ಶಿವಮೊಗ್ಗದಲ್ಲಿನ ದಿನಪತ್ರಿಕೆಗಳ ಪ್ರಕಾಶಕರಿಗೆ ಬಿಗ್ ಶಾಕ್..ವಾರ್ಷಿಕ ವರಧಿ ಸಲ್ಲಿಸದ ಟೈಟಲ್‌ಗಳು ನಿಷ್ಕ್ರಿಯ...
ನವದೆಹಲಿ: ದಿನಪತ್ರಿಕೆ ಗಳ ಪ್ರಕಾಶಕರಿಗೆ ಇದೀಗ RNI ಬಿಗ್ ಶಾಕ್ ನೀಡಿದೆ.ಕಳೆದ 5 ವರ್ಷಗಳಲ್ಲಿ ತಮ್ಮ ಆನ್‌ಲೈನ್ ವಾರ್ಷಿಕ ವರದಿಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸದ 99,173 ಪತ್ರಿಕೆಗಳ ಟೈಟಲ್‌ಗಳನ್ನು RNI ನಿಷ್ಕ್ರಿಯ ಗೊಳಿಸಿ ಪಟ್ಟಿ ಬಿಡುಗಡೆ ಮಾಡಿದೆ. ಶಿವಮೊಗ್ಗದ ಅನೇಕ ಪತ್ರಿಕೆಗಳು ಸಹ ಡಿ ಆಕ್ಟಿವ್ ಆಗಿದೆ. ಈ ಬಗ್ಗೆ ಪತ್ರಿಕೆಗಳ ಮಾಲೀಕರು, ಪ್ರಕಾಶರಿಗೆ ಪ್ರಕಟಣೆ ಹೊರಡಿಸಿ ಮುಂದೇನು ಮಾಡಬೇಕು ಎಂಬುದನ್ನು RNI ಮಾಹಿತಿ ನೀಡಿದೆ.ಇದೀಗ ಡಿ ಆಕ್ಟಿವ್ ಆಗಿರುವ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಪ್ರಕಾಶಕರು ಪತ್ರಿಕೆಗಳನ್ನು ಮುದ್ರಿಸಿ, ಪ್ರಕಟಿಸುವಂತಿಲ್ಲ. RNI ನೀಡಿದ ಎಲ್ಲಾ ಸೂಚನೆ ಆದೇಶಗಳನ್ನು, ನಿರ್ದೇಶನಗಳನ್ನು ಪಾಲನೆ ಮಾಡಿ ನಂತರ RNI ಪತ್ರಿಕೆ ಪ್ರಕಟಣೆ ಮುದ್ರಣ ಮಾಡಲು ಅನುಮತಿ ಪಡೆದ ನಂತರ ಪತ್ರಿಕೆ ಹೊರತರಬೇಕಾಗುತ್ತದೆ. ಅನುಮತಿ ಪಡೆಯದೇ ಪತ್ರಿಕೆಗಳನ್ನು ಮುದ್ರಣ ಮಾಡಿ ಹೊರತಂದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಇದೀಗ ಪತ್ರಿಕೆಗಳ ಪ್ರಕಾಶಕರಿಗೆ ಬಿಗ್ ಶಾಕ್ ನೀಡಿದಂತಾಗಿದೆ. ನಿಷ್ಕ್ರಿಯಗೊಂಡ ಟೈಟಲ್ ಗಳ ಪತ್ರಿಕೆಗಳ ಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳಿಗೆ ಈಗಾಗಲೇ ಕಳುಹಿಸಲಾಗಿದೆ ಎಂದು RNI ಪ್ರಕಟಣೆ ಹೊರಡಿಸಿದೆ.
ಎಲ್ಲಾ ಪತ್ರಿಕೆಗಳು ಸಕ್ರಿಯವಾಗಿ ಪ್ರಕಟವಾಗುತ್ತಿವೆ ಎಂದು ಸಂಬಂಧಪಟ್ಟ ಜಿಲ್ಲೆಗಳ DM/SDM/CMM/DCP ಪರವಾನಗಿಯಿಂದ ದೃಢೀಕರಣವನ್ನು ಸ್ವೀಕರಿಸುವವರೆಗೆ ಈ ಪ್ರಕಟಣೆಗಳಿಗೆ ಯಾವುದೇ RNI ಸಂಬಂಧಿತ ಕೆಲಸಕ್ಕಾಗಿ ಯಾವುದೇ ವಿನಂತಿಯನ್ನು ಸ್ವೀಕರಿಸಲಾಗುವುದಿಲ್ಲವೆಂದು RNI ತಿಳಿಸಿದೆ.
ಜಾಯ್ಸ್ ಫಿಲಿಪ್,
ಸಹಾಯಕ ಪ್ರೆಸ್ ರಿಜಿಸ್ಟ್ರಾರ್ ರವರು ಪ್ರಕಟಣೆ ನೀಡಿದ್ದಾರೆ

Leave a Comment