ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ವೈಭಯುತವಾಗಿ ನಡೆದಿದೆ: ಧನ್ಯವಾದ ತಿಳಿಸಿದ ಶಾಸಕ ಚನ್ನಬಸಪ್ಪ

 ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ  ರಾಜಬೀದಿ ಉತ್ಸವ ಅತ್ಯಂತ ವೈಭವಯುತವಾಗಿ ನಡೆದಿದೆ.ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿತ್ತು. ಲಕ್ಷಾಂತರ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ವೈಭವಯುತವಾಗಿ ನಡೆಯಲು ಕಾರಣಕರ್ತರಾದ ಎಲ್ಲರಿಗೂ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಧನ್ಯವಾದಗಳನ್ನು ತಿಳಿಸಿದರು.

ಇಂದು  ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಈ ಗಣಪತಿ ರಾಜಬೀದಿ ಉತ್ಸವ ಕಾರ್ಯಕ್ಕೆ ವಿವಿಧ ಸಂಘಸಂಸ್ಥೆಗಳು ಮತ್ತು ಕೇಸರಿ ಅಲಂಕಾರಿಕ ಸಮಿತಿಯವರು ತುಂಬಾ ಅಚ್ಚುಕಟ್ಟಾಗಿ  ಮುಖ್ಯವಾದ ರಸ್ತೆಯಲ್ಲಿ ಮತ್ತು ಸರ್ಕಲ್ ನಲ್ಲಿ ಅಲಂಕಾರ ಮಾಡಿದ್ದಾರೆ.

ವಿವಿಧ ರಾಜಕೀಯ ಪಕ್ಷದ ಮುಖಂಡರು ಸಹ ಪಾಲ್ಗೊಂಡು ಸಹಕರಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಸಮಿತಿಯವರು  ಲಕ್ಷಾಂತರ ಭಕ್ತಾಧಿಗಳಿಗೆ ಊಟ ಉಪಚಾರ,ಪಾನೀಯ, ಸಿಹಿತಿಂಡಿ ವಿತರಣೆ ಮಾಡಿದ್ದಾರೆ. ಶಿವಮೊಗ್ಗ ಒಳ್ಳೆಯ ಪರಂಪರೆ ಮುಂದುವರೆದಿದೆ.

ಈ ಬಾರಿ ಗೋಪಿ ವೃತ್ತದಲ್ಲಿ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿರುತ್ತದೆ. ಅದ್ಭುತ ಯಶಸ್ಸನ್ನು ಕಂಡಿದೆ. 

ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ಇಲಾಖೆ ಸಹ ವಿಸರ್ಜನಾ ಪೂರ್ವ ಮೆರವಣಿಗೆ ಸುಗಮವಾಗಿ ಸಾಗಲು ಸಾಕಷ್ಟು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಾರೆ. ಎಲ್ಲರ ಪ್ರಯತ್ನದಿಂದ ವಿಸರ್ಜನಾ ಪೂರ್ವ ಮೆರವಣಿಗೆ ರಾಜಬೀದಿ ಉತ್ಸವ ಯಶಸ್ವಿಯಾಗಿದೆ. ಆಗಾಗಿ ರಾಜಬೀದಿ ಉತ್ಸವ ದಲ್ಲಿ ಪಾಲ್ಗೋಂಡ ಸಮಸ್ತ ಜನರಿಗೂ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.ಮಾಲಾರ್ಪಣೆ ಸಹ ವೈಭೋವಪೇತ ಮೆರವಣಿಗೆ ಗೆ ಸಾಕ್ಷಿಯಾಗಿದೆ ಎಂದರು.

ಶಿವಮೊಗ್ಗದ ಕಲಾವಿದರು ಅಲಂಕಾರ ಮಾಡಿರುವುದು ವಿಶೇಷವಾಗಿದೆ. ಶಿವಮೊಗ್ಗ ಗಣಪತಿ ರಾಜಬೀದಿ ಉತ್ಸವ ಗಣೇಶನ ಜಾತ್ರೆ ತರ ಆಗಿತ್ತು.ಸಂತಸ ತಂದಿದೆ ಎಂದರು.

ಈದ್ ಮಿಲಾದ್ ಹಬ್ಬಕ್ಕೆ ಮತ್ತು ಮೆರವಣಿಗೆಗೆ  ಶುಭ ಹಾರೈಸಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ;

ಅದೇ ರೀತಿಯಲ್ಲಿ ಅಕ್ಟೋಬರ್ 1 ರಂದು ಮುಸ್ಲಿಂ ಭಾಂದವರ  ಈದ್ ಮಿಲಾದ್ ಹಬ್ಬದ ಸಂದರ್ಭದ ಸಮಯದಲ್ಲಿ ಮೆರವಣಿಗೆ ನಡೆಯುತ್ತಿದೆ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅದ್ಯಕ್ಷರಾದ ಜಗದೀಶ್, ಬಿಜೆಪಿ ಮುಖಂಡರಾದ ಜ್ಞಾನೇಶ್ವರ್,ಮೋಹನ್ ರೆಡ್ಡಿ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.