿ ನಾಯಕ್ ಇವರು ಕುಮಾರ ಸ್ವಾಮಿ ಮತ್ತು ದೇವೆಗೌಡರೋಂಧಿಗೆ ಗುರುತಿಸಿ ಕೊಂಡಿದ್ದು, ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡು ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಿಕೊಂಡಿದ್ದಾರೆ. ಇವರು ಸಹ ಜಿಲ್ಲಾದ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ 5 ಜನರಿಂದ ತೀವೃವಾದ ಪೈಪೋಟಿ ಏರ್ಪಟ್ಟಿದೆ.
ಜಿಲ್ಲೆಯ ಜೆಡಿಎಸ್ ಪಕ್ಷದ ಸಾರಥಿ ಯಾರಾಗುತ್ತಾರೆ ಎಂಬುದನ್ನು ಕಾದು ನೋಡ ಬೇಕಾಗಿದೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಖಾಲಿಇರುವ ಸ್ಥಾನಕ್ಕೆ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಜಿಲ್ಲಾದ್ಯಕ್ಷರನ್ನು ಜೆಡಿಎಸ್ ವರಿಷ್ಠರು ಸದ್ಯದಲ್ಲೇ ನೇಮಿಸುವ ಸಾದ್ಯತೆ ಕಂಡುಬರುತ್ತಿದೆ.

Leave a Comment