ಶಿವಮೊಗ್ಗ ದಸರಾ ಮೆರವಣಿಗೆಗೆ ಚಾಲನೆ

ಶಿವಮೊಗ್ಗ: ದಸರಾ ಹಬ್ಬದ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ.
ಅರಮನೆಯ ಎದುರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚೆನ್ನಬಸಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಪಾಲಿಕೆ ಮೇಯರ್ ಶಿವಕುಮಾರ ಉಪಮೇಯರ್ ಲಕ್ಷ್ಮೀ ಶಂಕರ್ ಹಾಗೂ ಸದಸ್ಯರಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು.407 ಲಾರಿ ವಾಹನದಲ್ಲಿ ಬೆಳ್ಳಿಯ ಭವ್ಯ ಮಂಟಪದಲ್ಲಿ  ಶ್ರೀ ಚಾಮುಂಡೇಶ್ವರಿ ದೇವಿಯನ್ನು ಕೂರಿಸಲಾಗಿದೆ.  ಮೆರವಣಿಗೆ ಮುಂದೆ ಸಕ್ರೆಬೈಲಿನ ಹೇಮಾವತಿ ಮತ್ತು ಸಾಗರ್ ಆನೆ ಅಲಂಕೃತವಾಗಿ ಮೆರವಣಿಗೆಯಲ್ಲಿ ಹೊರಟಿವೆ.ಮೆರವಣಿಗೆಯು  ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ - ರಾಮಣ್ಣ ಶೆಟ್ಟಿ ಪಾರ್ಕ್ - ಗಾಂಧಿ ಬಜಾರ್ ಮುಖ್ಯ ರಸ್ತೆ - ಶಿವಪ್ಪ ನಾಯಕ ಸರ್ಕಲ್ - ಅಮೀರ್ ಅಹ್ಮದ್ ಸರ್ಕಲ್ - ಗೋಪಿ ಸರ್ಕಲ್ ದುರ್ಗಿಗುಡಿ ಮುಖ್ಯ ರಸ್ತೆ - ಜೈಲ್ ಸರ್ಕಲ್ - ಲಕ್ಷ್ಮಿ ಥಿಯೇಟರ್ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್ ತಲುಪಲಿದೆ.ಈ ಮಧ್ಯೆ ನಗರದ ಅನೇಕ ದೇವರುಗಳು ಮೆರವಣಿಗೆಯಲ್ಲಿ ಹೊರಟು ಫ್ರೀಡಂ ಪಾರ್ಕ್ ನಲ್ಲಿ ಅಂಬು ಕಡಿಯುವ ಕಾರ್ಯಕ್ರಮ ದಲ್ಲಿ ಭಾಗಿಯಾಗಲಿವೆ. ತಹಶೀಲ್ದಾರ್ ನಾಗರಾಜ್ ಸಂಪ್ರದಾಯಿಕ ಧಿರಿಸಿನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ವಿಶೇಷ ಆಕರ್ಷಣೆ :* ಅಲಂಕೃತ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಮಂಗಳ ವಾದ್ಯ, ಸಮಾಳವಾದ್ಯ, ನಂದಿ ಧ್ವಜ ಕುಣಿತ, ವೀರಗಾಸೆ, ಚಂಡೆ ಮದ್ದಳೆ, ಯಕ್ಷಗಾನ, ನಗಿಸುವ ಗೊಂಬೆಗಳ ಕುಣಿತ, ಕೀಲುಕುದುರೆ (ರಾಜ್ಯ ಪ್ರಶಸ್ತಿ ವಿಜೇತ ಶೆಟ್ಟಿ ಗೊಂಬೆ ಬಳಗ) ದೊಡ್ಡ ಗೊಂಬೆಗಳ ಕುಣಿತ, ಕುಂಡ ಹೊತ್ತ ಮಹಿಳೆಯ ಕುಣಿತ, ಮಹಿಳಾ ಡೊಳ್ಳು ಕುಣಿತ, ಹುಲಿವೇಷ ಕುಣಿತ, ರೋಡ್ ಆರ್ಕೆಸ್ಟಾ ಹಾಗೂ ವಿವಿಧ ಕಲಾ ತಂಡಗಳು ಭಾಗವಹಿಸಿವೆ.ಫ್ರೀಡಂ ಪಾರ್ಕ್, ಶಿವಮೊಗ್ಗದಲ್ಲಿ ಸಂಜೆ 7  ಗಂಟೆಗೆ ಸರಿಯಾಗಿ  ಅಂಬು ಕಡಿದು  ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್  ಚಾಲನೆ ನೀಡಲಿದ್ದಾರೆ.ಸಾಂಪ್ರದಾಯಿಕ ಧಿರಿಸಿನಲ್ಲಿ ತಹಶೀಲ್ದಾರ್ ನಾಗರಾಜ್  ಭಾಗವಹಿಸಿದ್ದು ವಿಶೇಷವಾಗಿತ್ತು.

  ಅಂಬುಕಡಿದು  ಬನ್ನಿ ಮುಡಿದ ನಂತರ 
ಅತ್ಯಾಕರ್ಷಕ ಪಟಾಕಿ-ಸಿಡಿಮದ್ದು 
ರಾವಣ ದಹನ ಏರ್ಪಡಿಸಲಾಗಿದೆ .


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.