ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳಿಗೆ ದ್ವಿತೀಯ ಸಮಗ್ರ ಪ್ರಶಸ್ತಿ

ತುಮಕೂರು: ತುಮಕೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 2022 -23ನೇ ಸಾಲಿನ ಸರ್ಕಾರಿ ನೌಕರರ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯ ಪ್ರಥಮ ಸ್ಥಾನವನ್ನು ಬೆಂಗಳೂರು ನಗರ ಜಿಲ್ಲೆ, ಪಡೆದುಕೊಂಡಿದೆ.ಶಿವಮೊಗ್ಗ ಜಿಲ್ಲೆಯ ಕ್ರೀಡಾಳುಗಳಿಗೆ ದ್ವಿತೀಯ ಸಮಗ್ರ ಪ್ರಶಸ್ತಿ . ಪ್ರಶಸ್ತಿ ಪಡೆದ ಎಲ್ಲಾ ಕ್ರೀಡಾಪಟುಗಳಿಗೆ  ಸಂಘದ ರಾಜ್ಯದ್ಯಕ್ಷರಾದ C.S ಷಡಾಕ್ಷರಿ ಅವರು ಅಭಿನಂದನೆಯನ್ನು ಮತ್ತು ಧನ್ಯವಾದಗಳನ್ನು  ಸಲ್ಲಿಸಿದ್ದಾರೆ.

*ಹಾಗೆಯೇ ಸಮಗ್ರ ಪ್ರಶಸ್ತಿಯ ದ್ವಿತೀಯ ಸ್ಥಾನವನ್ನು ಶಿವಮೊಗ್ಗ ಜಿಲ್ಲೆ ಪಡೆದುಕೊಂಡಿದೆ.

*ಸಮಗ್ರ ಪ್ರಶಸ್ತಿಯ ಮೂರನೇ ಸ್ಥಾನವನ್ನು ಹಾಸನ ಜಿಲ್ಲೆ ಪಡೆದು ಕೊಂಡಿದೆ.

  *ಸಮಗ್ರ ಪ್ರಶಸ್ತಿಗೆ ಕಾರಣೀಭೂತರಾದ ಮೂರು ಜಿಲ್ಲೆಗಳ ನೌಕರರಿಗೆ ಮತ್ತು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ  ಜಿಲ್ಲೆಯ ನೌಕರರಿಗೆ ಹಾಗೂ ಪ್ರಶಸ್ತಿಯನ್ನು ಸ್ವೀಕರಿಸಿದ ಎಲ್ಲ ನೌಕರ ಬಾಂಧವರಿಗೆ ಅಭಿನಂದನೆಯನ್ನು ಮತ್ತು ಧನ್ಯವಾದಗಳನ್ನು ಸಂಘದ ರಾಜ್ಯದ್ಯಕ್ಷರಾದ C.S ಷಡಾಕ್ಷರಿ ಸಲ್ಲಿಸಿದ್ದಾರೆ.

*ತುಮಕೂರು ಜಿಲ್ಲೆಯ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಗೆ ಸಹಕರಿಸಿದ ಜಿಲ್ಲಾಡಳಿತ ತುಮಕೂರು ಜಿಲ್ಲಾ ಸರ್ಕಾರಿ ನೌಕರ ಸಂಘ ತುಮಕೂರು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷರಿಗೆ ತಾಲೂಕ ಅಧ್ಯಕ್ಷರಿಗೆ ಎಲ್ಲಾ ಹಂತದ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಂಘದ ರಾಜ್ಯ ಅದ್ಯಕ್ಷ ರಾದ C.S ಷಡಾಕ್ಷರಿ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.