ಜೆಡಿಎಸ್ ಪಕ್ಷ ತೊರೆದು ಸೆ.26 ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಎಂ.ಶ್ರೀಕಾಂತ್

ಶಿವಮೊಗ್ಗ: ನಮ್ಮ ಜೆಡಿಎಸ್ ಪಕ್ಷದ ಬೆಂಬಲಿತ ಮುಖಂಡರು ಮತ್ತು ಕಾರ್ಯಕರ್ತರೊಂಧಿಗೆ ಚರ್ಚಿಸಿ ತೀರ್ಮಾನಕ್ಕೆ ಬಂದು ಜೆಡಿಎಸ್ ಪಕ್ಷ ತೊರೆದು  ಕಾಂಗ್ರೆಸ್ ಪಕ್ಷಕ್ಕೆ ಇದೇ ತಿಂಗಳ 26 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಚಿವರು,ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಮತ್ತಿತರ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಯಾಗುತ್ತಿರುವುದಾಗಿ ಎಂ.ಶ್ರೀಕಾಂತ್ ಹೇಳಿದರು.ಅವರು ಇಂದು ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿನ ಪ್ರೆಸ್ ಟ್ರಸ್ಟ್ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ನಾನು ಮಾನ್ಯ ಶ್ರೀಯುತ ಹೆಚ್.ಡಿ ದೇವೆಗೌಡರ ಆಶೀರ್ವಾದದಿಂದ  ಸುಮಾರು 20 ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿದ್ದು,ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸಿದ್ದೆನೆ. ಇದೀಗ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೆನೆ ಎಂದರು.

ನಾವು ಈ ಹಿಂದೇ ಶಿವಮೊಗ್ಗ ದಲ್ಲಿ ಪಾಲಿಕೆ ಮತ್ತು ZP ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಆಡಳಿತ ಮಾಡಿದ್ದೆವೆ.ನಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ತೀರ್ಮಾನಕ್ಕೆ ಬಂದಿದ್ದೆನೆ. ಜೆಡಿಎಸ್ ಪಕ್ಷದಲ್ಲಿ ನನ್ನ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಆಗಲಿಲ್ಲ.ಶಿವಮೊಗ್ಗ ಕ್ಷೇತ್ರದ ಮತದಾರರು ಜೆಡಿಎಸ್ ಪಕ್ಷಕ್ಕೆ ಮತಹಾಕಲಿಲ್ಲ. 20 ಸಾವಿರ ದಾಟಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಒಂದು ವರ್ಷದ ಹಿಂದೆ ಸಹ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಹೊರಟಾಗ ಜೆಡಿ ಎಸ್ ವರಿಷ್ಟರು ಬೇಡವೆಂದರು. ಆಗಾಗಿ ಜೆಡಿಎಸ್ ಪಕ್ಷದ ವರಿಷ್ಟರಾದ ದೇವೆಗೌಡರಿಗೆ, ಮತ್ತು ಕುಮಾರಸ್ವಾಮಿಗೆ ಹೇಳದೇ ಇದೀಗ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ಸೇರ್ಪಡೆಗೆ ಮುಂದಾಗಿದ್ದೆನೆ ಎಂದರು.

ಪಕ್ಷ ಸೇರ್ಪಡೆ ಬಗ್ಗೆ ಈಗಾಗಲೇ  ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದರಾಮಯ್ಯ ,ಡಿ.ಕೆ‌.ಶಿವಕುಮಾರ್,ಮಧುಬಂಗಾರಪ್ಪ ಮುಂತಾದ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದೆನೆ ಎಂದರು.

ನಾನು ಜೆಡಿಎಸ್ ಶಿವಮೊಗ್ಗ ಜಿಲ್ಲಾದ್ಯಕ್ಷ ಮತ್ತು ರಾಜ್ಯ ಪ್ರಧಾನಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿಲ್ಲ. ನನಗೆ ಅವರೇನು ಸಂಬಳಕೊಟ್ಟಿಲ್ಲ, ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಪಾರ ಬೆಂಬಲಿಗರೋಂಧಿಗೆ  ಸೇರ್ಪಡೆ ಯಾಗುತ್ತಿರುವುದಾಗಿ ಹೇಳಿದರು.

ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿ ಜೆಡಿಎಸ್‌ಗೆ ಮುಂದಿನ ದಿನಗಳಲ್ಲಿ ಭವಿಷ್ಯ ಕಂಡು ಬಾರದ ಹಿನ್ನೆಲೆಯಲ್ಲಿ ನನ್ನ ಹಾಗೂ ಬೆಂಬಲಿಗರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಸೇರುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ ಎಂದರು.

   ಈಗ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ಮಾಡಿಕೊಂಡಿರುವ ಮೈತ್ರಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ  ಹಾಜರ್ ಇದ್ದ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು, ನಾಗರಾಜ್ ಕಂಕಾರಿ,ಹೆಚ್.ಪಾಲಾಕ್ಷಿ,ಗಾಡಿಕೊಪ್ಪ ರಾಜಣ್ಣ,ಕೆ.ಜಿ.ನವಾಬ್,ಎಸ್.ಡಿ.ಪ್ರಸನ್ನಕುಮಾರ್,ಶ್ಯಾಮು.ಡಿ,ಅನಿಲ್ ಕುಮಾರ್ ವಕೀಲರು, ಆನಂದ್ ವಕೀಲರು, ಉಮೇಶ್,ವಕೀಲರು, ಸಂತೋಷ್ ವಕೀಲರು, ದಿವಾಕರ್,ಪುನಿತ್ ಕುಮಾರ್,ಬಸವರಾಜ್,ಪ್ರಶಾಂತ್ ರಾವ್,ಸಂದೇಶ್,ಸುರೇಶ್.ಹೆಚ್,ಗೋವಿಂದರಾಜ್,ಲೋಕೇಶ್,ರಘುಗೌಡ,ಗುರುಪ್ರಸಾದ್,ಗಂಗಾಧರ್,ದಾನೇಶ್,ಮೋಹನ,ಕಿರಣ,ಶಿವಪ್ಪ, ಎಸ್.ಡಿ.ಶ್ರೀಕಾಂತ್,ಅವಿನಾಶ್ ಇವರೆಲ್ಲರೂ ಸೇರ್ಪಡೆ ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.