ಕೆಲವರು ನನ್ನನ್ನ ಸಹಕಾರಿ ಕ್ಷೇತ್ರದಿಂದ ಹೊರಗಿಡುವ ಯತ್ನ ಮಾಡಿದರು :ನೂತನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ.ಮಂಜುನಾಥಗೌಡರ ಬೇಸರದ ಮಾತು
ಶಿವಮೊಗ್ಗ:ನಮ್ಮ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯು ಮುಂದಿನ 5 ವರ್ಷದಲ್ಲಿ 5 ಸಾವಿರ ಕೋಟಿ ಬಂಡವಾಳ ದಾಟಿ, ವಾಣಿಜ್ಯ ಬ್ಯಾಂಕ್ ಗಿಂತ ಮುಂದೇ ಹೋಗುವ ದೊಡ್ಡ ಕನಸು-ಗುರಿಯನ್ನು ಹೊಂದಿದೆ.ಕೆಲವರು ನನ್ನನ್ನ ಸಹಕಾರಿ ಕ್ಷೇತ್ರದಿಂದ ಹೊರಗಿಡುವ ಯತ್ನ ಮಾಡಿದರು ಎಂದು ನೂತನ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಗೊಂಡ ಆರ್. ಎಂ.ಮಂಜುನಾಥಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.
ಆರ್.ಎಂ. ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ
ಇಂದು ಬೆಳಿಗ್ಗೆ ಡಿಸಿಸಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪಕ್ಷ,ರಾಜಕೀಯ, ಜಾತಿಯ ಆದಾರಿತ ವ್ಯವಸ್ಥೆ ಸಹಕಾರಿ ಕ್ಷೇತ್ರದಲ್ಲಿ ಇರಬಾರದು.1000 ಕ್ಕಿತ ಹೆಚ್ಚು ಸಹಕಾರಿ ಕ್ಷೇತ್ರದ ಅಭಿವೃದ್ಧಿಯ ಗುರಿ ಹೊಂದಲಾಗಿದೆ. 174 ಪ್ರಾಥಮಿಕ ಸಹಕಾರ ಸಂಘಗಳು ಮತ್ತು ಹಾಲುಉತ್ಪಾದಕರ ಸಂಘಗಳು ಸೇರಿದಂತೆ ಸಹಕಾರಿ ಕ್ಷೇತ್ರ ವನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದನ್ನು ಒಂದು ವಾರದಲ್ಲಿ ಬ್ಲೂಪ್ರಿಂಟ್ ತಯಾರಿಸಿ ನಂತರ ಮಾಹಿತಿ ನೀಡಲಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೂತನ ಯೋಜನೆ ಅಡಿಯಲ್ಲಿ ಸೇವಾ ಕ್ಷೇತ್ರಗಳು ಸಹಕಾರಿ ಕ್ಷೇತ್ರವನ್ನಾಗಿ ಬದಲಾಯಿಸಲಾಗುವುದು.
ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಸ ಯೋಜನೆ ಬಂದಿದೆ ಪ್ರಾಥಮಿಕ ಸಹಕಾರ ಕ್ಷೇತ್ರವನ್ನ ಸೇವಾ ಕ್ಷೇತ್ರಗಳನ್ನಾಗಿಸಲಾಗುತ್ತಿದೆ. ರೈತರಿಗೆ ಗೊಬ್ಬರ, ಬೆಳೆದ ಬೆಲೆ ಮಾರುಕಟ್ಟೆ ಸೌಲಭ್ಯವನ್ನ ನೀಡಲಾಗುತ್ತದೆ. ಮುಂದಿನ ಐದು ವರ್ಷದಲ್ಲಿ ಸಂಪೂರ್ಣವಾಗಿ ಸಹಕಾರಿ ಕ್ಷೇತ್ರ ವನ್ನಾಗಿ ಬದಲಾಯಿಸಲಾಗುವುದು. ಅಚ್ಚುಕಟ್ಟಾದ ಕಟ್ಟಡಗಳನ್ನ ಒದಗಿಸಲಾಗುತ್ತದೆ. ಇದನ್ನ ಸರ್ಕಾರದ ಸಹಕಾರ ವಿಲ್ಲದೆ ಒದಗಿಸಲಾಗುವುದು ಎಂದು ತಿಳಿಸಿದರು.
ಮುಂದಿನ ಐದು ವರ್ಷದಲ್ಲಿ 5000 ಕೋಟಿ ಬಂಡವಾಳದ ಗುರಿ ಮುಟ್ಟಲಾಗುವುದು. 30 ವರ್ಷದ ಹಿಂದ 30 ಕೋಟಿ ಇತ್ತು. ಈಗ 2000 ಕೋಟಿ ವರ್ಕಿಂಗ್ ಕ್ಯಾಪಿಟಲ್ ಇದೆ. ಅಪೆಕ್ಸ್ ಬ್ಯಾಂಕ್ ಕೆಳಹಂತದ ಸಹಕಾರಿ ಸಂಸ್ಥೆಯಿಂದ ಅಪೆಕ್ಸ್ ಬ್ಯಾಂಕ್ ಫೆಡರೇಷನ್ ವರೆಗೆ ಹಣ ಒದಗಿಸಿದ್ದೇವೆ. ಜಾತಿ ಆಧಾರಿತ ಮತ್ತು ಪಕ್ಷದ ಆಧಾರ ರಹಿತ ಬ್ಯಾಂಕ್ ರಚಿಸುವ ಗುರಿ ಹೊಂದಲಾಗಿದೆ ಎಂದರು.
ಆಗುಂಬೆ, ನಗರ ಹೋಬಳಿ, ಸಾಗರದ ಬಾರಂಗಿ ಹೋಬಳಿ ಹೊರತು ಪಡಿಸಿ ಜಿಲ್ಲೆಯಲ್ಲಿ ಸಂಪೂರ್ಣ ಬರವಿದೆ. ರೈತರಿಗೆ ಸಹಕಾರ ಸಂಘದಿಂದ ಏನು ಅನುಕೂಲ ಒದಗಿಸಬಹುದು ನೀಡಲು ಸಹಕಾರ 2.60 ಲಕ್ಷ ರೈತ ಸದಸ್ಯರಿದ್ದಾರೆ. ಸಂಪೂರ್ಣವಾಗಿ ಆರ್ಥಿಕ ನೆರವು ಮುಟ್ಟಿಸಲು ಐದು ವರ್ಷಬೇಕಾಗುತ್ತದೆ 1994-95 ರಲ್ಲಿ 11 ಸಾವಿರ ರೈತರಿದ್ದರು.
11 ವರ್ಷದ ಹಿಂದೆ 160 ಕೋಟಿ ಸಾಲ ನೀಡಲಾಗಿತ್ತು. ಅದು 70 ಕೋಟಿಗೆ ಕುಸಿದಿತ್ತು. ಅದನ್ನ ಬಹಳಬೇಗ ಚೇತರಿಕೆ ಮಾಡುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಲಾಗುವುದು ಎಂದರು.
ಗೃಹಲಕ್ಷ್ಮಿ ಯೋಜನೆಯನ್ನ ಡಿಸಿಸಿ ಬ್ಯಾಂಕ್ ನಿಂದ ತಾಲ್ಲೂಕು ಮಟ್ಟದಲ್ಲಿ ಎಲ್ಲಾ ಗ್ರಾಮೀಣ ರೈತ ಮಹಿಳೆಯರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ನಲ್ಲಿ 10 ರೂ ಮೂಲಕ ಖಾತೆ ಆರಂಭಿಸಬಹುದು. ವಾಣಿಜ್ಯ ಬ್ಯಾಂಕ್ ಬಿಟ್ಟು ಇಲ್ಲಿಗೆ ಬನ್ನಿ ಎಂಬ ಉದ್ದೇಶವಲ್ಲ ಬದಲಿಗೆ ನಮ್ಮಲ್ಲಿ ಉತ್ತಮ ಸೇವೆ ನೀಡುವುದಾಗಿ ಭರವಸೆ ನೀಡಲಾಗುತ್ತದೆ. ಗ್ರಾಮೀಣ ಬ್ಯಾಂಕ್ ಗಳನ್ನಜಿಲ್ಲಾ ಬ್ಯಾಂಕ್ ಅಡಿ ತರಲು ಯೋಜಿಸಲಾಗುತ್ತಿದೆ ಎಂದರು
ಸಹಕಾರಿ ಚಳುವಳಿ ಜನರ ಚಳುವಳಿ
ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸ್ ಯನ್ನ ಹೋಬಳಿಯ ಭಾಗದಲ್ಲಿ ಉತ್ತೇಜನ ನೀಡಲು ಯೋಜಿಸಲಾಗುತ್ತಿದೆ. ಗೊಬ್ಬರ ಬೀಜ ವನ್ನಮಾತ್ರ ಒದಗಿಸದೆ ಸೂಪರ್ ಮಾರ್ಕೆಟ್ ರೀತಿಯಲ್ಲಿ ಸಹಕಾರಿ ಕ್ಷೇತ್ರವನ್ನ ಬದಗಿಸಲಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಸಹಕಾರಿಕರಣ ಮಾಡಲಾಗುತ್ತದೆ. ಸಹಕಾರ ಚಳುವಳಿ ಸರ್ಕಾರಿ ಚಳುವಳಿ ಅಲ್ಲ ಅದು ಜನರ ಚಳುವಳಿಯಾಗಿದೆ. ಹಾಗಾಗಿ ಗುರುತರ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.
ಎರಡುವರೆ ವರ್ಷ ಸಹಕಾರಿ ಕ್ಷೇತ್ರದಿಂದ ದೂರವಿದ್ಧಾಗ ಚಕಾರ ಎತ್ತಿರಲಿಲ್ಲ. ದೊಡ್ಡವರೆಲ್ಲ ನನ್ನಬಗ್ಗೆ ಮಾತನಾಡಿದ್ದರು. ಸವಾಲು ಸ್ವೀಕರಿಸಿದ್ದೆ. ಟೀಕೆ ಮಾಡಲಿಲ್ಲ.ಆಶೀರ್ವಾದ ಎಂದು ತಿಳಿದಿರುವೆ. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಇಳಿದು ಹೋದಾಗ ಬ್ಯಾಂಕ್ 32 ಕೋಟಿ ಲಾಭದಲ್ಲಿತ್ತು. ಈಗಿನದ್ದು ಹೇಳಲ್ಲ. ಲಾಭದಲ್ಲಿ ಇದೆ. ಮದಿನ ದಿನಗಳಲ್ಲಿ ಅಂಕಿ ಅಂಶ ತಿಳಿಸುವೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಯೋಗೀಶ್, ಶ್ರೀಪಾದ ಹೆಗಡೆ, ದುಗ್ಗಪ್ಪಗೌಡರು, ಸಹಕಾರ ಇಲಾಖೆಯ ನಿಬಂಧಕರಾದ ವಾಸುದೇವ್ ಹಾಗೂ ಇತರರು ಉಪಸ್ಥಿತರಿದ್ದರು.
Leave a Comment