ಈಜಲು ತೆರಳಿದ ಕೃಷಿ ಅಧಿಕಾರಿ ಕುಮಾರ್ ಹಾಗೂ ಐಡಿಎಫ್ ಸಿ ಬ್ಯಾಂಕಿನ ಉದ್ಯೋಗಿ ಅರುಣ್ ಸಾವು

ಸಾಗರ : ತಾಲ್ಲೂಕಿನ ವಡನ್ ಬೈಲ್ ಸಮೀಪ ಈಜಲು ತೆರಳಿದ್ದ ಇಬ್ಬರು ನೀರು ಪಾಲಾದ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಕೃಷಿ ಅಧಿಕಾರಿ ಕುಮಾರ್ ಹಾಗೂ ಐಡಿಎಫ್ ಸಿ ಬ್ಯಾಂಕಿನ ಉದ್ಯೋಗಿ ಅರುಣ್ ಎಂದು ಗುರುತಿಸಲಾಗಿದೆ.
ವಡನ್ ಬೈಲ್ ಸಮೀಪ ಇರುವ ದೇವಿಗುಂಡಿಗೆ ಕುಟುಂಬ ಸಮೇತ ಪ್ರವಸಾಕ್ಕೆ ಬಂದಿದ್ದರು.
ಮದ್ಯಾಹ್ನ ಊಟ ಮುಗಿಸಿದ ಇವರು ಈಜಲು ತೆರಳಿದ್ದಾರೆ.
ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇಬ್ಬರ ಶವವನ್ನು ಮೇಲಕ್ಕೆತ್ತಲಾಗಿದ್ದು,ಸಾಗರ ಉಪವಿಭಾಗೀಯ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
ಸ್ಥಳಕ್ಕೆ ಕಾರ್ಗಲ್ ಸಬ್ ಇನ್ಸ್‌ಪೆಕ್ಟರ್ ಹೊಳಬಸಪ್ಪ ಭೇಟಿ ನೀಡಿ,ಪರಿಶೀಲಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.