ಶಿವಮೊಗ್ಗದಲ್ಲಿ ಅ.15 ರಿಂದ ಅ.24 ರವರೆಗೆ ಅದ್ದೂರಿಯಾಗಿ ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ
ಶಿವಮೊಗ್ಗ:ಶಿವಮೊಗ್ಗದಲ್ಲಿ ಅ.15 ರಿಂದ ಅ.24 ರವರೆಗೆ ನಮ್ಮೂರ ನಾಡ ಹಬ್ಬ ಶಿವಮೊಗ್ಗ ದಸರಾ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ವೈಭವಯುತವಾಗಿ ಮತ್ತು ಅದ್ದೂರಿಯಾಗಿ ನಡೆಯಲಿದೆ ಎಂದು ಮೇಯರ್ ಎಸ್ .ಶಿವಕುಮಾರ್ ಮತ್ತು ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ಇಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಶಿವಮೊಗ್ಗ ದಸರಾ ಮಹೋತ್ಸವ ಮತ್ತು ಕಾರ್ಯಕ್ರಮ ರೂಪುರೇಷೆ ಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಟಾಪನೆ ಅ.15 ರಂದು ಬೆಳಿಗ್ಗೆ 11 ಗಂಟೆಗೆ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಕೋಟೆ ರಸ್ತೆ ಹತ್ತಿರ ನಡೆಯಲಿದೆ.ದಸರಾ ಉದ್ಘಾಟನೆ ಯನ್ನು ಶ್ರೀಮತಿ ವೈಜಯಂತಿ ಕಾಶಿ ಭಾರತೀಯ ಶಾಸ್ತ್ರೀಯ ನೃತ್ಯ ಗಾರ್ತಿ ನಡೆಸಿಕೊಡಲಿದ್ದಾರೆ ಎಂದರು.
ಶಿವಮೊಗ್ಗ ದಸರಾದ ವಿವಿಧ ಸಮಿತಿ ರಚಿಸಲಾಗಿದೆ. ಮಕ್ಕಳ ದಸರಾ,ಯೋಗದಸರಾ,ಆಹಾರ ದಸರಾ,ರಂಗದಸರಾ,ಚಲನಚಿತ್ರ ದಸರಾ,ರೈತದಸರಾ,ದಸರಾ ಅಲಂಕಾರ ,ಪರಿಸರ ದಸರಾ,ಕಲಾದಸರಾ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ಕಾರ್ಯಗಳನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಅ.24 ರಂದು ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆಯಲ್ಲಿ ದೇವಾನುದೇವತೆಗಳೊಂದಿಗೆ ಶಿವಪ್ಪನಾಯಕ ಅರಮನೆ ಆವರಣದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆಗೊಳ್ಳಲಿದೆ ಎಂದರು.
ಶ್ರೀ ಶಿವಕುಮಾರ್, ಪೂಜ್ಯ ಮಹಾಪೌರರು, ಮಹಾನಗರ ಪಾಲಿಕೆ, ಶಿವಮೊಗ್ಗ ಇವರು ನಙದಿ ಧ್ವಜಕ್ಜೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ), ಸನ್ಮಾನ್ಯ ಶಾಸಕರು, ಶಿವಮೊಗ್ಗನಗರ ವಿಧಾನಸಭಾ ಕ್ಷೇತ್ರ
ಡಾ|| ಆರ್. ಸೆಲ್ವಮಣಿ, ಭಾ.ಆ.ಸೇ., ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ
ಶ್ರೀ ಜಿ.ಕೆ. ಮಿಥುನ್ ಕುಮಾರ್, ಭಾ.ಪೊ.ಸೇ. ಜಿಲ್ಲಾ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ
ಶ್ರೀ ಮಾಯಣ್ಣ ಗೌಡ ಕೆ., ಆಯುಕ್ತರು, ಮಹಾನಗರ ಪಾಲಿಕೆ, ಶಿವಮೊಗ್ಗ ಆಗಮಿಸಲಿದ್ದಾರೆ ಎಂದರು.
ಶ್ರೀ ವಿಶ್ವನಾಥ್ ಯು.ಹೆಚ್. ಅಧ್ಯಕ್ಷರು, ದಸರಾ ಉತ್ಸವ ಸಮಿತಿ ಹಾಗೂ
ಸದಸ್ಯರು, ಮಹಾನಗರ ಪಾಲಿಕೆ, ಶಿವಮೊಗ್ಗ
ಶ್ರೀಮತಿ ಲಕ್ಷ್ಮೀ ಶಂಕರ್ ನಾಯ್ಕ, ಮಾನ್ಯ ಉಪ ಮಹಾಪೌರರು, ಮಹಾನಗರ ಪಾಲಿಕೆ, ಶಿವಮೊಗ್ಗ ಶ್ರೀ ಎಸ್. ಜ್ಞಾನೇಶ್ವರ್, ಆಡಳಿತ ಪಕ್ಷದ ನಾಯಕರು, ಶಿವಮೊಗ್ಗ ಮಹಾನಗರ ಪಾಲಿಕೆ ಶ್ರೀಮತಿ ಮೆಹಕ್ ಷರೀಫ್, ವಿರೋಧ ಪಕ್ಷದ ನಾಯಕರು, ಶಿವಮೊಗ್ಗ ಮಹಾನಗರ ಪಾಲಿಕೆ
ಶ್ರೀ ಎನ್.ಎಸ್. ಮಂಜುನಾಥ, ಅಧ್ಯಕ್ಷರು-ಸ್ಥಾಯಿ ಸಮಿತಿ ಹಾಗೂ ಮಹಾನಗರ ಪಾಲಿಕೆ ಸದಸ್ಯರು
ಶ್ರೀ ರಾಜು ಎಸ್.ಜಿ. ಸದಸ್ಯರು, ಮಹಾನಗರ ಪಾಲಿಕೆ, ಶಿವಮೊಗ್ಗ
ಶ್ರೀ ಕೆ. ಶಂಕರ್ (ಗನ್ನಿ), ಸದಸ್ಯರು, ಮಹಾನಗರ ಪಾಲಿಕೆ, ಶಿವಮೊಗ್ಗ
ಶ್ರೀಮತಿ ಲತಾ ಗಣೇಶ್, ಸದಸ್ಯರು, ಮಹಾನಗರ ಪಾಲಿಕೆ, ಶಿವಮೊಗ್ಗ ಶ್ರೀ ಡಿ. ನಾಗರಾಜ್. ಸದಸ್ಯರು, ಮಹಾನಗರ ಪಾಲಿಕೆ, ಶಿವಮೊಗ್ಗ ಇವರು ಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತಿ ಇರುತ್ತಾರೆ ಎಂದು ಮಾಹಿತಿಯನ್ನು ನೀಡಿದರು.
*ವಿಶೇಷ ಆಕರ್ಷಣೆ :* ಅಲಂಕೃತ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯಲ್ಲಿ ಅಂಬಾರಿಯನ್ನು ಹೋರುವ ಸಾಗರ್, ಎಡಕ್ಕೆ-ಬಲಕ್ಕೆ ನೇತ್ರಾವತಿ ಹಾಗೂ ಹೇಮಾವತಿ ಇವರೊಂದಿಗೆ ಜಂಬೂಸವಾರಿ ಮೆರವಣಿಗೆಯಲ್ಲಿ ಮಂಗಳ ವಾದ್ಯ, ಸಮಾಳವಾದ್ಯ, ನಂದಿ ಧ್ವಜ ಕುಣಿತ, ವೀರಗಾಸೆ, ಚಂಡೆ ಮದ್ದಳೆ, ಯಕ್ಷಗಾನ, ನಗಿಸುವ ಗೊಂಬೆಗಳ ಕುಣಿತ, ಕೀಲುಕುದುರೆ (ರಾಜ್ಯ ಪ್ರಶಸ್ತಿ ವಿಜೇತ ಶೆಟ್ಟಿ ಗೊಂಬೆ ಬಳಗ) ದೊಡ್ಡ ಗೊಂಬೆಗಳ ಕುಣಿತ, ಕುಂಡ ಹೊತ್ತ ಮಹಿಳೆಯ ಕುಣಿತ, ಮಹಿಳಾ ಡೊಳ್ಳು ಕುಣಿತ, ಹುಲಿವೇಷ ಕುಣಿತ, ರೋಡ್ ಆರ್ಕೆಸ್ಟಾ ಹಾಗೂ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಫ್ರೀಡಂ ಪಾರ್ಕ್, ಶಿವಮೊಗ್ಗದಲ್ಲಿ ಸಂಜೆ 6.30 ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆಯನ್ನು ಶ್ರೀ ಪ್ರದೀಪ್ ಆರ್, ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳು, ಶಿವಮೊಗ್ಗ ಇವರು ನೀಡಲಿದ್ದಾರೆ ಎಂದರು.
ಬನ್ನಿ ಮುಡಿದ ನಂತರ
ಅತ್ಯಾಕರ್ಷಕ ಪಟಾಕಿ-ಸಿಡಿಮದ್ದು
ರಾವಣ ದಹನ ಏರ್ಪಡಿಸಲಾಗಿದೆ ಎಂದರು.
ಶಿವಮೊಗ್ಗದಲ್ಲಿನ ಎಲ್ಲಾ ನಾಗರೀಕರು ಶಿವಮೊಗ್ಗ ದಸರಾದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿ ಕೊಡಬೇಕೆಂದು ವಿನಂತಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಕಾರ್ಪೊರೇಟ್ ರ್ ಗಳು,ಆಡಳಿತ ಪಜ್ಷದ ನಾಯಕರಾದ ಎಸ್.ಜ್ಞಾನೇಶ್ವರ್ ಮತ್ತಿತರರು ಹಾಜರಿದ್ದರು.
Leave a Comment