*ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ಇಂದಿನ ಜಂಟಿ ಪರಿವೀಕ್ಷಣೆ ಮುಂದೂಡಿಕೆ,*

ಶಿವಮೊಗ್ಗ: ಇಂದು ಸ್ಮಾರ್ಟ್ ಸಿಟಿ ಕಾಮಗಾರಿಗಳ ಜಂಟಿ ಪರಿವೀಕ್ಷಣೆಗೆ ಕರೆದಿದ್ದು ಇಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಹಾಗೂ ನಗರದ ನಾಗರಿಕರು ಹಾಜರಿದ್ದರು, ಶಿವಮೊಗ್ಗ ಸ್ಮಾರ್ಟ್ ಸಿಟಿ  ಲಿಮಿಟೆಡ್ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಪ್ಯಾಕೇಜ್‌ಗಳಲ್ಲಿ ಆಯ್ದ ವಾರ್ಡ್ಗಳಲ್ಲಿ ರಸ್ತೆ, ಚರಂಡಿ, ಫುಟ್‌ಪಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ್‌ವೆನ್ಸಿ, ಸರ್ಕಲ್ ಅಭಿವೃದ್ಧಿ, ಶೌಚಾಲಯ ಇತ್ಯಾದಿಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು ಹಸ್ತಾಂತರಿಸಲು ಶಿವಮೊಗ್ಗ ಮಹಾನಗರ ಪಾಲಿಕೆಯು ಸಂಬಂಧಿಸಿದ  ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಜಂಟಿ ಪರಿವೀಕ್ಷಣೆಯನ್ನು ನಡೆಸಿ, ನ್ಯೂನ್ಯತೆ ಇದ್ದಲ್ಲಿ ಸರಿಪಡಿಸಿಕೊಂಡು ಹಸ್ತಾಂತರಿಸಿಕೊಳ್ಳಲು ನಿರ್ಣಯಿಸಿದೆ.

 ಪ್ರಾಥಮಿಕ ಹಂತವಾಗಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿ. ವತಿಯಿಂದ ಅಳವಡಿಸಲಾಗಿರುವ ಭೂಗತ ಕೇಬಲ್, ಬೀದಿ ದೀಪದ ಕಂಬಗಳ ಸಂಬಂಧ ಮೆಸ್ಕಾಂ, ಶಿವಮೊಗ್ಗ ಮಹಾನಗರ ಪಾಲಿಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಇತರೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ವಾರ್ಡ್ ಸದಸ್ಯರುಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗುತ್ತಿಗೆದಾರರ ಸಮ್ಮುಖದಲ್ಲಿ, ಕಾಮಗಾರಿಗಳ ನ್ಯೂನತೆಗಳ ಬಗ್ಗೆ ಸಾರ್ವಜನಿಕರಿಂದ ನ್ಯೂನತೆಗಳ ದೂರುಗಳನ್ನು ಪಡೆದು ನಂತರ ಎಲ್ಲಾರೊಂದಿಗೆ ಪರಿವೀಕ್ಷಣೆ ಹೋಗಿ ನ್ಯೂನತೆ ಸರಿಪಡಿಸಬಹುದು,

ಯುಜಿ ಕೇಬಲ್ ನಿಂದ ಬೆಂಕಿ ಅನಾವುತಗಳು ಆಗಿವೆ, ನಾಗರೀಕ ಹಿತರಕ್ಷಣಾ ವೇದಿಕೆಯಿಂದ 60 ಕ್ಕೂ ಹೆಚ್ಚು ದಾಖಲೆಗಳೊಂದಿಗೆ ದೂರುಗಳನ್ನು ನೀಡಲಾಗಿದೆ, ಇದುವರೆಗೂ ಯಾವದೂ ಸರಿ ಆಗಿರುವುದಿಲ್ಲ, ಈ ಎಲ್ಲಾ ನ್ಯೂನತೆಗಳನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್ ರವರು ಸರಿ ಪಡಸಿದ ಮೇಲೆ ಪಾಲಿಕೆಗೆ ಹಸ್ತಾಂತರಿಸಿ ಕೊಳ್ಳಲಿ, ಪಾಲಿಕೆಯ ಸಾರ್ವಜನಿಕರ ತೆರಿಗೆ ಹಣವನ್ನು ಈ ನ್ಯೂನತೆಗಳನ್ನು ಸರಿಪಡಿಸಲು ಬಳಸಬಾರದು ಎಂದು ಆಗ್ರಹಿಸಿದರು,

ಆಯುಕ್ತರು ಸಾರ್ವಜನಿಕರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಲೋಪದೋಷಗಳು ಮತ್ತು ನ್ಯೂನತೆಗಳ ದೂರನ್ನು ಕೇಳಲು ಸಾರ್ವಜನಿಕರ ಸಭೆ ಕರೆದು ಅವರ ದೂರುಗಳನ್ನು ಪಡೆದು ನಂತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿವೀಕ್ಷಣೆಗೆ ಹೋಗೋಣ ಎಂದು ಇಂದಿನ ಜಂಟಿ ಪರಿವೀಕ್ಷಣೆ ಕಾರ್ಯಕ್ರಮವನ್ನು ಮುಂದೂಡಿದರು. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ರವರು, ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಎ. ಸತೀಶ್ ಕುಮಾರ್ ಶೆಟ್ಟಿ, ಸೀತಾರಾಮ, ಮಹ್ಮದ್ ಇಕ್ಬಾಲ್, ವಿನೋದ್ ಪೈ, ಅಶೋಕ್ ಕುಮಾರ್, ಚನ್ನವೀರಪ್ಪ ಗಾಮನಗಟ್ಟಿ, ಪ್ರಕಾಶ್, ಮಿತ್ರಣ್ಣ, ಶಿವರಾಜ್, ರಂಗನಾಥ್, ನಾಗೇಶ್ವರ ರಾವ್ ಇನ್ನೂ ಇತರ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.