*ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡಗೆ ಇ.ಡಿ. ಶಾಕ್!*


*ಶಿವಮೊಗ್ಗ ಶರಾವತಿ ನಗರ ಬಿ ಬ್ಲಾಕ್ 4 ನೇ ಮೈನ್ ಮನೆ ಮೇಲೆ ED ಅಧಿಕಾರಿಗಳ ದಾಳಿ. ಇದು ಮಂಜುನಾಥ್ ಗೌಡರವರ ಸಂಬಂಧಿ ಉಷಾ ಕಂಠಿ ನಾದಿನಿ ಮನೆ ಎಂದು ತಿಳಿದು ಬಂದಿದೆ.ಶಿವಮೊಗ್ಗ, ಅ. 4: ಇತ್ತೀಚೆಗಷ್ಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ
ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥಗೌಡ ಅವರಿಗೆ ಸೇರಿದ, ಶಿವಮೊಗ್ಗ ಹಾಗೂ
ತೀರ್ಥಹಳ್ಳಿಯಲ್ಲಿರುವ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳ ತಂಡ
ಗುರುವಾರ ಮುಂಜಾನೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ,
ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ಮನೆ, ಹಣಗೆರೆಕೆಟ್ಟೆ ಸಮೀಪದ ಕರಕುಚ್ಚಿ
ಮನೆ, ಶಿವಮೊಗ್ಗದ ಶರಾವತಿ ನಗರದಲ್ಲಿರುವ ಅವರ ಸಂಬಂಧಿಯೋರ್ವರ ಮನೆ ಹಾಗೂ ಅವರಿಗೆ
ಸೇರಿದ ಕಚೇರಿಗಳಲ್ಲಿ ಇ.ಡಿ. ಅಧಿಕಾರಿಗಳ  ತಂಡ ತಪಾಸಣೆ ನಡೆಸುತ್ತಿದೆ ಎಂದು
ಹೇಳಲಾಗಿದೆ.
ಇ.ಡಿ. ಅಧಿಕಾರಿಗಳ ಪ್ರತ್ಯೇಕ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಶಸ್ತ್ರಸಜ್ಜಿತ
ಪೊಲೀಸರ ಭದ್ರತೆಯೊಂದಿಗೆ ಇ.ಡಿ. ತಂಡ ಆರ್.ಎಂ.ಮಂಜುನಾಥಗೌಡರ ನಿವಾಸಗಳಲ್ಲಿ ತಪಾಸಣೆ
ಮಾಡುತ್ತಿದ್ದಾರೆ.
ಡಿಸಿಸಿ ಬ್ಯಾಂಕ್ ನಲ್ಲಿ ಕಳೆದ ಹಲವು ವರ್ಷಗಳ ಹಿಂದೆ ನಡೆದ, ನಕಲಿ ಬಂಗಾರ ಅಡಮಾನ
ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ ಎಂದು
ಹೇಳಲಾಗುತ್ತಿದೆ. ಈ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
ಮಾಹಿತಿ ಸಂಗ್ರಹಿಸಿತ್ತು: ಡಿಸಿಸಿ ಬ್ಯಾಂಕ್ ನಲ್ಲಿ ನಡೆದಿದ್ದ ಗೋಲ್ಡ್ ಲೋನ್ ಹಗರಣದ
ಕುರಿತಂತೆ, ಕಳೆದ ಕೆಲ ತಿಂಗಳುಗಳ ಹಿಂದೆ ಇ.ಡಿ. ಕಚೇರಿಯು ಡಿಸಿಸಿ ಬ್ಯಾಂಕ್ ಕೇಂದ್ರ
ಕಚೇರಿಯಿಂದ ಮಾಹಿತಿ ಪಡೆದುಕೊಂಡಿತ್ತು ಎನ್ನಲಾಗಿದೆ. ಇದೀಗ ಇದರ ಬೆನ್ನಲ್ಲೆ
ಆರ್.ಎಂ.ಮಂಜುನಾಥಗೌಡ ನಿವಾಸದ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದೆ.
ಆರ್.ಎಂ.ಮಂಜುನಾಥ ಗೌಡ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಣದಲ್ಲಿ
ಗುರುತಿಸಿಕೊಂಡಿದ್ದರು. ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

19 ವಾಹನಗಳಲ್ಲಿ ಆಗಮನ - 7 ಸ್ಥಳಗಳಲ್ಲಿ ED ಅಧಿಕಾರಿಗಳಿಂದ ತಪಾಸಣೆ?
*** ಆರ್.ಎಂ.ಮಂಜುನಾಥಗೌಡರವರಿಗೆ ಸೇರಿದ ಯಾವ್ಯಾವ ಸ್ಥಳಗಳ ಮೇಲೆ ಇ.ಡಿ. ತಂಡ ದಾಳಿ
ನಡೆಸಿದೆ ಎಂಬುವುದರ ಖಚಿತ ವರ್ತಮಾನ ಲಭಿಸಿಲ್ಲ. ಈ ಕುರಿತಂತೆ ಇ.ಡಿ. ತಂಡ ಕೂಡ
ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಲಭ್ಯ ಮಾಹಿತಿ ಅನುಸಾರ 19 ವಾಹನಗಳಲ್ಲಿ
ಆಗಮಿಸಿರುವ ಇಡೀ ತಂಡವು, 7 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ ಎಂದು
ಹೇಳಲಾಗುತ್ತಿದೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.