ಸ್ಮಾರ್ಟ್ ಸಿಟಿ ಬ್ರಷ್ಟಾಚಾರ ನೋಡಿ..ಬಂಗಾರಪ್ಪ ಅಭಿಮಾನಿ ಕಟ್ಟಿದ ಬಸ್ ನಿಲ್ದಾಣಕ್ಕೆ ಮರು ನಾಮಕರಣ ಬಿಲ್ ಅಂತೆ!!
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ. ಎಸ್. ಬಂಗಾರಪ್ಪ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯಲ್ಲಿ ಮೋರ್ ಎದುರು 100 ಅಡಿ ರಸ್ತೆಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲು ಅಭಿಮಾನಿ ಗುತ್ತಿಗೆದಾರರಾದ ಈಶ್ವರರೆಡ್ಡಿ ಎಂಬುವ ರಿಗೆ ತಮ್ಮ ಒಡೆತನದ ಶರಾವತಿ ಡೆಂಟಲ್ ಕಾಲೇಜ್ ನಿವೇಶನದಲ್ಲಿ ಅನುಮತಿ ನೀಡಿದ್ದು,ಈಶ್ವರರೆಡ್ಡಿ ಎಂಬವರು ತಮ್ಮ ಸ್ವಂತ ಖರ್ಚಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು *ಎಸ್ ಬಂಗಾರಪ್ಪ ಸಾರ್ವಜನಿಕ ಬಸ್ ನಿಲ್ದಾಣ* ಎಂದು ಹೆಸರಿಟ್ಟು1996- 97 ರಲ್ಲಿ ನಿರ್ಮಿಸಿದ್ದರು ಎನ್ನಲಾಗಿದೆ.
ಇದೀಗ ಸ್ಮಾರ್ಟ್ ಸಿಟಿ ಲಿಮಿಟೆಡ್ ನವರು ನೂತನವಾಗಿ ಸದರಿ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಕಾರ್ಪೊರೇಷನ್ ಶಿವಮೊಗ್ಗ ಗೋಪಾಲಗೌಡ ಬಡಾವಣೆ ಬಸ್ ನಿಲ್ದಾಣ ಎಂದು ಮರು ನಾಮಕರಣ ಮಾಡಿ ನಕಲಿ ಬಿಲ್ಲು ಸೃಷ್ಟಿಸಿ ಬಾರಿ ಅವ್ಯವಹಾರ ಮಾಡಿದ್ದಾರೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಮತ್ತು ಈ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ ಎಂದು ಗೋಪಾಲಗೌಡ ಬಡಾವಣೆ ನಿವಾಸಿ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಶಿವಮೊಗ್ಗ ಮತ್ತು ,ಎಸ್, ಬಂಗಾರಪ್ಪಜಿ ಅಭಿಮಾನಿ ಬಳಗ ಹಾಗೂ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್ ಪತ್ರಿಕೆಗೆ ತಿಳಿಸಿದ್ದಾರೆ.ಸ್ಮಾರ್ಟ್ ಸಿಟಿ ಭ್ರಷ್ಟಾಚಾರಕ್ಕೆ ಇನ್ನೊಂದು ಸಾಕ್ಷಿಯಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.
ಬಂಗಾರಪ್ಪಜಿ ಅವರ ಅಭಿಮಾನಕ್ಕಾಗಿ ಅವರ ಹೆಸರಿನಲ್ಲಿ ಬಸ್ ನಿಲ್ದಾಣ ಮಾಡಿರುವುದನ್ನು ತೆಗೆದು ಹಾಕಿರುವುದು ಅವರ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶವನ್ನುಂಟುಮಾಡಿದೆ .
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಿ, ಅವ್ಯವಹಾರ ಮತ್ತು ಅಕ್ತಮವಾಗಿ ಬಂಗಾರಪ್ಪ ಅಭಿಮಾನಿ ಕಟ್ಟಿದ ಬಸ್ ನಿಲ್ದಾಣಕ್ಕೆ ಬಿಲ್ ಆಗಿದಲ್ಲಿ ಸೂಕ್ತಕ್ತಮ ತೆಗೆದುಕೊಳ್ಳಬೇಕು ಎನ್ನುವುದು ನಾಗರೀಕರ ಒತ್ತಾಸೆಯಾಗಿದೆ.
Leave a Comment