ಸಣ್ಣ ಸುದ್ದಿಯನ್ನು ದೊಡ್ಡದು ಮಾಡಿ ಶಿವಮೊಗ್ಗದಲ್ಲಿ ಶಾಂತಿ ಕದಲಬೇಡಿ: ಶಿವಮೊಗ್ಗ ನಾಗರೀಕರ ವಿನಂತಿ
ಶಿವಮೊಗ್ಗ ಇದೀಗ ಶಾಂತಿಯುತ ವಾಗಿದೆ.ಶಿವಮೊಗ್ಗ ರಾಗಿಗುಡ್ಡ ಹೊರವಲಯದಲ್ಲಿ ಆದ ಕಲ್ಲು ತೂರಾಟ ಘಟನೆಯನ್ನು ತೆಗೆದುಕೊಂಡು . ಇಡೀ ಶಿವಮೊಗ್ಗ ನಗರವೇ ಕೊತ ಕೊತ ಅನ್ನುತ್ತಿದೆ.ಪ್ರಕ್ಷುಬ್ಧ ವಾತಾವರಣ ಇದೆ. ಅನ್ನು ವಿಚಾರ ಯಾರೂ ಸಹ ಹಬ್ಬಿಸಬಾರದು.ಶಿವಮೊಗ್ಗ ನಗರ ಶಾಂತಿಯುತವಾಗಿದೆ.ಶಾಂತಿಯುತವಾಗಿರಲಿ ಎಂಬುದು ನಮ್ಮೆಲ್ಲರ ಶಿವಮೊಗ್ಗ ಜನತೆಯ ಆಶಯವಾಗಿದೆ.
ರಾಗಿ ಗುಡ್ಡದ ಹೊರವಲಯದಲ್ಲಿ ಆದ ಘಟನೆಯನ್ನು ಪೊಲೀಸ್ ಇಲಾಖೆ ಕೂಡಲೇ ನಿಯಂತ್ರಣ ತಂದಿದೆ. ಸ್ಥಳಕ್ಕೆ ಎಸ್.ಪಿ ಮತ್ತು ಡಿಸಿ ಭೇಟಿಕೊಟ್ಟು ಪರಶೀಲನೆ ಮಾಡಿ ಸೂಕ್ತವಾದ ಕ್ರಮ ಕೈಗೊಂಡಿದ್ದಾರೆ.ಸಾಕಷ್ಟು ಪೊಲೀಸ್ ಪಹರೆಯನ್ನು ನಿಯೋಜಿಸಿದ್ದಾರೆ.ಕಿಡಿಗೇಡಿ ಆರೋಪಿಗಳನ್ನು ಸಹ ಬಂಧಿಸಿದ್ದಾರೆ ವಿಚಾರಣೆ ನಡೆಯುತ್ತಿದೆ.
ಶಿವಮೊಗ್ಗ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರಾದ್ಯದಂತ 144 ಸೆಕ್ಷನ್ ಜಾರಿ ಗೊಳಿಸಿದೆ ಅಷ್ಟೇ.
ಆದರೇ ಕೆಲವು ಮಾಧ್ಯಮದವರು ಅದನ್ನೆ ವೈಭವಿಕರಿಸಿ ದೊಡ್ಡದಾಗಿ ಸುದ್ದಿಯನ್ನು ಮಾಡಿ ನಗರದ ವ್ಯಾಪಾರಸ್ಥರು ,ವಾಣಿಜ್ಯ ವಹಿವಾಟಿಗೆ ತೊಂದರೆಕೊಡುವುದು ಎಷ್ಟು ಸರಿ....ಸಣ್ಣದು ಸುದ್ದಿಯನ್ನು ದೊಡ್ಡದು ಮಾಡಿ...ದುಡಿಯುವ ವರ್ಗಕ್ಕೆ, ಶಿವಮೊಗ್ಗಕ್ಕೆ ಕೆಟ್ಟ ಹೆಸರು ತರಬಾರದು.ಶಿವಮೊಗ್ಗ ನಗರ ಶಾಂತಿಯುತವಾಗಿ ಇರಲು ಎಲ್ಲರೂ ಸಹಕರಿಸೋಣ ...ತಪ್ಪು ಮಾಡಿದ ಕಿಡಿಗೇಡಿಗಳಿಗೆ, ದುಷ್ಜರ್ಮಿಗಳಿಗೆ ಶಿಕ್ಷೆಯಾಗಲಿ.
ಇವರು ಕೋಟೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಇಂದು ಬೆಳಿಗ್ಗೆ ನೆಹರು ರೋಡ್ ನಲ್ಲಿರುವ ಎಲ್ಲಾ ಮಳಿಗೆಗಳನ್ನು ಕ್ಲೋಸ್ ಮಾಡಿ ಎಂದು ಮೈಕ್ ನಲ್ಲಿ ಅನೌನ್ಸ್ ಮಾಡುತ್ತಾರೆ ಬಾಗಿಲು ಹಾಕಿಸುತ್ತಾರೆ. 144 crpc ಸೆಕ್ಷನ್ ಆದೇಶ ಬಾಗಿಲು ಹಾಕಿ ಅಂತಾ ಹೇಳಲಿಲ್ಲ. ಮುಂಜಾಗ್ರತಾ ಕ್ರಮ ಅಷ್ಟೇ...
ಆದ ಘಟನೆಯನ್ನು ವೈಭವಿಕರಿಸಿ ಸುದ್ದಿ ಮಾಡಿ ಶಿವಮೊಗ್ಗದ ಜನರನ್ನು ವ್ಯಾಪಾರಸ್ಥರನ್ನು ಭಯಬೀತಗೋಳಿಸುವುದು ಬೇಡ.ಈಗಾಗಲೇ ಕೊರಾನಾ ಸಂದರ್ಭದಲ್ಲಿ ಎರಡು ವರ್ಷ ವ್ಯಾಪಾರಸ್ಥರು, ಬಿದಿ ಬದಿ ವ್ಯಾಪಾರ ಮಾಡುವವರು ಆರ್ಥಿಕ ಸಂಕಷ್ಟ ಅನುಭವಿಸಿ ಇದೀಗ ಚೇತರಿಕೆ ಕಾಣುತ್ತಿದೆ. ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುತ್ತಿದ್ದಾರೆ.
ಶಿವಮೊಗ್ಗದ ವಾಣಿಜ್ಯವಹಿವಾಟಿಗೆ ತೊಂದರೆಯಾಗುವುದು ಬೇಡ ಅನ್ನುವುದು ನಮ್ಮ ಅನಿಸಿಕೆ ಅಭಿಪ್ರಾಯವಾಗಿದೆ. ಈ ರೀತಿಯ ಸಣ್ಣ ಘಟನೆಯನ್ನು ದೊಡ್ಡ ಘಟನೆಗಳು ಸಂಭವಿಸಿವೆ ಎಂದು ಸುದ್ದಿ ಮಾಡುವುದರಿಂದ ಜನರ ಸಹ ಬಾಳ್ವೆಗೆ ದುಡಿಮೆಗೆ ತೊಂದರೆಯಾಗುತ್ತದೆ. ಶಿವಮೊಗ್ಗದಲ್ಲಿ ಶಾಂತಿಸುವ್ಯವಸ್ಥೆ ಕಾಪಾಡುವತ್ತ ನಾವೆಲ್ಲರೂ ಕೈಜೋಡಿಸೋಣ..
ಕೆಲವು ಮಾದ್ಯಮ ದವರು ಸಣ್ಣ ಸುದ್ದಿಯನ್ನು ದೊಡ್ಡದು ಮಾಡಿ ಶಿವಮೊಗ್ಗದಲ್ಲಿ ಶಾಂತಿ ಕದಲಬೇಡಿ ಎಂಬುದು ನಾಗರೀಕರ ವಿನಂತಿಯಾಗಿದೆ.
ಶಿವಮೊಗ್ಗ ನಗರಕ್ಕೆ 144 ಸೆಕ್ಷನ್ ಗೆ ಬೇಡವೆಂದ ವ್ಯಾಪಾರಸ್ಥರು: ಕೂಡಲೇ ವಾಪಸ್ಸು ಪಡೆಯುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ
ಶಿವಮೊಗ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಲಾಟೆಯಾದರೇ ಗಾಂಧೀಬಜಾರ್, ನೆಹರುರಸ್ತೆ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. 144 ಸೆಕ್ಷನ್ ಜಾರಿಯಾಗುವುದರಿಂದ ಪೊಲೀಸರು ಜೀಪ್ ನಲ್ಲಿ ಬಂದು ಬಾಗಿಲು ಹಾಕಿಸುತ್ತಾರೆ. ಇದರಿಂದಾಗಿ ವ್ಯಾಪಾರ ವಹಿವಾಟಿನಿಂದ 5 ರಿಂದ 10 ಕೋಟಿ ನಷ್ಟವಾಗುತ್ತದೆ. ಕೂಡಲೇ 144 ಸೆಕ್ಷನ್ ಹಿಂಪೆಡೆಯಬೇಕು ಎಂದು ವಾಣಿಜ್ಯೋದ್ಯೋಮಿಗಳ ಸಂಘದ ಅಧ್ಯಕ್ಷರಾದ ಗೋಪಿನಾಥ್ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿಗೆ ವ್ಯಾಪಾರಸ್ಥರ ಬಲವಾದ ವಿರೋಧ ವ್ಯಕ್ತ ವಾಗಿದೆ.ಮದ್ಯಾಹ್ನದ ನಂತರ ನಾವು ಬಾಗಿಲು ತೆರೆದು ವ್ಯಾಪಾರ ಮಾಡುತ್ತೆವೆ ಎಂದು ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಗಮನಹರಿಸಿ 144 ಸೆಕ್ಷನ್ ಜಾರಿ ಹಿಂಪೆಡೆಯುತ್ತಾರೋ...ಇಲ್ಲವೋ ಎಂಬುದನ್ನು ಕಾದುನೋಡಬೇಕು....
ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಶಾಂತವಾಗಿದೆ, ದಗ ದಗ, ಕೋತ ಕೋತ ನಡೆಯುತ್ತಿಲ್ಲ: ಎಸ್.ಪಿ. ಮಾಧ್ಯಮಗಳಿಗೆ ಮಾಹಿತಿಶಿವಮೊಗ್ಗ ಹೊರವಲಯದಲ್ಲಿ ರಾಗಿ ಗುಡ್ಡದ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಿ 60 ಜನರನ್ನು ಬಂಧಿಸಲಾಗಿದೆ.. ಒಂದು 4 ಚಕ್ರ, ಒಂದು 3 ಚಕ್ರ ಮತ್ತು 2 ದ್ವಿಚಕ್ರ ವಾಹನಗಳು ಜಖಂ.. 7 ಮನೆಗಳ ಗಾಜು ಒಡೆದು.. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಅರ್ಧ ಗಂಟೆಯಲ್ಲಿ ರಾಗಿ ಗುಡ್ಡ.. ಶಿವಮೊಗ್ಗ ನಗರದಲ್ಲಿ ಯಾವುದೇ ಪರಿಣಾಮ ಬೀರಿಲ್ಲ.. ಪರಿಸ್ಥಿತಿ ಶಾಂತವಾಗಿದೆ.
ಶಿವಮೊಗ್ಗದಲ್ಲಿ ಯಾವುದೇ ದಗ ದಗ, ಕೋತ ಕೋತ ನಡೆಯುತ್ತಿಲ್ಲ.. ಅನವಶ್ಯಕ ಗಾಬರಿ ಮೂಡಿಸುವ ಅಥವಾ ಸಾರ್ವಜನಿಕರ ಮನಸ್ಸನ್ನು ಕೆಡಿಸುವ ಅಗತ್ಯವಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Leave a Comment