ಶಿವಮೊಗ್ಗದಲ್ಲಿ ಜನನಿಬಿಡ ಪ್ರದೇಶದಲ್ಲಿ ಪ್ರತಿ ವರ್ಷ ಪಟಾಕಿ ಅಂಗಡಿಗಳು ಮತ್ತು ಮಾರಾಟ: ಜಿಲ್ಲಾಡಳಿತ ಗಮನಹರಿಸಲೀ....

ಶಿವಮೊಗ್ಗ: ಜನನಿಬಿಡ ಗಾಂಧೀಬಜಾರ್ ಮುಖ್ಯ ರಸ್ತೆಯಲ್ಲಿ  ಪ್ರತಿ ವರ್ಷ ಪಟಾಕಿ ಅಂಗಡಿ ತೆರೆದು ಲಕ್ಷಾಂತರ ಬಾಕ್ಸ್ ಪಟಾಕಿ ಸಂಗ್ರಹಿಸಿ ಬಾಕ್ಸ್ ಸಮೇತ ಮಾರಾಟ ಮಾಡಲಾಗುತ್ತಿದೆ.ಜನನಿಬಿಡ ಜಾಗದಲ್ಲಿ ಮಾರಾಟ ಮಾಡಲು ಜಿಲ್ಲಾಡಳಿತ  ಅನುಮತಿ ಅಥವಾ ಲೈಸೆನ್ಸ್ ನೀಡಿಲ್ಲ. ಆದರೂ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆಎಂಬ ಆರೋಪ ಕೇಳಿ ಬರುತ್ತಿದೆ.

ಶಿವಮೊಗ್ಗದಲ್ಲಿ  ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರದಂತೆ ನಿಷೇದ ಮಾಡಲಾಗಿದೆ. ಜಿಲ್ಲಾಡಳಿತ ಲೈಸೆನ್ಸ್ ನೀಡುವ ಸುರಕ್ಷಿತ ಕಾಯ್ದಿರಿಸಿದ ಜಾಗದಲ್ಲಿ ಪಟಾಕಿ ಅಂಗಡಿ ಇಟ್ಟು ಮಾರಾಟ ಮಾಡಲು‌ ಮಾತ್ರ ಹಲವು ಪಟಾಕಿ ಮಾರಾಟಗಾರರಿಗೆ ಲೈಸೆನ್ಸ್ ನೀಡಲಾಗಿದೆ.

 ಆದರೇ ದೀಪಾವಳಿ ಹಬ್ಬದ ಸಮಯದಲ್ಲಿ ಶಿವಮೊಗ್ಗದಲ್ಲಿ ಜನನಿಬಿಡ ಪ್ರದೇಶದ ಗಾಂಧೀಬಜಾರ್ ಮುಖ್ಯ ರಸ್ತೆಯಲ್ಲಿ  ಎರಡು ಅಂಗಡಿಗಳಲ್ಲಿ ಮತ್ತು ಬಿ.ಹೆಚ್ ರಸ್ತೆಯಲ್ಲಿ ಪಿಂಗಾರ್ ಹೋಟೆಲ್ ಎದುರು ಅಂಗಡಿಗಳಲ್ಲಿ ಲಕ್ಷಾಂತರ ಸಾವಿರಾರು ಬಾಕ್ಸ್ ಪಟಾಕಿ ಸಂಗ್ರಹಿಸಿ ಸಾರ್ವಜನಿಕರಿಗೆ ಪ್ರತಿವರ್ಷ ಮಾರಾಟ ಮಾಡುತ್ತಾರೆ. ಇದು ಶಿವಮೊಗ್ಗದ ನಾಗರೀಕರಿಗೆ ಮತ್ತು ಪೊಲೀಸರಿಗೆ ಗೊತ್ತಿರುವ ವಿಚಾರವಾಗಿದೆ. ಜನನಿಬಿಡ ಸಾವಿರಾರು ಸಾರ್ವಜನಿಕರು ಓಡಾಡುವ ಜಾಗ ಸುತ್ತಮುತ್ತ ಅಂಗಡಿಗಳು  ಏನಾದರೂ ಹೆಚ್ಚು ಕಡಿಮೆಯಾದಲ್ಲಿ ನೂರಾರು ಅಂಗಡಿ ಮತ್ತು ನೂರಾರು ಜನರ ಜೀವಹಾನಿ ಸಂಭವಿಸುವ ಸಾದ್ಯತೆ ಇದೆ.

 ಇದು ಕೋಟೆ ಠಾಣೆ ಮತ್ತು ದೊಡ್ಡಪೇಟೆ ಠಾಣೆಯ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಗೊತ್ತಿದ್ದರೂ  ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಜಿಲ್ಲಾಡಳಿತ  ಅಥವಾ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯ ಸಾರ್ವಜನಿಕರ ಆರೋಪವಾಗಿದೆ. ಮುಂದೋಂದು ದಿನ ಅತ್ತಿಬೆಲೆ ಯಲ್ಲಿ ಪಟಾಕಿ ಅಗ್ನಿ ಅವಘಡ ಸಂಭವಿಸಿ ಜೀವ ಹಾನಿ ಆದಂತೆ ಶಿವಮೊಗ್ಗದಲ್ಲಿ ಅಗ್ನಿಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು ಇದೆ.  

ಶಿವಮೊಗ್ಗದಲ್ಲಿ ದುರಂತ ಸಂಭವಿಸುವ‌ ಮುನ್ನ ಲೈಸೆನ್ಸ್ ನೀಡುವ ಜಿಲ್ಲಾಧಿಕಾರಿಗಳು ಎಚ್ಚೆತ್ತು ಕೊಂಡರೇ ಮುಂದೇ ಆಗಬಹುದಾದ ಅನಾಹುತ ತಪ್ಪಿಸ ಬಹುದು.ಅದೇ ರೀತಿಯಲ್ಲಿ ಠಾಣಾದಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು NOC ನೀಡುವಾಗ ಎಚ್ಚರವಹಿಸಲಿ....

ಈ ಬಗ್ಗೆ ಸಂಬಂಧ ಪಟ್ಟ ಶಿವಮೊಗ್ಗ ಜಿಲ್ಲಾಡಳಿತ ಸ್ಥಳೀಯ ಠಾಣೆಯ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.