ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯ ರಾಜ ಬೀದಿ ಉತ್ಸವ ಹಿನ್ನೆಲೆ -ಶಿವಮೊಗ್ಗ ಕೇಸರಿಮಯ: ಬಿಗಿ ಪೊಲೀಸ್ ಬಂದೋಬಸ್ತ್

ಶಿವಮೊಗ್ಗ :- ಶಿವಮೊಗ್ಗದಲ್ಲಿ 1945ರಲ್ಲಿ ಹಿಂದೂ ಮಹಾಸಭಾದ ವತಿಯಿಂದ ಗಣಪತಿ ಪ್ರತಿಷ್ಠಾಪಿಸಲಾಗಿತ್ತು.‌ ಅಂದಿನಿಂದ ಮಹಾಸಭಾವು ಗಣಪತಿಯನ್ನು ಪ್ರತಿ ವರ್ಷ ಪ್ರತಿಷ್ಠಾಪಿಸಿಕೊಂಡು ಬರುತ್ತಿದೆ. 11 ದಿನಗಳ ಕಾಲ ಶಿವಮೊಗ್ಗ ನಗರದ ಪಾರ್ವತಿ ಭೀಮೇಶ್ವರ ದೇವಾಲಯದಲ್ಲಿ ಇಡಲಾಗುವ ಹಿಂದೂ ಮಹಾಸಭಾ ಗಣಪತಿಗೆ 80 ವರ್ಷಗಳ ಇತಿಹಾಸ ಇದೆ.
ಗಾಂಧಿಬಜಾರಿನ ಪ್ರಮುಖ ದ್ವಾರದಲ್ಲಿ ಗಮನಸೆಳೆಯುವ ಉಗ್ರನರಸಿಂಹನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಸುಮಾರು 30 ಅಡಿ ಎತ್ತರದ ಈ ಮೂರ್ತಿ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಇಂದು ಸಾವಿರಾರು ಜನರು ಮೂರ್ತಿಯ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ನಾಳೆ ನಡೆಯುವ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದೆ. ನಗರದ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ತೋರಣಗಳು. ಭಗವಾಧ್ವಜಗಳು, ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ.
ಗಾಂಧಿ ಬಜಾರ್‌ ಅಂತೂ ಕಣ್ಣಿಗೆ ಕಾಣುವಷ್ಟು ದೂರ ಕೇಸರಿಮಯವಾಗಿದೆ. 
ಸೆ.28ರಂದು ಬೆಳಗ್ಗೆ 10.30ಕ್ಕೆ ಕೋಟೆ ಶ್ರೀ ಭೀಮೇಶ್ವರದ ದೇವಸ್ಥಾನದ ಆವರಣದಿಂದ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.ಮೆರವಣಿಗೆಯು  ಡಾ.ಎಸ್‌.ಪಿ.ಎಂ.ರಸ್ತೆ, ಗಾಂಧಿ ಬಜಾರ್‌, ಬಿ.ಹೆಚ್.ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ, ಕುವೆಂಪು ರಸ್ತೆ, ಕೋಟೆ ಅಂಚೆ ಕಚೇರಿ ರಸ್ತೆ ಮೂಲಕ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ತಲುಪಲಿದೆ. ದೇಗುಲದ ಹಿಂಬದಿ ಭೀಮನ ಮಡುವಿನಲ್ಲಿ ಗಣಪತಿಯ ವಿಸರ್ಜನೆ ನಡೆಯಲಿದೆ.

ಪ್ರತಿ ವರ್ಷವೂ ಹಿಂದೂ ಸಂಘಟನೆಯ ಮಹಾ ಮಂಡಳಿ ವಿಶೇಷ ಅಲಂಕಾರಗಳನ್ನು ಇಲ್ಲಿ ಮಾಡುತ್ತ ಬಂದಿದೆ. ಕಳೆದ ಬಾರಿಯೂ ಗೀತೋಪದೇಶದ ಸ್ತಬ್ಧ ಚಿತ್ರವನ್ನು ಮಾಡಲಾಗಿತ್ತು. ಈ ಬಾರಿಯ ವಿಶೇಷವೆಂದರೆ ಇದು ಕೇವಲ ಸ್ತಬ್ಧ ಚಿತ್ರವಲ್ಲದೆ ರೋಬೋಟ್‌ ಮೂಲಕ ಇದನ್ನು ಚಲನಸ್ಥಿತಿಯಲ್ಲಿ ಇಡಲಾಗಿದೆ. ಈ ಮೂರ್ತಿಯು ನೋಡುಗರ ಗಮನ ಸೆಳೆಯುತ್ತಿದೆ.ಸುಮಾರು 20ಕ್ಕೂ ಹೆಚ್ಚು ಕಲಾವಿದರು 3 ತಿಂಗಳ ಕಾಲ ಶ್ರಮವಹಿಸಿ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ.ಇದಲ್ಲದೆ ಶಿವಪ್ಪನಾಯಕ ವೃತ್ತದಲ್ಲಿ ಚಂದ್ರಯಾನ ರಾಕೆಟ್‌ನ ಪ್ರತಿಕೃತಿಯನ್ನು ಕೂಡ ನಿರ್ಮಿಸಲಾಗಿದೆ.ಇದು ಕೂಡ ನೋಡುಗರ ಗಮನ ಸೆಳೆಯುತ್ತಿದೆ. ಈ ಬಾರಿ ಚಂದ್ರಯಾನ -3ರ ಯಶಸ್ಸಿನ ಹಿನ್ನೆಲೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಹಾಗೆಯೇ ಆಂಜನೇಯ ಮೂರ್ತಿಯನ್ನು ಕೂಡ ನಿರ್ಮಿಸಲಾಗಿದೆ.ಈದ್‌ಮಿಲಾದ್‌ ಮತ್ತು ಗಣೇಶ ಹಬ್ಬ ಒಂದೇ ಬಾರಿ ಬಂದಿದ್ದರಿಂದ ಮೆರವಣಿಗೆಯ ಆತಂಕವಿತ್ತು. ಆದರೆ ಮುಸಲ್ಮಾನ ಭಾಂದವರು ಮೆರವಣಿಗೆ ಮುಂದಕ್ಕೆ ಹಾಕಿದ್ದಾರೆ.ಈಗಾಗಲೇ ಶಾಂತಿಯುತವಾಗಿ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ   ಶಿವಮೊಗ್ಗ ಎಸ್.ಪಿ.ಮಿಥುನ್ ಕುಮಾರ್ ರವರು ಅನೇಕ ಬಾರಿ ಶಾಂತಿ ಸಭೆಗಳು ನಡೆಸಿದ್ದಾರೆ.
ಪೋಲಿಸ್ ಇಲಾಖೆ ರೂಟ್ ಮಾರ್ಚ್ ಸಹ ನಗರದ ಪ್ರಮುಖ ರಸ್ತೆ ಗಳಲ್ಲಿ ಮಾಡಿದೆ. ಶಾಂತಿಯುತ ಮೆರವಣಿಗೆ ಸಾಗಲು ಸೂಕ್ತವಾದ ಬಂದೋಬಸ್ತ್ ಸಹ ಮಾಡಿಕೊಂಡಿದೆ.
ಕೆಲವು ಸಂಘ-ಸಂಸ್ಥೆಗಳು ಕೂಡ ಶಾಂತಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಮುಸ್ಲೀಂ ಮುಖಂಡರು ಹಿಂದೂ ಮಹಾಸಭಾಪ್ರತಿಷ್ಟಾಪಿಸಿರುವಗಣಪತಿಯ ದರ್ಶನ ಪಡೆದು ಹಬ್ಬ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನಡೆಯಲೆಂದು ಆಶಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ನಾಳೆ ನಡೆಯುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಪೊಲೀಸ್‌ ಇಲಾಖೆ, ಸಂಘ ಸಂಸ್ಥೆಗಳು, ಹಿಂದು ಮಹಾ ಮಂಡಳಿ ಎಲ್ಲರೂ ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಮೆರವಣಿಗೆಯಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಅದರಲ್ಲೂ ಸಾವಿರಾರು ಮಹಿಳೆಯರು ಕೂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ* ಹಿನ್ನೆಲೆ ಸೂಕ್ತ ಪೊಲೀಸ್ ಬಂದೋಬಸ್ತ್: ಪೊಲೀಸ್ ಸರ್ಪಗಾವಲು
ಶಿವಮೊಗ್ಗ: ದಿನಾಂಕ 28-09-2023 ರಂದು *ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ* ಬಂದೋಬಸ್ತ್ ಕರ್ತವ್ಯಕ್ಕೆ *05* ಹೆಚ್ಚುವರಿ ಪೊಲೀಸ್  ಅಧೀಕ್ಷಕರು *14* ಪೊಲೀಸ್  ಉಪಾಧೀಕ್ಷಕರು, *40* ಪೋಲಿಸ್ ನಿರೀಕ್ಷಕರು, *75* ಪೊಲೀಸ್ ಉಪನಿರೀಕ್ಷಕರು, *2500* ಎಎಸ್ಐ, ಹೆಚ್.ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿಗಳು, *10* ಡಿಎಆರ್ ತುಕಡಿ, *15* ಕೆಎಸ್ಆರ್.ಪಿ ತುಕಡಿ, *02* ಆರ್.ಎ.ಎಫ್ ಕಂಪನಿಗಳು *100* ವಿಡಿಯೋ ಕ್ಯಾಮರಾಗಳು ಮತ್ತು *08* ಡ್ರೋಣ್ ಕ್ಯಾಮರಾಗಳನ್ನು  ನಿಯೋಜಿಸಲಾಗಿರುತ್ತದೆ ಹಾಗೂ ಮೆರವಣಿಗೆ ಮಾರ್ಗ ಮತ್ತು ಪ್ರಮುಖ ಸ್ಥಳಗಳಲ್ಲಿ 500 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ. ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ,  *ಶ್ರೀ ಮಿಥುನ್ ಕುಮಾರ್ ಐಪಿಎಸ್* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು, ಈ ದಿನ ದಿನಾಂಕಃ 27-09-2023  ರಂದು ಶಿವಮೊಗ್ಗ ನಗರದ *ಡಿಎಆರ್ ಪೊಲೀಸ್ ಕವಾಯತು ಮೈಧಾನದಲ್ಲಿ  ಬ್ರೀಫಿಂಗ್* ನಡೆಸಿ, ಬಂದೋಬಸ್ತ್ ಸಂದರ್ಭದಲ್ಲಿ ಅವರುಗಳು ನಿರ್ವಹಿಸಬೇಕಾದ *ಕರ್ತವ್ಯಗಳ ಕುರಿತು ವಿವರಿಸಿ, ಸಲಹೆ ಮತ್ತು ಸೂಚನೆಗಳನ್ನು* ನೀಡಿದರು. ದಿನಾಂಕಃ 28-09-2023 ರಂದು ನಡೆಯುವ ಶಿವಮೊಗ್ಗ ನಗರದ *ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯ* ಹಿನ್ನೆಲೆಯಲ್ಲಿ *ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರ ನೇತೃತ್ವದಲ್ಲಿ ಈ ದಿನ ದಿನಾಂಕಃ 27-09-2023  ರಂದು ಸಂಜೆ ಶಿವಮೊಗ್ಗ ನಗರದಲ್ಲಿ *ರೂಟ್ ಮಾರ್ಚ್ (ಪಥ ಸಂಚಲನ)* ಅನ್ನು ಹಮ್ಮಿಕೊಂಡಿದ್ದು,
 ರೂಟ್ ಮಾರ್ಚ್ (ಪಥ ಸಂಚಲನ) ಅನ್ನು ಶಿವಮೊಗ್ಗ ನಗರದ  *ಗೋಪಿ ವೃತ್ತದಿಂದ ಪ್ರಾರಂಭಿಸಿ,* ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ಎಂಕೆಕೆ ರಸ್ತೆ, ಕೆ ಆರ್ ಪುರಂನಿಂದ ಆರ್.ಎಂ.ಎಲ್   ನಗರದ *ಟೆಂಪೋ ಸ್ಟಾಂಡ್ ಗೆ ಬಂದು  ಮುಕ್ತಾಯ ಮಾಡಲಾಯಿತು.*ಸದರಿ ರೂಟ್ ಮಾರ್ಚ್ (ಪಥ ಸಂಚಲನ) ನಲ್ಲಿ *ಪೊಲೀಸ್ ಉಪಾಧೀಕ್ಷಕರುಗಳು,* ಪೊಲೀಸ್ ವೃತ್ತ ನಿರೀಕ್ಷಕರುಗಳು, ಪೊಲೀಸ್ ನಿರೀಕ್ಷಕರುಗಳು, ಪೊಲೀಸ್ ಉಪ ನಿರೀಕ್ಷಕರುಗಳು ಹಾಗೂ *ಆರ್‌.ಎ.ಎಫ್‌, ಡಿಎಆರ್, ಕೆಎಸ್ಆರ್.ಪಿ, ಸಿವಿಲ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಗೃಹ ರಕ್ಷಕ ಸಿಬ್ಬಂಧಿಗಳು* ಭಾಗವಸಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.