ಶಿವಮೊಗ್ಗ:ಪಟಾಕಿ ಮಳಿಗೆಗಳ ಮೇಲೆ ದಿಡೀರ್ ಪೊಲೀಸರ ದಾಳಿ: ಪಟಾಕಿ ವಶ -ಕೇಸ್ ದಾಖಲು

ಶಿವಮೊಗ್ಗ:*ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ *ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆ ಮತ್ತು ಗೋದಾಮುಗಳ ಸುರಕ್ಷತೆ ಮತ್ತು ಮುಂಜಾಗ್ರತಾ* ಕ್ರಮವಾಗಿ ಇಂದು *ಶ್ರೀ ಸೆಲ್ವಮಣಿ, ಐಎಎಸ್, ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ, ಮತ್ತು *ಶ್ರೀ ಮಿಥುನ್ ಕುಮಾರ್, ಜಿ.ಕೆ ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ *ಸೂಚನೆಯ ಮೇರೆಗೆ,* ಪೊಲೀಸರ ವಿಶೇಷವಾದ ತಂಡಗಳು ಪಟಾಕಿ ಅಂಗಡಿಗಳ ಮೇಲೆ ದಿಡೀರ್ ದಾಳಿ ನಡೆಸಿದ್ದಾರೆ.
ನಿಯಮ ಉಲ್ಲಂಘನೆ  ಮಾಡಿ,* ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದ ಮತ್ತು ಮಾರಾಟ ಮಾಡುತ್ತಿದ್ದ *ಮಳಿಗೆ / ಗೋದಾಮಿನ ಮಾಲೀಕರ* ವಿರುದ್ಧ ಕೇಸ್ ದಾಖಲು ಮಾಡಿ ಪಟಾಕಿಯನ್ನು ವಶಕ್ಕೆ ಪಡೆಯಲಾಗಿದೆ.ಯಾವ ಯಾವ ಠಾಣೆಯಲ್ಲಿ ಎಷ್ಟು ಪ್ರಕರಣ:
 ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ *01,* ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ *01* , ವಿನೋಬನಗರ ಪೊಲೀಸ್ ಠಾಣೆಯಲ್ಲಿ *01* ಮತ್ತು ಕೋಟೆ ಪೊಲೀಸ್ ಠಾಣೆಯಲ್ಲಿ *01* ಪ್ರಕರಣ ದಾಖಲಾಗಿದ್ದು,  *ಒಟ್ಟು 04* ಪ್ರಕರಣಗಳನ್ನು ದಾಖಲಿಸಿ, *ಅಂದಾಜು 2,000 ಕೆ.ಜಿ ತೂಕದ ಪಟಾಕಿಗಳನ್ನು* ಪೊಲೀಸರು ವಶಕ್ಕೆ ಪಡೆದಿರುತ್ತಾರೆ. 
ದಾಳಿಯಲ್ಲಿ ಸಂದರ್ಭದಲ್ಲಿ ಯಾರ್ಯಾರು ಭಾಗವಹಿಸಿದ್ದರು:
 ಶಿವಮೊಗ್ಗ-ಎ ಉಪ ವಿಭಾಗದಲ್ಲಿ *ಶ್ರೀ ಬಾಲರಾಜ್,* ಡಿವೈಎಸ್ ಪಿ, ಶಿವಮೊಗ್ಗ-ಬಿ ಉಪ ವಿಭಾಗದಲ್ಲಿ *ಶ್ರೀ ಸುರೇಶ್ ಎಂ,* ಡಿವೈಎಸ್ ಪಿ, ಭದ್ರಾವತಿ ಉಪ ವಿಭಾಗದಲ್ಲಿ *ಶ್ರೀ ನಾಗರಾಜ್,* ಡಿವೈಎಸ್ ಪಿ, ಸಾಗರ ಉಪ ವಿಭಾಗದಲ್ಲಿ, *ಶ್ರೀ ಗೋಪಾಲಕೃಷ್ಣ ತಿಮ್ಮಣ್ಣ ನಾಯ್ಕ್,* ಡಿವೈಎಸ್ ಪಿ, ಶಿಕಾರಿಪುರ ಉಪ ವಿಭಾಗದಲ್ಲಿ *ಶ್ರೀ ಶಿವಾನಂದ್ ಮದರಖಂಡಿ,* ಡಿವೈಎಸ್ ಪಿ ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ *ಶ್ರೀ  ಗಜಾನನ ವಾಮನ ಸುತಾರ,* ಡಿವೈಎಸ್ ಪಿ ಹಾಗೂ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಕಂದಾಯ, ಲೋಕೋಪಯೋಗಿ, ಅಗ್ನಿಶಾಮಕ, ಮೆಸ್ಕಾಂ, ಮಹಾನಗರ ಪಾಲಿಕೆ, ನಗರ ಪಾಲಿಕೆ, ತಾಲ್ಲೂಕು ಪಂಚಾಯತಿಯ ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿದ್ದಾರೆ.

ಅನುಮತಿ ಪಡೆದ   ನಿಯಮಾನುಸಾರ  ಸುರಕ್ಷಿತ ಪಟಾಕಿ ಅಂಗಡಿಗಳು ಒಟ್ಟು 63 :
ಶಿವಮೊಗ್ಗ-ಎ ಉಪ ವಿಭಾಗದಲ್ಲಿ *03,* ಶಿವಮೊಗ್ಗ-ಬಿ ಉಪ ವಿಭಾಗದಲ್ಲಿ *03,* ಭದ್ರಾವತಿ ಉಪ ವಿಭಾಗದಲ್ಲಿ *21,* ಸಾಗರ ಉಪ ವಿಭಾಗದಲ್ಲಿ *09,* ಶಿಕಾರಿಪುರ ಉಪ ವಿಭಾಗದಲ್ಲಿ *20,* ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ *07* ಸೇರಿ ಜಿಲ್ಲೆಯಾದ್ಯಂತ *ಒಟ್ಟು 63 ಮಳಿಗೆ ಮತ್ತು ಗೋದಾಮುಗಳಲ್ಲಿ* ಪಟಾಕಿ ಸಂಗ್ರಹ ಮತ್ತು ಮಾರಾಟಕ್ಕೆ ಸಕ್ಷಮ ಪ್ರಾಧಿಕಾರದಿಂದ *ಅನುಮತಿ ಮತ್ತು ಪರವಾನಿಗೆ* ಪಡೆದಿರುವ ಬಗ್ಗೆ, ಮಳಿಗೆ ಹಾಗೂ ಗೋದಾಮುಗಳಲ್ಲಿ ಎಲ್ಲಾ *ಅವಶ್ಯಕ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ* ಮಾಡುತ್ತಿರುವ ಬಗ್ಗೆ ಮತ್ತು ಪಟಾಕಿ ಮಾರಾಟ ಮಾಡಲು *ನಿರ್ಮಿಸಿರುವ ಮಳಿಗೆಗಳು ಸುರಕ್ಷತಾ ದೃಷ್ಠಿಯಿಂದ ಸೂಕ್ತವಿರುವ* ಬಗ್ಗೆ ಸದರಿ ವಿದೇಶ ವಾದ ತಂಡ ಪರಿಶೀಲನೆ ನಡೆಸಿರುತ್ತಾರೆ.  

 ನಿನ್ನೆ ಹಲೋ ಶಿವಮೊಗ್ಗ ವೆಬ್ ಸೈಟ್ ನಲ್ಲಿ ಸುದ್ದಿ ಮಾಡಿದ ಇಮೇಜ್ ಮೇಲಿನದು... ಹಲೋ ಶಿವಮೊಗ್ಗ ವೆಬ್ ಸೈಟ್ ನಲ್ಲಿ ನಿನ್ನೆ ಸುದ್ದಿಯನ್ನು ವೀಕ್ಷಿಸಬಹುದು.
http://helloshivamogga.blogspot.com

ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ ಸುದ್ದಿಗೆ ತಂದ ಫಲಶೃತಿ:ಸ್ಪಂದಿಸಿದ ಅಧಿಕಾರಿ ವರ್ಗಕ್ಕೆ ಧನ್ಯವಾದಗಳು

ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ ವೆಬ್ ಸೈಟ್ ನಲ್ಲಿ ನಿನ್ನೆ ತಾನೇ ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿ  ಮತ್ತು ನಾಗರೀಕರ ಸುರಕ್ಷಿತ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಅನಧಿಕೃತವಾಗಿ ಪಟಾಕಿ ಅಂಗಡಿಗಳನ್ನು ಜನನಿಬಿಡ ಪ್ರದೇಶದಲ್ಲಿ ತೆರೆದು ಪಟಾಕಿ ಮಾರಲಾಗುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತವಾದ ಕ್ರಮ ಕೈಗೊಳ್ಳಲು ಮತ್ತು ಈ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು.

ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಇಂದು ಗಮನಹರಿಸಿ ಪಟಾಕಿ ಅಂಗಡಿಗಳ ಮೇಲೆ ದಿಡೀರ್ ದಾಳಿ ನಡೆಸಿ ಸೂಕ್ತವಾದ ಕ್ರಮವನ್ನು ಕೈಗೊಂಡಿದ್ದಾರೆ.  ಹಲೋ ಶಿವಮೊಗ್ಗ ಪತ್ರಿಕೆಯ ಸುದ್ದಿಗೆ ಸ್ಪಂದಿಸಿದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಈ ದಾಳಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ಹಾಗೂ ವಿಶೇಷವಾಗಿ ಗಮನ ನೀಡಿ ಸಾರ್ವಜನಿಕರ ಸುರಕ್ಷಿತ ದೃಷ್ಟಿಯಿಂದ ಮತ್ತು ಮುಂಜಾಗ್ರತಾ ಕ್ರಮವಾಗಿ 24 ಗಂಟೆಗಳ ಒಳಗೆ ಸುದ್ದಿಗೆ ಸ್ಪಂದಿಸಿದ  ಶ್ರೀ ಸೆಲ್ವಮಣಿ ಐಎಎಸ್, ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ, ಮತ್ತು *ಶ್ರೀ ಮಿಥುನ್ ಕುಮಾರ್, ಜಿ.ಕೆ,  ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಇವರಿಗೆ ಹಲೋ ಶಿವಮೊಗ್ಗ ದಿನಪತ್ರಿಕಾ ಬಳಗದಿಂದ ಧನ್ಯವಾದಗಳು.



ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.