ನ.2 ರಂದು ಮೆಟ್ರೋ ಆಸ್ಪತ್ರೆಯಲ್ಲಿ ಡಯಾಬಿಟಿಸ್ ವೆಲ್ನೆಸ್ ಸೆಂಟರ್ ಉದ್ಘಾಟನಾ ಸಮಾರಂಭ :ಡಾ. ಪೃಥ್ವಿ ಬಿ. ಸಿ.
ಶಿವಮೊಗ್ಗ: ನಮ್ಮ ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಮೆಟ್ರೊ ಆಸ್ಪತ್ರೆಯಲ್ಲಿ ಡಯಾಬಿಟಿಸ್ ವೆಲ್‌ನೆಸ್ ಸೆಂಟರ್‌ನ ಉದ್ಘಾಟನಾ ಸಮಾರಂಭ ನವೆಂಬರ್- 2 ರಂದು ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಮೆಟ್ರೋ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ ಎಂದು ವಿನ್‌ಲೈಫ್‌ನ ಮ್ಯಾನೇಜಿಂಗ್ ಟ್ರಸ್ಟಿ,ಮೆಟ್ರೋ ಆಸ್ಪತ್ರೆ ವೈದ್ಯಕೀಯ ನಿರ್ದೇಶಕರಾದ ಡಾ. ಪೃಥ್ವಿ ಬಿ. ಸಿ. ಹೇಳಿದರು.ಇಂದು ಮೆಟ್ರೋ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಮೆಟ್ರೊ ಆಸ್ಪತ್ರೆಯಲ್ಲಿ ಡಯಾಬಿಟಿಸ್ ವೆಲ್ನೆಸ್ ಸೆಂಟರ್ ತೆರೆಯಬೇಕು ಎಂಬ ತುಂಬಾ ದಿವಸದ ಕನಸು ಇತ್ತು, ಇದೀಗ ಡಯಾಬಿಟಿಸ್ ವೆಲ್ನೆಸ್ ಸೆಂಟರ್ ಪ್ರಾರಂಭವಾಗುತ್ತಿದೆ ಎಂದರು.
ಮಾತ್ರೆ ಔಷದಿ ತೆಗೆದು ಕೊಂಡ ತಕ್ಷಣ ಸಕ್ಕರೆ ಕಾಯಿಲೆ ಸರಿಹೋಗಲ್ಲ.ಸಕ್ಕರೆ ಕಾಯಿಲೆ ಒಂದು ಸೈಲೆಂಟ್ ಕಿಲ್ಲರ್ ಇದರಿಂದಾಗಿ ಕಿಡ್ನಿ,ಕಣ್ಣಿನ ತೊಂದರೆ, ಕಾಲಿನ ಗ್ಯಾಗ್ ರಿಂಗ್ ಉಂಟಾಗಲಿದೆ.ಭಾರತದಲ್ಲಿ ಶೇಕಡ 50% ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ.ಸಕ್ಕರೆ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಡಯಾಬಿಟಿಸ್ ವೆಲ್ ನೆಸ್ ಸೆಂಟರ್ ಪ್ರಾರಂಬಿಸಿಲಾಗಿದೆ ಎಂದರು.
ಸಕ್ಕರೆ ಕಾಯಿಲೆ ಇರುವ ರೋಗಿಗಳಿಗೆ ನುರಿತ ತಜ್ಞ ರಿಂದ ಉಚಿತವಾಗಿ ಯೋಗ ತರಬೇತಿ ನೀಡಲಾಗುತ್ತದೆ.ಪ್ರತಿಯೊಂದು ಕಾಯಿಲೆಗೆ ಒಂದೋದು ತರಹದ ಯೋಗಾಸನ ಇದೆ ಎಂದರು.
ಸಕ್ಕರೆ ಕಾಯಿಲೆ ಇರುವ ಇನ್ಸುಲಿನ್ ತೆಗೆದುಕೊಳ್ಳುವ ರೋಗಿಗಳಲ್ಲಿ ತಪ್ಪು ತಿಳುವಳಿಕೆ ಇದೆ. ಇನ್ಸುಲಿನ್ ಒಂದು ಅಮೃತ ಇದ್ದ ಹಾಗೆ.ಇನ್ಸುಲಿನ್ ಪಂಪ್ ಸಹ ದೇಹಕ್ಕೆ ಅಳವಡಿಸಿ ಕೊಳ್ಳ ಬಹುದು. ಇದರಿಂದಾಗಿ ಪ್ರತ್ಯೇಕವಾಗಿ ದಿನನಿತ್ಯ ಇನ್ಸುಲಿನ್ ತೆಗೆದು ಕೊಳ್ಳುವ ಅವಶ್ಯಕತೆ ಇಲ್ಲ ಎಂದರು
ದೊರೆಯುವ ಸೌಲಭ್ಯಗಳು
ಮೆಡಿಕಲ್ ಯೋಗ ಥೆರಪಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಕಣ್ಣಿನ ಆರೈಕೆ, ಕಂಟಿನ್ಯೂಸ್ ಮಾನಿಟರಿಂಗ್ ಆಫ್ ಬ್ಲಡ್ ಗ್ಲಕೋಸ್, ಇನ್ಸುಲಿನ್ ಮ್ಯಾನೇಜೆಂಟ್, ಡಯಟ್ ಥೆರಪಿ ದೇಹದ ಕೊಬ್ಬಿನ ವಿಶ್ಲೇಷಣೆ, ಫ್ಯಾಟಿ ಲಿವರ್ ಸ್ಟೀನಿಂಗ್, ಸೈಕಾಲಾಜಿಕಲ್ ಕೌನ್ಸಿಲಿಂಗ್, ಕಂಪ್ಯೂಟರೈಸ್ಟ್ ಪಾದ ಸೀನಿಂಗ್, ಪ್ರಿಂಟಿಂಗ್ ಆಫ್ ಫುಟ್‌ವೇರ್, ಆರ್ಟಿಫಿಷಿಯಲ್ ಪ್ಯಾಂಕ್ರಿಯಾಸ್ ಸೌಲಭ್ಯ ದೊರೆಯಲಿದೆ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಮೆಟ್ರೊ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಪಿ. ಲಕ್ಷ್ಮೀನಾರಾಯಣ ಚಾರ್ ಉಪಸ್ಥಿತರಿದ್ದರು.
Leave a Comment