ಶಿವಮೊಗ್ಗ ಪಾಲಿಕೆಯಲ್ಲಿ 107 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ :ಪೌರ ಕಾರ್ಮಿಕರ ಸಂಭ್ರಮ

ಶಿವಮೊಗ್ಗ: ಶಿವಮೊಗ್ಗದ ಮಹಾನಗರ ಮಾಲಿಕೆಯಲ್ಲಿ 107 ನೇರ ಪಾವತಿ ಪೌರ ಕಾರ್ಮಿಕರಿಗೆ ಇಂದು ಖಾಯಂ ನೇಮಕಾತಿ ಆದೇಶ ಆದ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿ ಶಿವಮೊಗ್ಗದ  ನೇರ ಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಮಹಾನಗರ ಪಾಲಿಕೆ ಶಿವಮೊಗ್ಗ ವತಿ ಯಿಂದ  ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು.

 ಇಂದು ಖಾಯ  ಆದ 95 ನೇರ ಪೌರ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರು.  ಖಾಯಂ ಆದ ನೌಕರರು ಮತ್ತು ಸಂಘದ ಪಧಾದಿಕಾರಿಗಳು ಪಾಲಿಕೆ ಆವರಣದಲ್ಲಿರುವ ನಂದಿಗೆ ಪೂಜೆ ಮಾಡಿ,ಬಳಿಕ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೇರ  ಪೌರ ಕಾರ್ಮಿಕ ಸಂಘದ ಅದ್ಯಕ್ಷರಾದ ಪೆಂಚಲಯ್ಯ ಖಾಯಂಗೊಳಿಸಲು ವಿಶೇಷ ಆಸಕ್ತಿ ತೋರಿಸಿದ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ  ಧನ್ಯವಾದಗಳನ್ನು ತಿಳಿಸಿದರು. 

ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳಿಗೆ ವಿಧಾನಸಭಾ ಸದಸ್ಯರಾದ ಎಸ್.ಎನ್. ಚನ್ನಬಸಪ್ಪ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ  ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದಪ್ಪ, ನೇರ ಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪೆಂಚಲಯ್ಯ, ಕಾರ್ಯದರ್ಶಿ ರವೀಶ್ ಹಾಗೂ ಪಾಲಿಕೆ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್‌, ಪಾಲಿಕೆ ಸದಸ್ಯರು ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.