ಸಾಗರ:ಮಹಾಮಾರಿ ಡೆಂಗ್ಯೂಗೆ 31 ವರ್ಷದ ಗೃಹಿಣಿ ಬಲಿ

ಸಾಗರ : ಮಹಾಮಾರಿ ಡೆಂಗ್ಯೂಗೆ ತಾಲ್ಲೂಕಿನಲ್ಲಿ 31 ವರ್ಷದ ಗೃಹಿಣಿ ಬಲಿಯಾಗಿದ್ದಾರೆ. ತಾಳಗುಪ್ಪದ ಮಧುರಾ ಎಂಬ ಮಹಿಳೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಈಚೆಗೆ ಮೂರು ದಿನದ ಹಿಂದೆ ಮಹಿಳೆ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗುವ ಸಮಯ ರಲ್ಲಿ ಬಾಲಕಿಯ ರಕ್ತದ ಒತ್ತಡ ಮತ್ತು ಪಲ್ಸ್ ರೇಟ್ ಕಡಿಮೆಯಿತ್ತು. ನಂತರ ಪರಿಕ್ಷಿಸಿದಾಗ ರಕ್ತದಲ್ಲಿ ಡೆಂಗ್ಯೂ ಸಿಂಡ್ರೋಮ್ ಇರುವುದು ಪತ್ತೆಯಾಗಿದೆ.
ಅನೇಕ ರೀತಿಯ ಔಷಧಿ ನೀಡಿದರೂ ಆಕೆಯಲ್ಲಿ ರಕ್ತ ಕಣಗಳು ಕಡಿಮೆಯಾಗುತ್ತಿತ್ತು.
ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದೇ ಇದ್ದರೂ ಮಹಿಳೆ ಹಠಮಾಡಿ ಶನಿವಾರ ಡಿಸ್ಜಾರ್ಚ್ ಮಾಡಿಕೊಂಡು ಮನೆಗೆ ಮರಳಿದ್ದಾರೆ.
ನಂತರ ವಿಪರೀತ ತಲೆನೋವು,ಹೊಟ್ಟೆನೋವು ಕಾಣಿಸಿಕೊಂಡು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಗಿನ ಜಾವ ತೀವ್ರ ಅಸ್ವಸ್ಥಳಾದ ಈಕೆಯನ್ನು ವೈದ್ಯರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.
 ಭಾನುವಾರ ಬೆಳಗ್ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮಧುರಾ  ಸಾವನ್ನಪ್ಪಿದ್ದಾರೆ.
ಈಕೆ ಕಳೆದ 5 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.