ಭದ್ರಾವತಿ:ಯುವಕನೋರ್ವನಿಗೆ ಚಾಕು ಇರಿತ: ಗಾಯಾಳು ಆಸ್ಪತ್ರೆಗೆ ದಾಖಲು
ಭದ್ರಾವತಿ:ನಡೆದುಕೊಂಡು ಹೋಗುತ್ತಿದ್ದ ನಂದ ಕುಮಾರ್ ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ.ನಂದ ಕುಮಾರನ ಬೆನ್ನಿಗೆ ಆಯುಧದಿಂದ ಇರಿಯಲಾಗಿದೆ ಎನ್ನಲಾಗಿದೆ.ಭದ್ರಾವತಿಯ ಹೊನಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಹೊಸಮನೆ ಠಾಣೆ ವ್ಯಾಪ್ತಿಯ ಹನುಮಂತ ನಗರದಲ್ಲಿ ಈ ಘಟನೆ ನಡೆದಿದ್ದು ನಂದ ಕುಮಾರ್ ನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊಬೈಲ್ ವಿಷಯಕ್ಕಾಗಿ ಗಾಂಜಾ ಮತ್ತಿನಲ್ಲಿದ್ದವರು ಮೊಬೈಲ್ ಅನ್ನು ಕಿತ್ತುಕೊಂಡು ಪರಾರಿಯಾಗಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ. ತಡೆಯಲು ಪ್ರಯತ್ನಿಸಿದ ನಂದನಿಗೆ ಬೆನ್ನಿನ ಬಲಭಾಗಕ್ಕೆ ಬಲಬಾಗಿ ಚಾಕುವಿನಿಂದ ಇರಿಯಲಾಗಿದೆ ಎಂದು ಹೇಳಲಾಗುತ್ತಿದೆ.
ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ಹನುಮಂತ ನಗರದಲ್ಲಿ ಯುವಕನಿಗೆ ಚಾಕು ಇರಿದ ಘಟನೆಗೆ ಸಂಬಂಧಿಸಿದಂತೆ 9 ಜನರನ್ನ ಬಂಧಿಸಲಾಗಿದ್ದು ಇದು ಕೋಮುಗಳ ನಡುವಿನ ಸಂಘರ್ಷವಲ್ಲವೆಂದು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಮತ್ತು ಹೊಸಮನೆ ಠಾಣೆಯ ಠಾಣಾಧಿಕಾರಿ ಬೇಟಿ ನೀಡಿ ಪರಿಶೀಲನೆ ನಡೆಸಿಧ್ದಾರೆ. ತನಿಖೆ ಮುಂದುವರಿದಿದೆ.

Leave a Comment