ತೀರ್ಥಹಳ್ಳಿ ಆರಗ ಕಡೇಗದ್ದೆಯಲ್ಲಿ ಅಕ್ರಮ ಮರಳು ದಾಸ್ತಾನು ಸೀಜ್ .. ಲೈಸೆನ್ಸ್ ಇಲ್ಲದ ಅಕ್ರಮ ಕಲ್ಲು ಕೋರೇ ಸೀಜ್ ಯಾಕಿಲ್ಲ?

 ಅಕ್ರಮವಾಗಿ ಮರಳು ದಾಸ್ತಾನು ಮತ್ತು  ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ವ್ಯಾಟ್ಸಪ್ ನಲ್ಲಿ  ಬಂದ ಪೋಟೋವಿದು.

ಶಿವಮೊಗ್ಗ/ತೀರ್ಥಹಳ್ಳಿ: ಆರಗ ಕಡೇಗದ್ದೆಯಲ್ಲಿ ಬಾರಿ ಪ್ರಮಾಣದ ಅಕ್ರಮ ಮರಳು ದಾಸ್ತಾನು ಆಗಿದೆ ಎಂಬ ಸುದ್ದಿ ಹಿನ್ನೆಲೆ ಯಲ್ಲಿ ಇಂದು  ತೀರ್ಥಹಳ್ಳಿ ಪೊಲೀಸರು ಮತ್ತು ಸ್ಥಳೀಯ PDO ರವರು ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಇದೀಗ ಸೀಜ್  ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಪೋಲೀಸರೊಂಧಿಗೆ PDO ರವರು ಸ್ಥಳಕ್ಕೆ ಬೇಟಿ ನೀಡಿ ಇಂದು ಸಂಜೆ ಮರಳು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

 ಆರೋಪ;ಗ್ರಾಮ ಪಂಚಾಯಿತಿ ಆಡಳಿತ ಮತ್ತು  ತಾಲೂಕು ಆಡಳಿತ,ಅಕ್ರಮಕ್ಕೆ  ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿಯ  PDO ಕೆಲ  ಅಧಿಕಾರಿಗಳು ನೇರ ಶಾಮೀಲು ಆಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಪೋಲೀಸರು ಮತ್ತು PDO ದಾಳಿ ಮಾಡಿ,ಸೂಕ್ತವಾದ ಕಾನೂನು ಕ್ರಮ ಕೈಗೊಂಡ ಕಾರ್ಯಕ್ಕೆ ಗ್ರಾಮಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.
ಅದೇ ರೀತಿಯಲ್ಲಿ ಅಕ್ರಮ ಕಲ್ಲು ಕೋರೆಗಳು ತೀರ್ಥಹಳ್ಳಿ ಯಲ್ಲಿ ನಡೆಯುತ್ತಿದೆ ಅದರ ಮೇಲೆ ದಾಳಿಯಾಗಲೀ ಎಂಬುದು ಕೆಲವರು ಸ್ಥಳೀಯ ಪೊಲೀಸ್ ವರಿಷ್ಠ ರಿಗೆ  ದೂರು ಅರ್ಜಿ ಬರೆದು ಒತ್ತಾಯಮಾಡಿದ್ದಾರೆ. 

  ತೀರ್ಥಹಳ್ಳಿ: ಲೈಸೆನ್ಸ್ ಇಲ್ಲದ ಅಕ್ರಮ ಕಲ್ಲು ಕೋರೇ ಸೀಜ್ ಯಾಕಿಲ್ಲ? ತೀರ್ಥಹಳ್ಳಿ  ಮೇಲಿನ ಕುರುವಳ್ಳಿಯಲ್ಲಿ ಸರ್ವೆ ನಂಬರ್ 38 ರಲ್ಲಿ ಅಕ್ರಮವಾಗಿ ಕಲ್ಲುಕೊರೆ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ವ್ಯಾಟ್ಸಪ್ ನಲ್ಲಿ  ಬಂದ ಪೋಟೋವಿದು.
ಇದು ವ್ಯಾಟ್ಸಪ್ ನಲ್ಲಿ ಬಂದ ದೂರು ಅರ್ಜಿಯ ಪ್ರತಿ

ತೀರ್ಥಹಳ್ಳಿ ಯಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಕಲ್ಲು ಕೋರೆ ಸಹ ಬಾರಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು . ಇದರ ಇಂದೇ ಪ್ರಭಾವಿ ವ್ಯಕ್ತಿಗಳು ಮತ್ತು ಕೆಲವು ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದನ್ನು ಸಹ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ಮಾಡಿ ಸೂಕ್ತವಾದ ಕ್ತಮ ಕೈಗೊಳ್ಳ ಬೇಕಾಗಿದೆ.ಇದು ವ್ಯಾಟ್ಸಪ್ ನಲ್ಲಿ ಬಂದ ದೂರು ಅರ್ಜಿಯ ಪ್ರತಿಇದು ವ್ಯಾಟ್ಸಪ್ ನಲ್ಲಿ ಬಂದ ಪೋಟೋ  ಪ್ರತಿ

ಈಬಗ್ಗೆ ಸ್ಥಳೀಯ ಪೊಲೀಸರು ಮತ್ತು ಸಂಬಂಧಿಸಿದ ಅಧಿಕಾರಿಗಳು ಸೂಕ್ತವಾದ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ.
 
  ಪತ್ರಿಕೆ ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.